ಸಿಂಧನೂರು:ಬಹಳ ಹಿಂದಿನಿಂದ ಬಂದಿರುವ ಕೆಲವು ಮೂಢನಂಬಿಕೆ,ಆಚರಣೆಗಳನ್ನು ಬಿಟ್ಟು ವೈಜ್ಞಾನಿಕ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ಕರೆ ನೀಡಿದರು.
ಅವರು ನಗರದ ಆರ್.ಜಿ.ಎಮ್.ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ರಾಯಚೂರು,ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ರಾಯಚೂರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸಿಂಧನೂರು ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ವಿವಿಧ ವೈಜ್ಞಾನಿಕ ತರಬೇತಿ ಮತ್ತು ವಿಜ್ಞಾನ ಜಾಗೃತಿ’ ಕಾರ್ಯಕ್ರಮದ ಅಂಗವಾಗಿ ‘ವಿದ್ಯಾರ್ಥಿಗಳಿಗಾಗಿ ವೈಜ್ಞಾನಿಕ ಮನೋಭಾವ ಮತ್ತು ಉದ್ವೇಗವನ್ನು ಅಭಿವೃದ್ಧಿಪಡಿಸುವ ಕಾರ್ಯಕ್ರಮ’ಉದ್ಘಾಟಿಸಿ ಮಾತನಾಡುತ್ತಾ,ನಾವು ಯಾವುದನ್ನು ಪ್ರಶ್ನೆ ಮಾಡದೇ ಒಪ್ಪಿಕೊಳ್ಳಬಾರೆಂದು ಗೌತಮ ಬುದ್ಧರು ಹೇಳಿದ್ದಾರೆ.ವಿಜ್ಞಾನವೂ ಸಹ ಇದನ್ನೇ ಹೇಳುತ್ತದೆ. ಪ್ರತಿಯೊಂದು ಕ್ರಿಯೆಗೆ ಕಾರ್ಯ-ಕಾರಣ ಸಂಬಂಧವಿರುತ್ತದೆ ಎನ್ನುವುದನ್ನು ನಾವು ಮನಗಾಣಬೇಕು,ಪವಾಡ,ಅತಿಂದ್ರೀಯ ಶಕ್ತಿ ಎನ್ನುವುದಕ್ಕೆ ಯಾವುದೇ ಆಧಾರಗಳಿಲ್ಲ.ಪರಿಸರದಲ್ಲಿ ಏನೇ ಘಟಿಸಿದರೂ ವಿಜ್ಞಾನದ ತಳಹದಿಯ ಮೇಲೆಯೇ ಸಂಭವಿಸುತ್ತದೆ ಎನ್ನುವುದನ್ನು ನಾವು ಯಾರೂ ಮರೆಯಬಾರದು.ಇಂದಿನ ವಿದ್ಯಾರ್ಥಿ-ಯುವಜನರು ಸಂವಿಧಾನದ ಆಶಯದಂತೆ ವೈಜ್ಞಾನಿಕ ಮನೋಭಾವನೆಯನ್ನು ಅಳವಡಿಸಿಕೊಂಡು ಕರ್ತವ್ಯ ಪಾಲಿಸಬೇಕೆಂದು ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾದ ಬಳ್ಳಾರಿ ಜಿಲ್ಲೆಯ ಮೋಕಾ ಕೆ.ಪಿ.ಎಸ್.ಶಾಲೆಯ ಎಸ್.ಎಂ.ಹಿರೇಮಠ ಅವರು ವಿಜ್ಞಾನ ಗೀತೆಗಳ ಕರಿತು ಉಪನ್ಯಾಸ ಮಾಡಿ ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿಜಯನಗರ ಜಿಲ್ಲೆಯ ಪೂಜಾರಹಳ್ಳಿ ಪ್ರೌಢಶಾಲೆಯ ನವೀನಕುಮಾರ ಮತ್ತು ಸಿಂಧನೂರು ಜ್ಞಾನಜ್ಯೋತಿ ಪ.ಪೂ.ಕಾಲೇಜಿನ ಉಪನ್ಯಾಸಕ ಸುರೇಶ ‘ವೈಜ್ಞಾನಿಕ ಮನೋಭಾವನೆ’ ಕುರಿತು ಉಪನ್ಯಾಸ ನೀಡಿ, ಭಾಗವಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ವೇದಿಕೆಯ ಮೇಲೆ ಕ್ಷೇತ್ರ ಸಮನ್ವಯಾಧಿಕಾರಿ ಬಸಲಿಂಗಪ್ಪ,ಶಾಲೆಯ ಮುಖ್ಯಗುರು ಪಾಂಡುರಂಗ ದೇಸಾಯಿ,ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಮಲ್ಲಪ್ಪ,ತಾಲೂಕಾ ನೋಡಲ್ ಅಧಿಕಾರಿ ರವಿ ಪವಾರ,ವಿಜ್ಞಾನ ವೇದಿಕೆಯ ಅಧ್ಯಕ್ಷ ಮಲ್ಲಿಕಾರ್ಜುನ ಜೆಟ್ಟೇರ,ಬಿ.ಆರ್.ಪಿ.ಮೈನುದ್ದೀನ್,ಸಿ,ಆರ್.ಪಿಗಳಾದ ಬಸವರಾಜ ಅಂಗಡಿ,ಚನ್ನವೀರಗೌಡ,ಪ್ರಮೋದ, ಹನುಮಂತ,ವಿಜ್ಞಾನ ಶಿಕ್ಷಕರಾದ ದುರ್ಗಾಪ್ರಸಾದ, ಫಯಾಜ್,ಮಂಜುನಾಥ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.