ನೂರಾರು ನೋವುಗಳು,
ಸಹಸ್ರಾರು ಅವಮಾನಗಳು,
ಒಡಲಿನಲಿ ಇಟ್ಟುಕೊಂಡು,
ಅವಮಾನ ಮಾಡಿದವರೆದುರಿಗೆ
ತಲೆ ಎತ್ತಿ ನಡೆದು,ಅವರು ತಲೆ ತಗ್ಗಿಸುವಂತೆ ಮಾಡಿದ
ದಲಿತ ಸೂರ್ಯ ಅಂಬೇಡ್ಕರ್.
ಅಸಮಾನತೆ ತೊಲಗಲು
ಶಿಕ್ಷಣ ವೆಂಬ ಅಸ್ತ್ರವ
ಪ್ರಯೋಗಿಸಿ, ಸಮಾನತೆ,
ಸೌಹಾರ್ದತೆಯ ಬೀಜ ಬಿತ್ತಿ
ಹಕ್ಕುಗಳಿಗಾಗಿ , ಸಂಘಟನೆಯ
ದಾರಿ ತೋರಿ , ಹೋರಾಟವ
ಹುಟ್ಟು ಹಾಕಿದ,
ದಲಿತ ಸೂರ್ಯ ಅಂಬೇಡ್ಕರ್.
ಓದು ಓದು,ಓದು ಎಂದು,
ವಿಶ್ವವನೆಲ್ಲ ಓಡಾಡಿ, ಸಂವಿಧಾನ ವ ಬರೆದು,
ಅದರ ಅನುಷ್ಠಾನ ಮಾಡಿ
ಎಲ್ಲರಿಂದಲೂ ಸೈ ಎನಿಸಿಕೊಂಡ
ದಲಿತ ಸೂರ್ಯ ಅಂಬೇಡ್ಕರ್.
ಜಗತ್ತಿಗೆ ಒಬ್ಬನೇ ಸೂರ್ಯ,
ಭಾರತಕ್ಕೆ ಒಬ್ಬನೇ ಸೂರ್ಯ
ಅವರೇ ನಮ್ಮ ಪ್ರಖರ ಬೆಳಕು
ದಲಿತ ಸೂರ್ಯ ಅಂಬೇಡ್ಕರ್
ನವ ಭಾರತದ ನಿರ್ಮಾತೃ
ಸಂವಿಧಾನ ಶಿಲ್ಪಿ,ಭಾರತ ರತ್ನ
ಅಮರ ಜೀವಿ, ದಲಿತ ಸೂರ್ಯ ಅಂಬೇಡ್ಕರ್,
ನಿಮ್ಮ ಜನುಮ ದಿನದಂದು
ನಿಮಗೆ ಅರ್ಪಿಸುವೆ,
ಕೋಟಿ ನಮಸ್ಕಾರ.
ಶಿವಪ್ರಸಾದ್ ಹಾದಿಮನಿ.
ಕೊಪ್ಪಳ..