ಮುಂಡಗೋಡದಲ್ಲಿ ಹೊರ ರಾಜ್ಯದವರ ಕ್ಷೌರಿಕ ಅಂಗಡಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಡಗೋಡ ತಾಲೂಕ ಸವಿತಾ ಸಮಾಜದವರು ತಾಲೂಕಾ ಕ್ಷೌರಿಕ ಸಮಾಜದ ವತಿಯಿಂದ ಮುಂಡಗೋಡ ತಹಶೀಲ್ದಾರ್,ಮುಂಡಗೋಡ ಸಿಪಿಐ,ಶಾಸಕರಾದ ಶಿವರಾಮ್ ಹೆಬ್ಬಾರ್ ಅವರುಗಳಿಗೆ ಹೊರ ರಾಜ್ಯದವರ ಅಂಗಡಿಗಳ ಮೇಲೆ ನಿಯಂತ್ರಣ ಹಾಕಬೇಕು ಎಂದು ಮನವಿ ಸಲ್ಲಿಸಿದ್ದಾರೆ.
ಅವರುಗಳು ಸಲ್ಲಿಸಿರುವ ಮನವಿಯಲ್ಲಿ “ನಾವುಗಳು ನೂರಾರು ವರ್ಷಗಳಿಂದ ಕ್ಷೌರಿಕ ವೃತ್ತಿಯನ್ನೆ ಜೀವನವನ್ನು ನಡೆಸುತ್ತಿದ್ದೇವೆ.ಕಾರಣ ಈಗ ಹೊರರಾಜ್ಯದಿಂದ ಬಂದಂತಹ ಬಂಡವಾಳಶಾಹಿಗಳು ಮುಂಡಗೋಡದಲ್ಲಿ ಕ್ಷೌರಿಕ ಅಂಗಡಿಗಳನ್ನು ತರೆದು ನಮ್ಮ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದಾರೆ ನಮಗೆ ಜೀವನಕ್ಕೆ ಈ ವೃತ್ತಿಯೇ ಆಧಾರವಾಗಿದೆ.ಜೀವನ ನಡೆಸಲು ತುಂಬ ಕಷ್ಟಕರವಾಗಿದೆ ಇಂತಹ ಸಂದರ್ಭದಲ್ಲಿ ಹೊರರಾಜ್ಯದಿಂದ ಬಂದಂತಹ ಕ್ಷೌರಿಕ ಅಂಗಡಿಗಳನ್ನು ಬಂದ ಮಾಡಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಎಂದು ಬರೆದುಕೊಂಡಿದ್ದಾರೆ.
ಇದೆ ಸಂದರ್ಭದಲ್ಲಿ ಯಲ್ಲಾಪುರ ರಸ್ತೆಯಲ್ಲಿರುವ “ದಿಲ್ಲಿ ದರ್ಬಾರ್” ಎಂಬ ಕ್ಷೌರ ಅಂಗಡಿಗೆ ಸವಿತಾ ಕ್ಷೇಮಾಭಿವೃದ್ಧಿ ಸಂಘ ದವರು ಪರಿಶೀಲನೆಗೆ ತೆರಳಿದಾಗ ಅಪ್ರಾಪ್ತ ವಯಸ್ಸಿನ 16 ವರ್ಷದ ಹೊರ ರಾಜ್ಯದ ಬಾಲಕರು ಇದ್ದದ್ದು ಗಮನಕ್ಕೆ ಬಂದಿದೆ.
ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಳ್ಳುವ ಇಂತಹ ಅಂಗಡಿಗಳ ಮೇಲೆ ಕ್ರಮ ಕೈಗೊಂಡು ಹೊರ ರಾಜ್ಯದವರ ಅಂಗಡಿಗಳನ್ನು ಬಂದ್ ಮಾಡಿಸಬೇಕೆಂದು ಸಮಾಜದ ಮುಖಂಡ ಮಹೇಶ್ ಹಡಪದ್ ಹಾಗೂ ಸಮಸ್ತ ಸವಿತಾ ಕ್ಷೇಮಾಭಿವೃದ್ಧಿ ಸಂಘದವರು ಒತ್ತಾಯ ಮಾಡಿದರು.