ಕೊಪ್ಪಳ:ಜಿಲ್ಲಾ ಕೇಂದ್ರದಿಂದ ಕೇವಲ ಐದಾರು ಕಿ.ಮೀ.ದೂರದಲ್ಲಿರುವ ಕೊಪ್ಪಳ ತಾಲ್ಲೂಕಿನ ಹಾಲವರ್ತಿ ಗ್ರಾಮದಲ್ಲಿ ದಲಿತರು ಹೋಟೆಲ್ ಪ್ರವೇಶಿಸಿದರೆ ಹೋಟೆಲ್ ಬಂದ್ ಮಾಡಲಾಗುತ್ತದೆ. ಕ್ಷೌರದ ಅಂಗಡಿಗಳಲ್ಲಿ ಅಸ್ಪೃಶ್ಯತೆ ತಾಂಡವಾಡುತ್ತಿದೆ.
ಗ್ರಾಮದಲ್ಲಿ ಹಲವು ದಿನಗಳಿಂದ ಹೀಗೆ ನಡೆದುಕೊಂಡು ಬರುತ್ತಿರುವುದನ್ನು ಕಂಡು ದಲಿತ ಸಮುದಾಯದ ವಿದ್ಯಾವಂತ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಹೋಟೆಲ್ ಹಾಗೂ ಕ್ಷೌರದ ಅಂಗಡಿಗಳ ಮಾಲೀಕರನ್ನು ತರಾಟೆಗೆ ತೆಗೆದುಕೊಂಡು 14-2-2024 ರಂದು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ದಲಿತರು ಹೋಟೆಲ್‌ಗೆ ಬಂದರೆ ತಿಂದು ಬಿಸಾಡುವ ಪ್ಲೇಟ್‌ನಲ್ಲಿ ಬೇರೆಯವರಿಗೆ ಸ್ಟೀಲ್ ಪ್ಲೇಟ್‌ನಲ್ಲಿ ಆಹಾರ ಕೊಡಲಾಗುತ್ತದೆ.ಕ್ಷೌರಿಕರ ಅಂಗಡಿಗೆ ತೆರಳಿದರೆ ಕ್ಷೌರ ಮಾಡುವುದಿಲ್ಲ ಪ್ರಶ್ನಿಸಿದರೆ ಬೀಗ ಹಾಕಿಕೊಂಡು ಹೋಗಿಬಿಡುತ್ತಾರೆ ಎಂದು ದಲಿತ ಸಮುದಾಯದ ಯುವಕರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ಕೆರೆಯಿದ್ದು ಅಲ್ಲಿನ ನೀರು ದಲಿತರು ಮುಟ್ಟಬಾರದು ಎಂದು ಕೆರೆಗೆ ಕಾವಲುಗಾರನನ್ನು ನಿಯೋಜಿಸಿದ್ದಾರೆ.ಇದನ್ನು ಪ್ರಶ್ನಿಸಿದರೆ ಕೆರೆಯ ನೀರು ಕೊಳಚೆಯಾಗಬಾರದೆಂದು ಹೀಗೆ ಮಾಡಿದ್ದೇವೆಂದು ಸಬೂಬು ಹೇಳುತ್ತಾರೆ ಯುವಕರ ತಂಡದವರು ಆಪಾದಿಸಿದ್ದಾರೆ.
ವರದಿ:ಮಲ್ಲಿಕ್ ಕೊಪ್ಪಳ