ಕೊಪ್ಪಳ:ಕಳೆದ ಹತ್ತು ವರ್ಷಗಳಿಂದ ಗ್ರಾಮ ಪಂಚಾಯತಿಯ ಪಬ್ಲಿಕ್ ಟ್ಯಾಬ್ ನಿಂದ (ಸಾರ್ವಜನಿಕ ನಲ್ಲಿಯಿಂದ)ನೀರು ಕದಿಯುತ್ತಿದ್ದ ಸೂರ್ಯಕಾಂತ ಹೊಸಮನಿ ಎಂಬ ನೀರು ಕಳ್ಳನಿಗೆ ಕಾರಟಗಿ ತಾಲೂಕಿನ ಸಿದ್ಧಾಪುರ ಗ್ರಾಮ ಪಂಚಾಯತಿಯು ನೋಟಿಸ್ ಜಾರಿಗೊಳಿಸಿದ ಘಟನೆ ನಡೆದಿದೆ.
ಕಳೆದ ಹತ್ತು ವರ್ಷಗಳಿಂದ ಸಾರ್ವಜನಿಕರ ನಲ್ಲಿಯಿಂದ ಕಾನೂನು ಬಾಹಿರವಾಗಿ ಪೈಪ್ ಲೈನ್ ಅಳವಡಿಸಿಕೊಂಡು,ಪಂಚಾಯತಿಯ ನೀರು ಕದಿಯುತ್ತಿದ್ದ ಸುರ್ಯಕಾಂತ ಹೊಸಮನಿ ಎಂಬ ನೀರು ಕಳ್ಳನಿಗೆ ಅನಧಿಕೃತ ಪೈಪ್ ಲೈನ್ ತೆರವುಗೊಳಿಸುವಂತೆ ಹಲವಾರು ಬಾರಿ ಮೌಖಿಕವಾಗಿ ಸೂಚಿಸಿದ್ದರೂ ಸಹ,ಪಂಚಾಯತಿಯ ಅಧಿಕಾರಿಗಳಿಗೆ ನಯಾ ಪೈಸೆಯಷ್ಟು ಕಿಮ್ಮತ್ತು ಕೊಡದೆ, ಸೂಚನೆಯನ್ನು ಗಾಳಿಗೆ ತೂರಿ,ಹತ್ತು ವರ್ಷಗಳಿಂದ ನಿರಂತರವಾಗಿ ನೀರು ಕದಿಯುತ್ತಿದ್ದನು.
ಹೀಗೆ ಹತ್ತು ವರ್ಷಗಳಿಂದ ಸಾರ್ವಜನಿಕ ನಲ್ಲಿಯಿಂದ ಅನಧಿಕೃತ ಪೈಪ್ ಲೈನ್ ಕಲೆಕ್ಷನ್ ಅಳವಡಿಸಿಕೊಂಡು, ನೀರು ಕದಿಯುತ್ತಿರುವ ಈ ನೀರು ಕಳ್ಳನ ಮೇಲೆ ಕ್ರಿಮಿನಲ್ ಮೊಕೊದ್ಧಮೆ ದಾಖಲಿಸಿ,ಪೈಪ್ ಲೈನ್ ತೆರವುಗೊಳಿಸಿ,ಹತ್ತು ವರ್ಷಗಳಿಂದ ಕದ್ದಿರುವ ನೀರಿನ ಶುಲ್ಕ,ಕರ,ದಂಡ ವಸೂಲಿ ಮಾಡಿ,ಶಿಕ್ಷೆಗೆ ಗುರಿ ಪಡಿಸಿ ಎಂದು ಸಾರ್ವಜನಿಕರು ದೂರು ಸಲ್ಲಿಸಿ,ಒತ್ತಾಯಿಸಿದ ಮೇಲೆ ಎಚ್ಚರಗೊಂಡ ಪಂಚಾಯತಿಯ ಅಧಿಕಾರಿಗಳು,ಅನಧಿಕೃತ ಪೈಪ್ ಲೈನ್ ಕಲೆಕ್ಷನ್ ತೆಗೆದು ಹಾಕಬೇಕು,ಇಲ್ಲವಾದಲ್ಲಿ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕಾರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನೀರು ಕಳ್ಳನಿಗೆ ನೋಟಿಸ್ ಜಾರಿಗೊಳಿಸಿದೆ.