ರಂಗಭೂಮಿ ಕಲಾವಿದ,ಚಿತ್ರ ನಟ,ಸಂಘಟಕ, ಸಾಮಾಜಿಕ ಹೋರಾಟಗಾರ ಯೇಸುಪ್ರಕಾಶ್ ಕಲ್ಲುಕೊಪ್ಪ (ಪ್ರಕಾಶ್ ಹೆಗ್ಗೋಡು) ಅವರ ನಿಧನದ ಸುದ್ದಿ ಆಘಾತ ತರಿಸಿದೆ.ಅಭಿನಯದ ಜೊತೆಗೆ ಕೆರೆ ಹೂಳೆತ್ತುವುದು ಸೇರಿದಂತೆ ಹತ್ತು ಹಲವು ಜನೋಪಕಾರಿ ಕೆಲಸಗಳ ಮೂಲಕ ಜನಮನಕ್ಕೆ ಹತ್ತಿರವಾಗಿದ್ದರು.
ಆಪ್ತರಿಗೆ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಪರಮಾತ್ಮ ಕರುಣಿಸಲಿ.ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ.
ಪ್ರತಿ ವರ್ಷ ಶ್ರೀ ಎಂ ಬಿ ಪಾಟೀಲರವರ ಜನ್ಮದಿನದ ನಿಮಿತ್ತ ಹೆಗ್ಗೋಡಿನ ನೀಲಕಂಠೇಶ್ವರ ದೇವಸ್ಥಾನದಲ್ಲಿ ನನ್ನ ಒಳಿತು ಬಯಸಿ ಸಂಪ್ರದಾಯದಂತೆ ಪೂಜೆ ಸಲ್ಲಿಸುತ್ತಿದ್ದರು.ಅವರ ನೆನಪು ನನ್ನ ಮನದಲ್ಲಿ ಸದಾ ಹಸಿರಾಗಿರಲಿದೆ.
ವರದಿ -ಧರಿಯಪ್ಪ ಡಿ ಕೆ