ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಗುರುವಾರ ಸಂಜೆ ಸಂವಿಧಾನದ ಜಾಗೃತಿ ಜಾಥಾವನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತ ಮಾಡಿಕೊಂಡು ಗ್ರಾಮದ ರಾಜ ಬೀದಿಯಲ್ಲಿ ಶಾಲಾ ಮಕ್ಕಳ ಕೋಲಾಟ,ದೇಶ ಭಕ್ತಿ ಗೀತೆ,ಕಳಸ,ಕುಂಭ,ಡೊಳ್ಳು,ಜನಪದ ಸಡಗರವು ಹಬ್ಬದ ವಾತರಣದಂತೆ ಹಲವು ಬಗೆಯ ನೃತ್ಯದೊಂದಿಗೆ ಅದ್ದೂರಿಯಾಗಿ ಸಂವಿಧಾನ ಜಾಗೃತಿಯ ಜಾಥಾವು ಜರುಗಿತು.
ಸಂವಿಧಾನ ಪೀಠಿಕೆಯನ್ನು ಡಣಾಪುರ ಸರಕಾರಿ ಶಾಲೆಯ ಅಕ್ಷತಾ ಎಂಟನೇ ತರಗತಿ ವಿದ್ಯಾರ್ಥಿನಿ ಓದಿ ಹೆಳಿದರು.
ಡಾ.ಬಿ.ಆರ್ ಅಂಬೇಡ್ಕರ್ ಅವರ ವೇಷಭೂಷಣದಲ್ಲಿ ಭೀಮೇಶ ವಿದ್ಯಾರ್ಥಿ ಧರಿಸಿದ್ದು ನೋಡುಗರನ್ನು ಗಮನಸೆಳೆದಿತ್ತು.ಶಾಲೆಯ ಮಕ್ಕಳು ಶಾರದಾ ಮಾತೆ,ಸರಸ್ವತಿ,ಕಿತ್ತೂರು ರಾಣಿ ಚೆನ್ನಮ್ಮ,ಸಂಗೊಳ್ಳಿ ರಾಯಣ್ಣ,ದೇಶ ರಕ್ಷಣೆಯಲ್ಲಿ ಇರುವ ಸೈನಿಕ ಇನ್ನಿತರ ದೇಶಭಕ್ತರ ವೇಷ ಧರಿಸಿದ್ದು ವಿಶೇಷವಾಗಿ ಗಮನಸೆಳೆದಿತ್ತು.ಮಕ್ಕಳ ನೃತ್ಯ ದೇಶ ಭಕ್ತಿಗೀತೆ ಹಾಡುಗಳು ಹಾಗೂ ಕೋಲಾಟ ನೋಡುಗರನ್ನು ಗಮನಸೆಳೆದಿದ್ದವು ಸಂವಿಧಾನ ಜಾಗೃತಿ ಜಾಥಾಕ್ಕೆ ಮೆರಗು ತಂದವು.
ಸಂವಿಧಾನ ಜಾಗೃತಿ ಜಾಥಾವನ್ನು ಡಣಾಪುರ ಗ್ರಾಂ.ಪಂಚಾಯಿತಿ ವತಿಯಿಂದ ಗ್ರಾಂ.ಪ.ಅಧ್ಯಕ್ಷರಾದ ಪಿಲ್ಲಿ ಗಣೇಶ ಅವರು ಅಂಬೇಡ್ಕರ್ ಅವರ ಸಂವಿಧಾನ ಜಾಗೃತಿ ರಥಕ್ಕೆ ಪುಷ್ಪ ಹಾಕುವ ಮೂಲಕ ಡಣಾಪೂರ ಗ್ರಾಮಕ್ಕೆ ಸ್ವಾಗತ ಮಾಡಿಕೊಂಡರು. ಗ್ರಾಂ.ಪ.ಉಪಾದ್ಯಕ್ಷ ಅಯ್ಯಮ್ಮ ಹಾಗೂ ಪಿಡಿಒ ವತ್ಸಲಾ ಗ್ರಾಂ.ಪಂ.ಸದಸ್ಯರು ಗ್ರಾಂ.ಪಂ.ಎಲ್ಲಾ ಅಧಿಕಾರಿಗಳು ಗ್ರಾಮದ ಹಿರಿಯರಾದ ಪಕೀರಪ್ಪ , ಮಲ್ಲನಗೌಡ,ಅಯ್ಯಪ್ಪ,ಚಿದಾನಂದಪ್ಪ,ಹೊನ್ನುರಪ್ಪ, ಹುಲುಗಪ್ಪ,ಶಫೀ ಹಾಗೂ ಸಮಾಜ ಕಲ್ಯಾಣ ಇಲಾಖೆ ಶಿಕ್ಷಣ ಇಲಾಖೆಯವರು ಹಾಗೂ ಶಾಲೆಯ ಮುಖ್ಯ ಗುರುಗಳಾದ ಹನುಮಂತಪ್ಪ,ವೆಂಕಟೇಶ ಶಿಕ್ಷಕ ಶಿಕ್ಷಕಿಯರು ಆಶಾ,ಅಂಗನವಾಡಿ ಕಾರ್ಯಕರ್ತರು, ಗ್ರಾಮದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಗ್ರಾಮದ ನಾನ ಇಲಾಖೆಯ ಸಿಬ್ಬಂದಿ ವರ್ಗ ಯುವಕರು ಹಿರಿಯರು ಶಾಲೆಯ ಮುದ್ದು ಮಕ್ಕಳು ಭಾಗಿಯಾಗಿ ಯಶಸ್ವಿಗೊಳಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.