ಕೊಪ್ಪಳ ಕಾರಟಗಿ ತಾಲೂಕಿನ ಹುಳಿಕ್ಯಾಳ ಕ್ಯಾಂಪಿನಲ್ಲಿ ನೂತನ ಹಾಲು ಉತ್ಪದಕರ ಸಹಕಾರ ಸಂಘದ ಪೂಜಾ ಕಾರ್ಯಕ್ರಮವನ್ನು ರಾಯಚೂರು,ಬಳ್ಳಾರಿ,ವಿಜಯನಗರ,ಕೊಪ್ಪಳ ಜಿಲ್ಲೆಯ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷರು /ನಿರ್ದೇಶಕರಾದ ಎನ್.ಸತ್ಯನಾರಾಯಣ ಮತ್ತು ಎಂ ಸತ್ಯನಾರಾಯಣ ಇವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ನೆರವೇರಿತು,ಒಕ್ಕೂಟದ ಅಧಿಕಾರಿಗಳಿಗೆ ಸನ್ಮಾನ ಮಾತನಾಡಿದ ಎo. ಸತ್ಯನಾರಾಯಣರವರು ಸಹಕಾರ ಸಂಘಗಳು,ಖಾಸಗಿ ಡೇರಿಯ ಹಾವಳಿಯಿಂದ,ಸಂಘದ ಅಳಿವು ಉಳಿವು, ಸಂಘದ ಸದಸ್ಯರಲ್ಲಿದೆ,ಕಾನೂನು ನಿಯಮ ಉಲ್ಲಂಘಿಸಿ ಹಾಲು ಸಂಗ್ರಹಣೆ ಮಾಡುತ್ತಿದ್ದಾರೆ, ಯಾವುದೇ ಲೆಕ್ಕಪತ್ರ ಇಲ್ಲದೆ,ರೈತರಿಗೆ ಮೋಸ ಮಾಡುತ್ತಿದ್ದು,ಖಾಸಗಿ ಡೈರಿಯ ಮಾಲೀಕ ರೈತರಿಗೆ ಸ್ಪಂದನೆ ನೀಡುವುದಿಲ್ಲ,ನಮ್ಮ ಸಂಘದಲ್ಲಿ ರೈತರಿಗೆ ಸ್ಪಂದನೆ ಮಾಡುವ ಮೂಲಕ,ಒಕ್ಕೂಟದ ಮತ್ತು ಸಂಘದ ಸರಕಾರದ ನಿಯಮದಡಿಯಲ್ಲಿ ಯೋಜನೆಗಳನ್ನು ಅನುಕೂಲಗಳನ್ನು ಮಾಡಲಾಗುತ್ತದೆ,ಕೆಲ ಗ್ರಾಮದಲ್ಲಿ ರಾಜಕೀಯ ದುರುದ್ದೇಶದಿಂದ,ಖಾಸಗಿ ಡೇರಿಗಳಿಗೆ ಅನುವು ಮಾಡಿದ್ದಾರೆ,ಸಂಘದ ಸದಸ್ಯರು ಇದನ್ನು ಅರಿತು, ಸಂಘಕ್ಕೆ ಹಾಲು ಸರಬರಾಜು ಮಾಡಬೇಕು,ಸಹಕಾರ ಸಂಘದ ಅಳಿವು ಉಳಿವು ಗ್ರಾಮದ ಹಿರಿಯರು ಹಾಗೂ ಸಂಘದ ಸದಸ್ಯರಲ್ಲಿದೆ ಎಂದರು ತಾಲೂಕಿನ ಕ್ಷೇತ್ರ ಸಹಾಯಕರಾದ ದೇವೇಂದ್ರಪ್ಪ ಮಾತನಾಡಿ, ಸಂಘದ ಆಡಳಿತ ಮಂಡಳಿಯವರ/ಸದಸ್ಯರ ನೆರವಿನಿಂದ ಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು.ಸಂಘಗಳಲ್ಲಿ ರೈತರಿಗೆ ಬರುವಂತ ಯೋಜನೆಗಳನ್ನು ಸರಕಾರದ ನಿಯಮದ ಅಡಿಯಲ್ಲಿ ಸಹಕಾರ ಸಂಘಗಳ ರಿಯಾಯಿತಿ ದರದಲ್ಲಿ ರೈತರ ಈ ಯೋಜನೆಗಳನ್ನು ಪಡೆದುಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷರು ನಿರ್ದೇಶಕರಾದ ಎನ್ ಸತ್ಯನಾರಾಯಣ ಎಂ ಸತ್ಯನಾರಾಯಣ,ಶಿವಪ್ಪ ವಾದಿ,ಶ್ರೀಮತಿ ಜಿ.ಕವಿತಾ ಕೊಪ್ಪಳ ಜಿಲ್ಲೆ ಒಕ್ಕೂಟದ ಉಪ ನಿರ್ದೇಶಕರಾದ ಡಾ.ಗಂಗಾಧರ್,ತಾಲೂಕು ಕ್ಷೇತ್ರ ಸಹಾಯಕರಾದ,ಎ.ನಾರಾಯಣ್,ದೇವೇಂದ್ರಪ್ಪ,ಗವಿ ಸಿದ್ದಪ್ಪ,ಸಂಘದ ಅಧ್ಯಕ್ಷರಾದ ಬಲರಾಮ ಸೇರಿದಂತೆ ಆಡಳಿತ ಮಂಡಳಿ ನಿರ್ದೇಶಕರಾದ ಸುರೇಶ್ ಕುಮಾರ್,ಗದ್ದಿ ಪರಸಪ್ಪ,ಶೆಡ್ಲಗೆರಾ ನೀಲಪ್ಪ,ಶ್ರೀನಿವಾಸ್, ರಾಮರಾವ್,ಶ್ರೀನಿವಾಸ, ರಾಜಸಬ,ಅಮರೇಶ,ಅರ್ಜುನ,/ಸಂಘದ ಸದಸ್ಯರು, ಮಹಿಳೆಯರು ಗ್ರಾಮದ ಗುರು ಹಿರಿಯರು, ಯುವಕರು ಭಾಗಿಯಾಗಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.