ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿಂಗನಾಳ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ಪುರಾಣ ಮಹಾಮಂಗಳ,ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ನೆರವೇರಿತು.
ಬೆಳಗಿನ ಜಾವ,ಗಂಗೆ ಪೂಜೆಯೊಂದಿಗೆ,ಶ್ರೀ ಶರಣಬಸವೇಶ್ವರ ರುದ್ರ ಅಭಿಷೇಕ ಕರ್ಪೂರ ಪೂಜೆ ಮಂಗಳಾರತಿಯೊಂದಿಗೆ ಶ್ರೀ ನಿಜಲಿಂಗಯ್ಯ ಸ್ವಾಮಿಗಳು ಹಿರೇಮಠ ಇವರ ದಿವ್ಯ ಸಾನಿಧ್ಯದಲ್ಲಿ 9 ವಧು ವರರಿಗೆ ಸಾಮೂಹಿಕ ವಿವಾಹ ಗ್ರಾಮದ ಗುರಿಯರ ನೇತೃತ್ವದಲ್ಲಿ ನೆರವೇರಿಸಲಾಯಿತು.
ದೇವರ ದರ್ಶನ ಪಡೆದು ಸಚಿವರಾದ ಶಿವರಾಜ್ ತಂಗಡಿ ಅವರು ವಧು ವರರಿಗೆ ಆಶೀರ್ವದಿಸಿದರೂ, ಸಾಮೂಹಿಕ ವಿವಾಹದಿಂದ ಬರ ಪರಿಸ್ಥಿತಿಯಲ್ಲಿ ಬಡವರಿಗೆ ಬಹಳಷ್ಟು ನೆರವಾಗಲಿದೆ,ಈ ಒಂದು ಕಾರ್ಯಕ್ರಮ ಪ್ರತಿಯೊಂದು ಗ್ರಾಮದಲ್ಲಿ ನೆರವೇರಿಸಿದರೆ,ಬಡವರಿಗೆ ಬಹಳಷ್ಟು ಅನುಕೂಲವಾಗುತ್ತದೆ ಎಂದರು.ಶರಣಬಸವೇಶ್ವರ ಯುವಕ ಮಂಡಳಿವರಿಂದ ಸಚಿವರಿಗೆ ಸನ್ಮಾನಿಸಲಾಯಿತು,ಈ ಸಂದರ್ಭದಲ್ಲಿ ಷಣ್ಮುಖಪ್ಪ ಸೌಕಾರ್,ಅಂಬರೀಶಪ್ಪ ಸೌಕಾರ್,ಕರಿಯಪ್ಪ ಚಿಗರಿ, ಕೆಪಿಸಿಸಿ ಸದಸ್ಯರಾದ ಬಸವರಾಜ್ ನೀಲಗಂಟಿ, ತಿಮ್ಮಣ್ಣ ಗೋನಾಳ,ಸೋಮಣ್ಣ,ಮರಿಗೌಡ ಹಾಗಲ್ದಾಳ,ವೀರಭದ್ರಗೌಡ,ರುದ್ರೇಶ್ ಬಿ,ಶೇಖರ್ ಗೌಡ,ನಾಗಪ್ಪ ನವಲಿ,ತಿಮ್ಮಣ್ಣ ಕನಕ ರೆಡ್ಡಿ,ಸುರೇಶ್ ಗೋನಾಳ,ವೆಂಕಟೇಶ ಗ್ರಾಮದ ಗುರು-ಹಿರಿಯರು,ಯುವಕರು ಮಹಿಳೆಯರು,ಸರ್ವ ಸದ್ಭಕ್ತರು ಭಾಗಿಯಾಗಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.