ಕಲಬುರಗಿ ಜಿಲ್ಲೆಯ ಕಲಬುರಗಿ ತಾಲ್ಲೂಕಿನ ಹೊನ್ನಕಿರಣಗಿ ಗ್ರಾಮದ ಜಾನಪದದ ಹಿರಿಯ ಕಲಾವಿದೆ ಶ್ರೀಮತಿ ಶರಣಮ್ಮ.ಪಿ.ಸಜ್ಜನ ಅವರು ಜಾನಪದ ಕಲೆ ಉಳಿಸಿ ಬೆಳೆಸುತ್ತಿರುವ ಸೇವೆಯನ್ನು ಗುರುತಿಸಿ ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ ಕಮತಗಿ ಅವರು ಹಮ್ಮಿಕೊಂಡ ದ್ವೀತಿಯ ಮಹಿಳಾ ಸಾಹಿತ್ಯ ಸಮ್ಮೇಳನ 2024 ರ ರಾಜ್ಯ ಮಟ್ಟದ ಕವಿಗೋಷ್ಟಿ,ವಿಚಾರಗೋಷ್ಟಿ,ಪುಸ್ತಕ ಬಿಡುಗಡೆ ಸಂವಾದ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇದೇ ದಿನಾಂಕ 17-02-2024 ರಂದು ಶನಿವಾರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಂಭಾಗಣದಲ್ಲಿ ಶ್ರೀಮತಿ ಶರಣಮ್ಮ.ಪಿ.ಸಜ್ಜನ ಅವರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಲಾಗುವುದು ಎಂದು ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷರಾದ ಎಂ.ರಮೇಶ ಕಮತಗಿ ಅವರು ಪ್ರತಿಕಾ ಪ್ರಕಟಣೆಗೆ ತಿಳಿಸಿದ್ದಾರೆ.
