ವಾರಗಿತ್ತಿ ಎಂಬ ಕನ್ನಡದ ಸಂಬಂಧವಾಚಕ ರೂಪವು ರಚನೆ ಹಾಗೂ ಬಳಕೆಯಲ್ಲಿ ಬದಲಾವಣೆ ಹೊಂದಿರುವುದು ಕನ್ನಡ ಸಮಾಜದಲ್ಲಿ ಕಾಣುತ್ತೇವೆ. ಮಾದ್ಯಮಗಳ ಪ್ರಭಾವ ಕನ್ನಡ ನುಡಿಯ ಮೇಲೆ ಹೇಗೆಲ್ಲಾ ಪರಿಣಾಮ ಬೀರಿದೆ ಎಂಬುದು ಇಂತಹ ರೂಪಗಳನ್ನು ಗಮನಿಸಿದಾಗ ತಿಳಿಯುತ್ತದೆ.ಈ ಹಿಂದಿನ Bro ಎಂಬ ರೂಪವಾಗಿರಲಿ,ಈ WARಗಿತ್ತಿ ಎಂಬ ರೂಪವಾಗಿರಲಿ ಎಲ್ಲವೂ ಮಾದ್ಯಮದ ಪ್ರಭಾವದಿಂದಲೇ ರೂಪುಗೊಂಡಿವೆ.
ವಾರಗಿತ್ತಿ ಓರಗಿತ್ತಿ ಎಂದು ಬಳಕೆಯಾಗುವ ಈ ಸಂಬಂಧವಾಚಕ ಕನ್ನಡ ಸಮಾಜದಲ್ಲಿ ಅಣ್ಣ ತಮ್ಮಂದಿರ ಹೆಂಡತಿಯರ ನಡುವಿನ ಸಂಬಂಧವನ್ನು ಸೂಚಿಸುತ್ತದೆ.ಆದರೆ,ಅವರ ನಡುವಿನ ಬಾಂಧವ್ಯ ಇಲ್ಲವೇ ಆ ಸಂಬಂಧದ ಸ್ವರೂಪ ಹೇಗಿದೆ ಎಂಬ ವಿಷಯವನ್ನು ತಿಳಿಸುವ ಕಾರಣಕ್ಕಾಗಿ ಇಂಗ್ಲಿಶಿನ WAR ಮತ್ತು ಕನ್ನಡದ ಗಿತ್ತಿ ಎಂಬ ರೂಪವನ್ನು ಬಳಸಿ WARಗಿತ್ತಿ ಎಂಬ ಪದವನ್ನು ರಚಿಸಲಾಗಿದೆ.
ಇಂಗ್ಲಿಶಿನ WAR ಮತ್ತು ಕನ್ನಡದ ವಾರಗಿತ್ತಿ ಎಂಬ ರೂಪದಲ್ಲಿನ ಗಿತ್ತಿ ಎಂಬ ರೂಪವನ್ನು ಬಳಸಿ WARಗಿತ್ತಿ ಎಂಬ ಪದ ರಚಿಸಿ ಕಿರುಚಿತ್ರವೊಂದನ್ನು ನಿರ್ಮಿಸಿರುವುದನ್ನು ಕಾಣುತ್ತೇವೆ.ಈ ಚಿತ್ರ ಸಮಾಜ ವಾರಗಿತ್ತಿಯರನ್ನು ನೋಡುವ ದೃಷ್ಟಿಕೋನವನ್ನು ಆಧರಿಸಿದೆ ಎಂದರೆ ತಪ್ಪಾಗಲಾರದು.
ಈ ರೂಪ ಶಿಕ್ಷಿತ ವಲಯದಲ್ಲಿಯೇ ಬಳಕೆಗೊಳ್ಳುತ್ತಿದೆ. ಇನ್ನು WAR ಎಂಬ ಪದದ ಅರ್ಥ ತಿಳಿದವರು ಈ ರೂಪವನ್ನು ವ್ಯಂಗ್ಯಾರ್ಥದಲ್ಲಿ ಬಳಸುತ್ತಾರೆ.
ರಚನೆ:ಲೋಹಿತೇಶ್ವರಿ ಎಸ್ ಪಿ