ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಮಹಾದಾಸೋಹಿ ಕಲಬುರಗಿ ಶ್ರೀಶರಣಬಸವೇಶ್ವರ 57 ನೇ ವರ್ಷದ ಮಹಾರಥೋತ್ಸವ ಹಾಗೂ ವಿವಾಹ ಮಹೋತ್ಸವ ನಿನ್ನೆ ಅದ್ದೂರಿಯಾಗಿ ಜರುಗಿತು.
ಬೆಳಗ್ಗೆ ಗಂಗೆಸ್ಥಳಕ್ಕೆ ಹೋಗಿ ನಂತರ ಶರಣಬಸವೇಶ್ವರ ದೇವಾಲಯದಲ್ಲಿ ಕಲಬುರಗಿ ಶರಣಬಸವೇಶ್ವರ ಮೂರ್ತಿಗೆ ಅಭಿಷೇಕ ಅಲಂಕಾರ ನೆರೆವೇರಿದ ನಂತರ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತ ಸಮೂಹದ ನಡುವೆ ಸಾಮೂಹಿಕ ವಿವಾಹವು ಗುರುಹಿರಿಯರ ಸಮ್ಮುಖದಲ್ಲಿ ನೆರೆವೇರಿತು.ದೇವಸ್ಥಾನಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.ಸಂಜೆ ವೇಳೆ ಶರಣ ಬಸವೇಶ್ವರ ಮಹಾರಥೋತ್ಸವ ಗ್ರಾಮದ ರಾಜ ಬೀದಿಯಲ್ಲಿ ಅದ್ದೂರಿಯಾಗಿ ಸಕಲ ವಾದ್ಯ ವೃಂದಗಳಿಂದ ಸಾಗಿತು.
ಸಾನಿದ್ಯವನ್ನು ಶ್ರೀ.ಷ.ಬ್ರ.ನಾಗಭೂಷಣ ಮಹಾಸ್ವಾಮಿಗಳು ಬೃಹನ್ಮಠ ಹೆಬ್ಬಾಳ,ಸುಳೆಕಲ್, ಪದ್ಮಯ್ಯ ತಾತನವರು,ತಿರುಪತೇಪ್ಪ ತಾತನವರು, ಗೌವಿಸಿದ್ದಯ್ಯ,ಶರಣಬಸಪ್ಪಯ್ಯ ತಾತನವರು,ಅರಳಳ್ಳಿತಾತನವರು,ಪುರಾಣ ಪ್ರವಚಕರಾದ ಶಂಭುಲಿಂಗ ಶಾಸ್ತ್ರಿಗಳು ಗ್ರಾಮದ ಹಿರಿಯರಾದ ಮಲ್ಲನಗೌಡ,ಫಕೀರಪ್ಪ,ಗುಂಡಯ್ಯ ಸ್ವಾಮಿಗಳು ಹಾಗೂ ಶರಣಬಸವೇಶ್ವರ ಕಮಿಟಿಯವರು,ಗ್ರಾಮಸ್ಥರು,ಸಕಲ ಭಕ್ತಾದಿಗಳು ಆಗಮಿಸಿ ಶರಣ ಬಸವೇಶ್ವರರ ಕೃಪೆಗೆ ಪಾತ್ರರಾದರು.
ವರದಿ-ಹನುಮೇಶ ಭಾವಿಕಟ್ಟಿ