ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸುಕ್ಷೇತ್ರ ಬಳಗೇರಿ ಬಳ್ಳೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವ ಹಾಗೂ ರಥೋತ್ಸವದಲ್ಲಿ ನಂದಿಕೋಲು, ಸಕಲವಾದ್ಯಗಳೊಂದಿಗೆ ಜಿಲ್ಲೆಯ ಸುತ್ತಮುತ್ತಲಿನ
ಗ್ರಾಮಗಳ ಅಪಾರ ಭಕ್ತರು ಭಾಗವಹಿಸಿ ಭಕ್ತಿಯಿಂದ ಉತ್ತತ್ತಿ,ಹಣ್ಣು ಅರ್ಪಿಸಿ ಪುನಿತರಾದರು.ಜಾತ್ರೆಯ ಅಂಗವಾಗಿ ೧೫ ನವಜೋಡಿಗಳು ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬಳಗೇರಿ,ಕುಕನೂರ ಸೇರಿದಂತೆ ವಿವಿದ ಮಠದ ಪೂಜ್ಯರು ಭಾಗವಹಿಸಿ ನವದಂಪತಿಗಳಿಗೆ ಆರ್ಶಿವಾದ ಮಾಡಿ ಹಾರೈಸಿದರು. ಜಾತ್ರೆಯಲ್ಲಿ ಭಾಗವಹಿಸಿದ ಭಕ್ತರು ಜಿಲೇಬಿ,ಬೂಂದಿ ಇದರ ಜೊತೆಗೆ ಸಿಹಿ ಪದಾರ್ಥಗಳು,ಮಿರ್ಚಿ ಸೇರಿದಂತೆ ಅನ್ನ ಪ್ರಸಾದವನ್ನು ಸ್ವೀಕರಿಸಿದರು .
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.