ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಇಂಗ್ಲೀಷ್ ರ ಜನವರಿ 1 ಅಲ್ಲ ಹೊಸ ವರ್ಷ,ಪ್ರಕೃತಿ ಮಾತೆಯ ಹಬ್ಬ ಯುಗಾದಿ ಹೊಸ ವರ್ಷ

ಜನ‌ ಮರಳೋ,ಜಾತ್ರೆ ಮರಳೋ ಎಂಬಂತೆ 21ನೆಯ ಶತಮಾನದ ಈ ಕಾಲಾವಧಿಯಲ್ಲಿ ಜನರ ಆಚರಣೆಗಳನ್ನು ನೋಡಿದರೆ ಭಾರತಕ್ಕೆ ಸ್ವತಂತ್ರ ಇನ್ನೂ ಸಿಕ್ಕಿಲ್ಲ ಎನಿಸುತ್ತದೆ,ಏಕೆಂದರೆ ಜನರು ಇವತ್ತಿಗೂ ಕೂಡಾ ನಮ್ಮ ಜಾಗಕ್ಕೆ ಬಂದು ನಮ್ಮ ಹಕ್ಕುಗಳನ್ನು ಕಿತ್ತುಕೊಂಡು,ನಮ್ಮದೇ ನಾಡಿನಲ್ಲಿ ನಮ್ಮನ್ನು ದಾಸರನ್ನಾಗಿ ಮಾಡಿಕೊಂಡ ಬ್ರಿಟಿಷರ ಆಚರಣೆಗಳಿಗೆ ಮಾರುಹೋಗಿದ್ದಾರೆ.ಸ್ವತಂತ್ರ ಸಿಕ್ಕು  77 ವರ್ಷಗಳಾದರೂ ಆ ಕೆಲವು ಕೆಟ್ಟ ಆಚರಣೆಗಳು ನಮ್ಮ ಜನರ ಮನಸ್ಸಿನಲ್ಲಿ ಅಚ್ಚೆ ಹೊಡೆದಿದ್ದಾರೆ.ಈಗಾಗಿ ನಮ್ಮ ದೇಶದ ಪ್ರಗತಿ ಕೆಲವೊಂದು ಸಂಗತಿಗಳಲ್ಲಿ ಕುಂಠಿತವಾಗುತ್ತಿದೆ ಅನಿಸುತ್ತಿದೆ.ಹಲವಾರು ಜನರು ಜನವರಿ 1 ರಂದು ಹೊಸ ವರ್ಷವೆಂದು ಆಡಂಬರ ಆಚರಣೆಗಳನ್ನು ಮಾಡುತ್ತಾರೆ ಆದರೆ ನನ್ನ ಪ್ರಕಾರ ಯುಗಾದಿಯೇ ನಮ್ಮೆಲ್ಲರ ಹೊಸ ವರ್ಷವೆಂದು ವಾದಿಸಿದರೆ ತಪ್ಪಿಲ್ಲ, ಇದಕ್ಕೆ ಯಾವುದೇ ವಿವರಣೆಯನ್ನು ನೀಡುವ ಅವಶ್ಯಕತೆ ಇಲ್ಲ,ನಮ್ಮ ಜನರಿಗೆ ಇದರ ಬಗ್ಗೆ ತಿಳಿದರು ಸಹ‌ ಬುದ್ಧಿಹೀನರಂತೆ ವರ್ತಿಸುತ್ತಾರೆ.ಏಕೆಂದರೆ ಪ್ರತ್ಯಕ್ಷವಾಗಿ ಕಣ್ಣಿಗೆ ಕಂಡರೂ ಸಹ ನಾವು ನಂಬುವ ಸ್ಥಿತಿಯಲ್ಲಿಲ್ಲ.ವಸಂತ ಋತು ಬಂದರೆ ಸಾಕು,ನಾವು ತಿಳಿಯಬೇಕು ಅದು ಹೊಸ ವರ್ಷ ಯುಗಾದಿ ಹಬ್ಬದ ಪಾದಾರ್ಪಣೆಯ ಸೊಚನೆ ಎಂದು ಯುಗಾದಿ ಬಂದರೆ ಸಾಕು ಹಾ…ಹಾ ಪ್ರಕೃತಿಯ ಸೌಂದರ್ಯವನ್ನು ನೋಡಲು ಎರಡು ಕಣ್ಣು ಸಾಲದು.ಅಚ್ಚ ಹಸಿರಿನಿಂದ ಕಂಗೊಳಿಸುವ ಗಿಡ-ಮರ ಬಳ್ಳಿಗಳು,ಕೋಗಿಲೆಯ ಹಿಂಪಾದ ಗಾನ,ಮನುಷ್ಯನನ್ನು ಸ್ಪೂರ್ತಿದಾಯಕಗೋಳಿಸುವ ಹೊಸ ಹೊಸ ಸಣ್ಣ ಕುಂಡಿಗಳು,ಬಾಯಲ್ಲಿ ನೀರು ಬರತೊಡಗಿಸುವ ಹುಳಿ ಮಾವುಗಳು,ತಂಪು ಶುದ್ಧವಾದ ಗಾಳಿ,ಬಣ್ಣ ಬಣ್ಣದ ಹೂವುಗಳು,ಎಲ್ಲಿ ನೋಡಿದರೂ ಹಸಿರೆ ಹಸಿರು.ಪ್ರಾಣಿ ಪಕ್ಷಿಗಳಿಗೆ ಇಂತಹ ಒಂದು ಸಂದರ್ಭ ಹಿಗ್ಗೋ ಹಿಗ್ಗು.‌ ನಮ್ಮ ಪೂರ್ವಜರು ಹಬ್ಬಗಳಿಗೆ ತಕ್ಕಂತೆ,ಪ್ರಕೃತಿಯ ಬದಲಾವಣೆಗೆ ತಕ್ಕಂತೆ ತಿಂಡಿ ತಿನಿಸುಗಳನ್ನು ತಯಾರಿಸಿ ಸೇವಿಸುವ ರೂಢಿಯನ್ನು ರೂಪಿಸಿ ಕೊಟ್ಟು ಹೋಗಿದ್ದಾರೆ.ಇವತ್ತಿಗೂ ಕೂಡಾ ಹಲವಾರು ಹಳ್ಳಿಗಳಲ್ಲಿ ಈ ಒಂದು ರೂಢಿ ಮುನ್ನಡೆಯುತ್ತಿದೆ.  ಪ್ರತಿ ಆಚರಣೆಗೂ ಪ್ರತಿ ರೂಡಿಗೂ ಒಂದೊಂದು ವೈಜ್ಞಾನಿಕ ಕಾರಣವಿದೆ ಯಾವುದು ಕೂಡಾ ಕಾಟಚಾರಕಲ್ಲ.ಅದೇ ರೀತಿ ಯುಗಾದಿ ಹಬ್ಬದ ಸಮಯದಲ್ಲಿ ಬೇವು ಬೆಲ್ಲವನ್ನು ಸೇವಿಸುತ್ತಾರೆ. ನಮಗೆ ಅನಿಸಬಹುದು ಏನಿದು ಬೇವು ಕಹಿ ಬೆಲ್ಲ ಸಿಹಿ,ಯಾಕೆ ನಮ್ಮವರು ಇವೆರಡರ ಮಿಶ್ರಣವನ್ನು ಸೇವಿಸುವವರು ಎಂದು ಮನುಷ್ಯನ ಜೀವನಕ್ಕೆ ಹೋಲಿಸಿಕೊಂಡು ನೋಡಿದರೆ ಒಬ್ಬ ಮನುಷ್ಯನ ಜೀವನವು ಬೇವಿನಂತೆ ಹಲವಾರು ಅಡೆಚಣೆಗಳು ಕಷ್ಟಗಳು ಹಾಗೂ ಬೆಲ್ಲದಂತೆ ಸಿಹಿ ಕ್ಷಣಗಳ ಮಿಶ್ರಣ.ಇದರ ಸಾರವೇನೆಂದರೆ ನಮ್ಮ ಜೀವನದೂದ್ದಕ್ಕೂ ಬರುವ ಕಷ್ಟ-ಸುಖಗಳು,ಸಿಹಿ-ಕಹಿ ಕ್ಷಣಗಳನ್ನು ಸಮನಾಗಿ ತೆಗೆದುಕೊಂಡು ಸಮತೋಲನವನ್ನು ಕಾಯ್ದುಕೊಳ್ಳಬೇಕು.ಅದೇ ರೀತಿ ನಮ್ಮ ಆರೋಗ್ಯಕ್ಕೆ ಆಗುವ ಲಾಭಗಳೆಂದರೆ ಬೇವಿನಿಂದ ನಮ್ಮ‌ ದೇಹ‌ದಲ್ಲಿರುವ ಕೆಟ್ಟ ರಕ್ತದ ಶುದ್ಧಕರಣವಾಗುತ್ತದೆ,ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.ನಮ್ಮ ದೇಹದಲ್ಲಿನ ಕೆಟ್ಟ ಕೊಬ್ಬು ಕರಗಿಸಲು ಸಹಾಯವಾಗುತ್ತದೆ ಮತ್ತು ದೇಹದ ಛಾಯಾಪಚಾಯ ಕ್ರಿಯೆಗಳು ಸಮತೋಲನವಾಗಿ ನಡೆಯಲು ನೆರವಾಗುತ್ತದೆ ಹಾಗೂ ಈ ಯುಗಾದಿ ಹಬ್ಬವು ಬೇಸಿಗೆಯ ಕಾಲದಲ್ಲಿ ಬರುವ ಕಾರಣ ಈ ಕಾಲದಲ್ಲಿ ಕೆಲವು ಜನರಿಗೆ ಚರ್ಮರೋಗಗಳು ಬರುವ ಸಾಧ್ಯತೆಗಳಿರುತ್ತದೆ,ಬೇವು ಬೆಲ್ಲವನ್ನು ಸೇವಿಸುವುದರಿಂದ ಚರ್ಮ ರೋಗದ ನಿವಾಹರಣೆಗೆ ಸಹಾಯವಾಗುತ್ತದೆ.ಈ ಮೂರು ಅಕ್ಷರದ ಪದವಾದ ಯುಗಾದಿಯು ಬಹಳ ಮಹತ್ವ ಪಡೆದಿದೆ.ಇದು ಹಿಂದುಗಳ ಪಂಚಾಂಗದ ಪ್ರಕಾರ ಹೊಸ ವರ್ಷದ ಶುರು ಎಂದು ಹೇಳಬಹುದು ಎಲ್ಲಾ ಹಿಂದುಗಳಿಗೂ ಯುಗಾದಿ ಹಬ್ಬದ ಶುಭಾಶಯಗಳು.

-ವಿಷ್ಣುತೇಜ‌.ಪಿ,ಡಣಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ