ಕೊಪ್ಪಳ:ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಮಹಿಳಾ ಪದವಿ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಡಾ.ನರಸಿಂಹ ಗುಂಜಹಳ್ಳಿ ಅವರ ಸಂಪಾದಕತ್ವದಲ್ಲಿ ಮಹಿಳಾ ಟೈಮ್ಸ್ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಆರಂಭದಲ್ಲಿ ಕುಮಾರಿ ಬಸವಶ್ರೀ ಅವರು ಪ್ರಾರ್ಥನೆ ಗೀತೆ ಹಾಡಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸರಕಾರಿ ಅಭಿಯೋಜಕಿ ವಕೀಲೆ ಶ್ರೀಮತಿ ಗೌರಮ್ಮ ದೇಸಾಯಿ ಮಾತನಾಡಿ “ಇಂದು ಮಹಿಳೆಯರು ಕೇವಲ ಶಿಕ್ಷಣ ಪಡೆದರೆ ಸಾಲದು,ಅವರೂ ಮುಖ್ಯ ವಾಹಿನಿಗೆ ಬರಬೇಕು,ಆಗಲೇ ಸಮಾಜದಲ್ಲಿ ಮಹಿಳೆಯರ ಅಭಿವೃದ್ಧಿ ಸಾಧ್ಯ”ಎಂದರು.
ಕನ್ನಡ ವಿಭಾಗದ ಡಾ.ಹುಲಿಗೆಮ್ಮ ಬಿ.ಪ್ರಾಸ್ತಾವಿಕವಾಗಿ ಮಾತನಾಡಿದರು.ವೇದಿಕೆಯಲ್ಲಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ,ಡಾ.ಅಶೋಕ ಕುಮಾರ್,ಡಾ.ಪ್ರದೀಪ ಕುಮಾರ್,ಶ್ರೀಮತಿ ಸುಮಿತ್ರಾ, ಅತಿಥಿ ಉಪನ್ಯಾಸಕಿಯರಾದ,ವಿದ್ಯಾ ಜಂಗೀನ, ಸುಷ್ಮಾ ದೇಶಪಾಂಡೆ ಇತರರು ಇದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಗಣಪತಿ,ಕೆ.ಲಮಾಣಿ ಅವರು ವಹಿಸಿದ್ದರು.
ಇದೇ ಸಂದರ್ಭದಲ್ಲಿ ಪತ್ರಿಕೋದ್ಯಮ ವಿಭಾಗದಿಂದ ಮಹಿಳಾ ಟೈಮ್ಸ್ ಪತ್ರಿಕೆ ಬಿಡುಗಡೆಯಾಯಿತು.ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರು ಹಾಗೂ ಉಪನ್ಯಾಸಕರಾದ ಶಿವಪ್ಪ ಬಡಿಗೇರ,ಶಿವಪ್ರಸಾದ್ ಹಾದಿಮನಿ,ಉಮೇಶ್ ಕಾತರಕಿ ಮಲ್ಲಿಕಾರ್ಜುನ ಮಡಿವಾಳರ,ಹುಚ್ಚಪ್ಪ ಬೊಮ್ನಾಳ,ಡಾ.ಸೂರಪ್ಪ,ವಿರುಪಾಕ್ಷಪ್ಪ ಮುತ್ತಾಳ ಇತರರು ಉಪಸ್ಥಿತರಿದ್ದರು.
ಡಾ.ಪ್ರದೀಪ ಕುಮಾರ್ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.