ಹೆಣ್ಣಿನ ಕಾಲ್ಗೆಜ್ಜೆ ನಾದವು
ಗಂಡಿನ ಹೃದಯದ ಝೆoಕಾರವು
ಮನಸ್ಸಿನಲ್ಲಿ ತೊಳಲಾಟವು
ಧ್ಯಾನಾಸಕ್ತರಿಗೆ ಮನ ಭಂಗವು
ಪುಟ್ಟ ಹೆಣ್ಮಕ್ಕಳ ನಾದ ತಾಯಿ ತಂದೆಯರಿಗೆ ಆನಂದವು
ಶೋಡಶಿಯರು ಓಡಾಡಲು ಹುಚ್ಚು ಖೋಡಿ ಮನಸದು
ಹರೆಯದ ಬಾಲೆ ಬರಲು ಎಲ್ಲರ ದೃಷ್ಟಿ ಗೆಜ್ಜೆ ಮೇಲಿರುವುದು
ಸತಿಯರ ಗೆಜ್ಜೆ ನಾದ ಪತಿಯ ಎದೆ ಝಲ್ ಎನುವುದು
ಈ ನಾದಕ್ಕೆ ಮನ ಸೋಲದವ ರ್ಯಾರು
ಋಷಿಮುನಿಗಳೇ ಶರಣಾದರು
ಸಾದು ಸಜ್ಜನರು ಸಮ್ಮೋಹಗೊಂಡರು
ಇನ್ನು ಪಡ್ಡೆ ಹುಡುಗರು ಹಿಂಬಾಲಿಸಿದರು.
ಭರತ ನಾಟ್ಯಕೆ ಇಂಪಾಗಿ ಸೇರಿದೆ
ಲಲನಾ ಮಣಿಯರಿಗೆ ಹೃನ್ಮನ ತಣಿಸಿದೆ
ಮುತ್ತೈದೆಯರಿಗೆ ಕಾಲಿನ ಆಭರಣವಾಗಿದೆ
ಮಹಿಳಾ ಕುಲಕ್ಕೆ ನಾದದ ಲಜ್ಜೆಯ ಸಜ್ಜೆಯಾದೆ.
✍️ಮಳೆಬಿಲ್ಲು ಲೀಲಾ ಗುರುರಾಜ್,ತುಮಕೂರು.