ಕಾರಟಗಿ:ಭಗವಾನ್ ಬುದ್ಧ,ವಿಶ್ವಗುರು ಬಸವಣ್ಣ, ಭಾರತರತ್ನ ಡಾ।।ಬಿ.ಆರ್.ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿ ಹರಿಕಾರ, ಮಾಜಿ ಉಪ ಪ್ರಧಾನಮಂತ್ರಿ
ಡಾ||ಬಾಬು ಜಗಜೀವನ್ ರಾಮ್ ರವರ ಜಯಂತಿ ನಿಮಿತ್ಯ ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ರಾಜ್ಯ ಸಮಿತಿ,ಬೆಂಗಳೂರು ವತಿಯಿಂದ
21 ಜೋಡಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಪಟ್ಟಣದ ನವಲಿ ರಸ್ತೆಯ ಕರ್ನಾಟಕ ಪಬ್ಲಿಕ್ ಶಾಲೆ ಶ್ರೀ ಸಿದ್ದೇಶ್ವರ ರಂಗಮಂದಿರ ಆವರಣದಲ್ಲಿ ಏಪ್ರಿಲ್ 10- ಶುಕ್ರವಾರ ಬೆಳಗ್ಗೆ 10.46ರಿಂದ 12.10 ರವರೆಗೆ ಜರುಗಲಿವೆ.
ಶ್ರೀ ಯಲ್ಲಪ್ಪ ಕಟ್ಟಿಮನಿ ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರು ಕಾರ್ಯಕ್ರಮದ ಉಸ್ತುವಾರಿ ವಹಿಸಲಿದ್ದಾರೆ.
ಪ.ಪೂ.ಶ್ರೀ ಪೂರ್ಣಾನಂದ ಭಾರತಿ ಸ್ವಾಮಿಜಿ ಮಾತಂಗ ಮಹರ್ಷಿ ಆಶ್ರಮ,ಹಂಪಿ ಶ್ರೀ ವೇ.ಮೂ. ಮರುಳಸಿದ್ದಯ್ಯ ಸ್ವಾಮಿ ಹಿರೇಮಠ,ಕಾರಟಗಿ ಇವರ ಆಶೀರ್ವಾದದಿಂದ ಸ್ವಸ್ತಿಶ್ರೀ ವಿಜಯಾಭ್ಯುದಯ ಶ್ರೀಮನೃಪ ಶಾಲಿವಾಹನ ಶಕೆ 1946ನೇ ಶ್ರೀ ಕ್ರೋಧಿನಾಮ ಸಂವತ್ಸರ ವೈಶಾಖ ಶು| ತೃತೀಯ ಏಪ್ರಿಲ್ :10- ಶುಕ್ರವಾರ ಬೆಳಗ್ಗೆ 10.46ರಿಂದ 12.10ರವರೆಗೆ ಸಲ್ಲುವ ಅಭಿಜಿನ್ ಲಗ್ನದ ಶುಭಮುಹೂರ್ತದಲ್ಲಿ ಮಾಂಗಲ್ಯಧಾರಣೆ ಜರುಗಿಸುವ ಮೂಲಕ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಏಪ್ರಿಲ್ 10- ಶುಕ್ರವಾರ ಬೆಳಗ್ಗೆ 06.30ಕ್ಕೆ ಬಾಜಾ, ಭಜಂತ್ರಿಯೊಂದಿಗೆ ದಾರ್ಶನಿಕರ ಭಾವಚಿತ್ರ ಮೆರವಣಿಗೆ (ಕಾರಟಗಿಯ 18ನೇ ವಾರ್ಡ್ ಇಂದಿರಾನಗರ ವಿರುಪಣ್ಣ ತಾತನ ಗುಡಿಯಿಂದ ಕಾರ್ಯಕ್ರಮದ ವೇದಿಕೆಯವರೆಗೆ) ತದನಂತರ ಬೆಳಗ್ಗೆ 10.30ಕ್ಕೆ ಉದ್ಘಾಟನಾ ಸಮಾರಂಭ ಬೆಳಗ್ಗೆ 10.46ರಿಂದ 12.10ರವರೆಗೆ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ.
ಆಸಕ್ತರು ನೋಂದಣಿಗಾಗಿ ದಿನಾಂಕ : 30-04-2024ರೊಳಗಾಗಿ ಅಗತ್ಯ ದಾಖಲೆಗಳೊಂದಿಗೆ ಕೆಳಕಂಡ ಆಯೋಜಕರನ್ನು ಸಂಪರ್ಕಿಸಿ 9900363065,9972842480,9902354051, 9916310921,9535405449,9972243306 9916785052,6362016209,9148669338
ವಿಶೇಷ ಸೂಚನೆಗಳು:
ವಧು-ವರರ ಶಾಲೆ ದೃಢೀಕರಣ,ವರ್ಗಾವಣೆ ಪ್ರಮಾಣ ಪತ್ರ,ಅಥವಾ ಜಿಲ್ಲಾ ವೈದ್ಯಾಧಿಕಾರಿಗಳಿಂದ ವಯಸ್ಸಿನ ದೃಢೀಕರಣ ಪ್ರಮಾಣ ಪತ್ರ,ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಲ್ಲಿಸಬೇಕು.ವಧು-ವರ ಹಾಗೂ ಪಾಲಕರ ಆಧಾರ್ ಕಾರ್ಡ್,ಮತದಾರರ ಗುರುತಿನ ಚೀಟಿ,ಪಡಿತರ ಚೀಟಿ ನಕಲು ಪ್ರತಿ ಹಾಗೂ ತಲಾ 4 ಭಾವಚಿತ್ರ ಸಲ್ಲಿಸಬೇಕು.
ಈ ಹಿನ್ನೆಲೆಯಲ್ಲಿ ಅನೇಕ ಕಾರ್ಯಕ್ರಮಗಳು ಜರುಗಲಿವೆ.ಕಾರಣ ತಾವೆಲ್ಲರೂ ತನು-ಮನ-ಧನದಿಂದ ಸಹಕರಿಸಿ,ಕಾರ್ಯಕ್ರಮ ಯಶಸ್ವಿಗೆ ಕೈಜೋಡಿಸಬೇಕೆಂದು ವಿನಂತಿಸಿದ್ದಾರೆ.