ಬೇಸಿಗೆಯಿಂದ ಭೂಮಿಯ ಮೇಲೆ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತಾ ಇದೆ.ಇದರಿಂದ ಪ್ರಾಣಿ ಪಕ್ಷಿಗಳು ನೀರಿನ ದಾಹವನ್ನು ತೀರಿಸಿಕೊಳ್ಳಲಾಗದೆ ಎಲ್ಲೆಂದರಲ್ಲಿ ಸಾವನ್ನೊಪ್ಪುತ್ತಿವೆ.ಇಂತಹ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತರಾದ ಅಮರೇಗೌಡ ಮಲ್ಲಾಪೂರ ಅವರು ಶ್ರೀಶೈಲಕ್ಕೆ ಪಾದಯಾತ್ರೆಗೆ ಹೋದ ಸಂದರ್ಭದಲ್ಲಿ ಮಂಗನಿಗೆ ತುಂಬಾ ಬಾಯಾರಿಕೆಯಾಗಿರುವುದನ್ನು ಕಂಡು ತಮ್ಮ ನೀರಿನ ಬಾಟಲಿಯಲ್ಲಿನ ನೀರನ್ನು ಮಂಗನಿಗೆ ನೀಡಿ ನೀರುಣಿಸಿದರು.ದಯವಿಟ್ಟು ಪ್ರಾಣಿ ಪಕ್ಷಿಗಳಿಗೆ ನಿಮ್ಮ ಹತ್ತಿರದ ಅರಣ್ಯ ಪ್ರದೇಶದಲ್ಲಿ,ಮನೆಯ ಹಿತ್ತಲಿನ ತೋಟಗಳಲ್ಲಿ,ಮನೆಯ ಮೇಲ್ಚಾವಣಿಯಲ್ಲಿ,ಹತ್ತಿರದ ಗಿಡಮರಗಳಿಗೆ ಪ್ಲಾಸ್ಟಿಕ್ ಬುಟ್ಟಿಗಳು ಅಥವಾ ಮಣ್ಣಿನ ಮಡಿಕೆಗಳಲ್ಲಿ ಕಾಳು ಮತ್ತು ನೀರು ಹಾಕಿ ಪ್ರಾಣಿ ಪಕ್ಷಿಗಳ ಸಂಕುಲ ಉಳಿವಿಗೆ ಸಹಕಾರ ನೀಡಲು ಮುಂದಾಗಬೇಕು ಎಪ್ರಿಲ್ ಫೂಲ್ ಮಾಡುವ ಬದಲಿಗೆ ಪ್ರಾಣಿ ಪಕ್ಷಿಗಳಿಗೆ ನೀರಿನ ದಾಹವನ್ನು ತೀರಿಸುವ ಮೂಲಕ ಎಪ್ರಿಲ್ ಕೂಲ್ ಆಚರಣೆ ಮಾಡಲು ಮುಂದಾಗಬೇಕು ಎಂದು ಪರಿಸರ ಪ್ರೇಮಿ,ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ಸಂಸ್ಥಾಪಕರಾದ ಅಮರೇಗೌಡ ಮಲ್ಲಾಪೂರ ಮನವಿ ಮಾಡಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.