ಬಹುದಿನಗಳ ಹಿಂದೆ
ಕತೆಯೊಂದ ಕೇಳಿದ ನೆನಪು..
ಬರಿ ಕತೆಯಲ್ಲ ಪ್ರೇಮಕತೆಯ ಕೇಳಿದ ನೆನಪು…
ಮನದಲಿ ಆತಂಕ
ಬರಿಯ ಗೊಂದಲ ಗೋಜಲು…
ಆಗಲೇ ಕಿವಿಗೆ ಬಿತ್ತು ಒಲವಿನ ನಿಜಕತೆ…
ಇಲ್ಲಿಂದ ಬಹುದೂರ..
ನೋಟಕೂ ನಿಲುಕದ ದೂರದಿ..
ಎರಡು ಮುದ್ದಾದ ಜೀವಗಳು ಒಲವಿನಲಿ….
ಒಬ್ಬರನ್ನೊಬ್ಬರು ಕಾಣದೆ
ಭೇಟಿಯಾಗದೆ ಕಂಡುಂಡ ಪ್ರೇಮ ಕಥೆ..
ಒಲವಿನ ಲೋಕದಲಿ ಅಜರಾಮರವಾಗಿರುವ ನೈಜ ಕಥೆ….
ಇಬ್ಬರೂ ಪ್ರೇಮಿಗಳೇ
ಜೊತೆಗೆ ಬರೆಹದ ಹುಚ್ಚು ಒಂದಿನಿತು..
ಅದರ ಮತ್ತೆ ಪ್ರೇಮವೆಂಬ ಬಂಧವನು ಬೃಂದಾವನವಾಗಿಸಿತು…
ಇಬ್ಬರದೂ ಒಂದೇ ಲೋಕ
ಲೋಕದ ಕಣ್ಣಿನಲಿ ಬೇರೆ ಬೇರೆ
ಲೋಕಗಳ ಮಾಲೀಕರು ನಾವಿಕರಾಗಿ ಕಾಣಿಸಿಕೊಳ್ಳುವರು..
ಯಾರೊಬ್ಬರಿಗೂ ಹೇಳದೆ
ಯಾರೊಬ್ಬರನ್ನೂ ನೋಯಿಸದೆ
ನೋವಿನಲ್ಲಿ ಸುಖಕಂಡು ಹಿತವನೆ ನೀಡಿದ ಪ್ರೇಮಕತೆ…
ಸಾವಿನಲ್ಲೂ ಸಂಧಿಸದೇ
ಬದುಕೆಂಬ ಬವಣೆಯಲ್ಲಿ ಬಂಧಿಯಾದ
ಒಲವೆಂದರೆ ಏನೆಂದು ಹೇಳಿದ ಸುಂದರ ಸ್ವಪ್ನಕತೆ…
ಹುಚ್ಚು ಹುಚ್ಚಾಗಿ
ಒಲವಿನ ಪರಮಾರ್ಥವನೇ…ಹಾಳುಗೆಡಹುವವರ
ನಡುವೆ ತಾವರೆಯಂತೆ ಅರಳಿ ಕಂಗೊಳಿಸುತ್ತಿರುವ… ಪ್ರೇಮಕತೆ
-ಲೋಹಿತೇಶ್ವರಿ ಎಸ್ ಪಿ