ಶೀರ್ಷಿಕೆ:ಹೆಣ್ಣು ಸಂಸಾರದ ಕಣ್ಣು
ಭಾರತೀಯರ ಗುಣ ನಡೆ ನುಡಿ ಆಚಾರ ವಿಚಾರ ಧೈರ್ಯ ಮನಸ್ಸು ನೆಮ್ಮದಿಯ ಬದುಕು ಕಾಣಿಸಿಕೊಳ್ಳಬೆಕಾದರೆ ಹೇಣ್ಣು ಮಗಳ ಮನಸ್ಸು ಈ ನೆಲದ ನೆರವು ನೀಡುತ್ತದೆ.ಅಂದರೆ ಅದು ಸ್ತ್ರೀ ಶಕ್ತಿ ಅನ್ನುವು ಅನುಭವದ ಶಕ್ತಿ ಜಾಗತಿಕ ಮಟ್ಟದಲ್ಲಿ ಆರ್ಥಿಕ ಮಟ್ಟದಲ್ಲಿ ಗಣನೀಯ ಏರಿಕೆಯನ್ನು ಕಾಣುತ್ತೇವೆ,ಅಂದರೆ ಹೇಣ್ಣು ಅಬಲೆ ಅಲ್ಲ ಸಬಲೇ ಅನ್ನುವ ಮಾತಿನ ಮೂಲಕ ಹೇಗೆ ಅದು.ಆಧುನಿಕ ಯುಗದ ಭಾರತ ದೇಶದಲ್ಲಿ ಬಹಳಷ್ಟು ಹೆಮ್ಮೆಯ ವಿಷಯಗಳನ್ನು ನಾವುಗಳನ್ನು ಅರಿತುಕೊಳ್ಳಬೇಕು. ಪ್ರತಿದಿನದ ಪ್ರತಿಕ್ಷಣದ ಚಟುವಟಿಕೆಯಲ್ಲಿ ಮುಂದಾಳತ್ವ ವಹಿಸಿಕೊಂಡು ಕೆಲಸ ಕಾರ್ಯಗಳಲ್ಲಿ ಮಾತ್ರ ತೊಡಗಿಸಿಕೊಳ್ಳದೆ.ಸುಮ್ಮನೆ ಇರಲು ಸಾಧ್ಯ ಇಲ್ಲಾ ಅವರ ಒಂದು ಸಾಧನೆ ಆಗಿರಲಿ.ಅವರ ಒಂದು ಪರಿಶ್ರಮವಾಗಿರಲಿ ಅವರ ಒಂದು ಕ್ಷೇತ್ರದಲ್ಲಿ ಶ್ರಮ ಪಟ್ಟು ಮುಂದಾಳತ್ವ ವಹಿಸಿಕೊಂಡು ಹೆಣ್ಣುಮಗಳು ತನ್ನ ಪ್ರತಿಕ್ಷಣದ ಬದುಕಿನಲ್ಲಿ ಅನೇಕ ಸಾಧನೆಗಳನ್ನು ಸಾಧಿಸುತ್ತಾ ಗಂಡು ಎಂಬ ಕುಲಕ್ಕೆ ಸರಿಸಾಟಿ ಎನ್ನುತ್ತಾ ಸಾಕಷ್ಟು ವಿಷಯದಲ್ಲಿ ಮಾರ್ಗದರ್ಶಕಳು ಅನ್ನುವ ಮಾತಿನಲ್ಲಿ ತಪ್ಪೇನು ಇಲ್ಲ.ಅಕ್ಕ ತಂಗಿ,ಅಜ್ಜಿ,ಮಗಳು,ಗೆಳತಿ, ಮಡದಿ,ತಾಯಿ,ದೇವತೆ ಕಾಳಿಯ ಸ್ವರೂಪಿ,ಇದೇ ರೀತಿ ನಾನಾ ರೂಪದಲ್ಲಿ ಕೂಡಾ ಕಾಣಲು ಸಾಧ್ಯ.ಒಂದು ಗಂಡು ಮಗು ಅಥವಾ ಒಂದು ಹೆಣ್ಣು ಮಗು ಜನಿಸಿದರೆ ಗಂಡು ಮಗನಿಗೆ ಇರ್ತಕ್ಕಂತ ಪ್ರೇಮತ್ವ ಆ ಹೆಣ್ಣು ಮಕ್ಕಳಲ್ಲಿ ಇರುವುದಿಲ್ಲ,ಆದರೆ ಅದನ್ನೇ ನಾವು ಇವತ್ತಿನ ಸಮಾಜದಲ್ಲಿ ಹೆಣ್ಣೆಂದರೆ ಹುಣ್ಣು ಅನ್ನುವ ಮಟ್ಟದಲ್ಲಿ ಬೆಳದಂತ ಜನರ ಮನಸ್ಥಿತಿ ಮೊದಲು ಬದಲಾಗಬೇಕು ಬೇರೆ ಇನ್ನಿತರ ಯಾವುದೇ ಒಂದು ಘಟನೆಗಳನ್ನು ಹೆಣ್ಣನ್ನು ಮೇಲೆ ನಡೆಸುವುದನ್ನು ತಪ್ಪಿಸುವುದು ಮೊದಲ ಕರ್ತವ್ಯ.ಗಂಡು ಮಕ್ಕಳ ಕರ್ತವ್ಯಕಿಂತ ಹೇಣ್ಣು ಮಗು ಭೂಮಿಗೆ ಬಿದ್ದ ತಕ್ಷಣ ಆ ಹೆಣ್ಣು ಮಗುವಿನ ಕರ್ತವ್ಯ ಪ್ರಾರಂಭವಾಗುವುದು. ಅಂತ್ಯದವರೆಗೂ ಕೂಡ ಶ್ರಮಪಟ್ಟು ದುಡಿಯುವುದರಲ್ಲಿ,ಹೆಣ್ಣುಮಗಳು ಸಂಸಾರದ ಕಣ್ಣು ಹೆಣ್ಣು ಸಾಗಿಸುವಳು ಸುಮ್ಮನೆ ಮನೆ ಮನಸ್ತಾಪವಾದರೆ ಉರಿಯುವುದು ಮನೆ
ಇರಲಿ ಭಾರತೀಯ ಬಂಧುಗಳೇ ಹೆಣ್ಣು ಮಗುವಿನ ಗೌರವದ ದಾರಿಗೆ ಗುರಿಯಾಗೋಣ ಅನ್ನುವ ಆಶಯು ನುಡಿದಿದೆ ಮನ.
-ಮಹಾಂತೇಶ ಖೈನೂರ