ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ದಮ್ಮೂರ ಶ್ರೀ ಭೀಮಾಂಬಿಕಾ ದೇವಿ ಮಠದಲ್ಲಿ ೩೫೦ ನೇ ಶಿವಾನುಭವ ಗೋಷ್ಠಿ

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ದಮ್ಮೂರ ಗ್ರಾಮದಲ್ಲಿ ಮಹಾಶಿವಶರಣೆ ಶ್ರೀ ಭೀಮಾಂಬಿಕಾ ದೇವಿ ಮಠದಲ್ಲಿ ಚತುದರ್ಶಿ ಅಂಗವಾಗಿ ೩೫೦ ನೆ ಶಿವಾನುಭವ ಗೋಷ್ಠಿ ಜರುಗಿತು.ಉತ್ತಮರ ಸಂಗದಿಂದ ಧರ್ಮದ ಹಾದಿ ಸುಗಮ ಎಂದು ಅಳವಂಡಿಯ ಪುರಾಣ ಪ್ರವಚನಕಾರ ಎಚ್ಚರೇಶ್ವರ ಸ್ವಾಮಿ ಅವರು ಸತ್ಯಂವಧಃ ಧರ್ಮಂ ಚರ ಚಿಂತನ ವಿಷಯ ಕುರಿತು ಮಾತನಾಡಿದರು.ಗ್ರಾಮೀಣ ಭಾಗದಲ್ಲಿ ೩೨ ವರ್ಷದಿಂದ ದಮ್ಮೂರ ಗ್ರಾಮದ ಭಕ್ತರು ಹಾಗೂ ಶಿವಾನುಭವ ಸೇವಾ ಸಮಿತಿಯವರು ಸೇರಿಕೊಂಡು ೩೬೦ ಶಿವಾನುಭವ ನೆಡೆಸಿಕೊಂಡು ಬಂದಿರುವುದು ಶ್ಯ್ಲಾಘನೀಯವಾದದು ಎಂದು ಕರಮುಡಿಯ ಡಾ.ಗೌಡಪ್ಪ ಬಲಕುಂದಿ ಅವರು ಮಾತನಾಡಿದರು. ಸಮುದ್ರದಲ್ಲಿರುವ ಕಪ್ಪೆ ಚಿಪ್ಪಿನ ಗುಣಧರ್ಮ,ಭೂಮಿ ತಾಯಿಯ ಗುಣಧರ್ಮ ಉತ್ತಮ ಗುಣಧರ್ಮಗಳಾಗಿವೆ ಆದರೆ ಮಾನವನ ಗುಣಧರ್ಮ ಕೆಟ್ಟ ಗುಣಧರ್ಮಗಳಾಗಿವೆ ,ಉತ್ತಮ ಗುಣಧರ್ಮಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದರೆ ಶಿವಾನುಭವ ಆಲಿಸಬೇಕು ಆಗ ಪರಿವರ್ತನೆ ಆಗಲು ಸಾದ್ಯ ಎಂದು ಶ್ರೀ ಭೀಮಾಂಬಿಕಾ ಶಿವಾನುಭವ ಸೇವಾ ಸಮಿತಿಯ ಅಧ್ಯಕ್ಷ ಶರಣಬಸಪ್ಪ ದಾನಕೈ ಅವರು ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪ್ರಾಸ್ತಾವಿಕವಾಗಿ ರುದ್ರೇಶ ಹರಿಜನ,ಸುನೀಲ್ ದೇಸಾಯಿ ಮಾತನಾಡಿದರು.
ಶ್ರೀ ಮಠದ ಒಡಯರಾದ ಹನುಮಂತಪ್ಪಜ್ಜ ಧರ್ಮರ, ಶರಣಯ್ಯ.ಗು.ಹಿರೇಮಠ ಸಾನಿದ್ಯವಹಿಸಿದ್ದರು. ಪ್ರಾರಂಭದಲ್ಲಿ ನವಜೀವನ ಸಮಿತಿ ಸದಸ್ಯರು ಶ್ರೀ ಮಂಜುನಾಥ ಸ್ವಾಮಿಯ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ,ಭಕ್ತಿಯಿಂದ ಭಜನೆಮಾಡಿ ಪ್ರಾರ್ಥನೆ ಸಲ್ಲಿಸಿದರು.ದೇವಪ್ಪ ಗುಡಮಿ,ಸಿದ್ದಪ್ಪ ಅಟಮಾಳಗಿ, ಈರಪ್ಪ ರಾವಣಕಿ,ಶರಣೆಗೌಡ ದ್ಯಾಮನಗೌಡ್ರ, ಬಸವರಾಜ ಹಳ್ಳಿಕೇರಿ,ಸಂತೋಷ ಹಿರೇಮಠ ಹಾಗೂ ಸಂಗೀತ ಬಳಗದ ನೀಲಕಂಠಪ್ಪ ರೋಡ್ಡರ್,ಕಳಕಪ್ಪ ಹಡಪದ,ಯಮನೂರಪ್ಪ ಹಳ್ಳಿಕೇರಿ,ಹನುಮೇ ಹಡಪದ ಸೇರಿದಂತೆ ಇತರರು ಭಾಗವಹಿಸಿದ್ದರು. ನಂತರ ಭಕ್ತರಿಂದ ಅನ್ನ ಸಂತರ್ಪಣೆ ಜರುಗಿತು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ