ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಜಯಂತಿ ಪ್ರಯುಕ್ತ ಭಾವಚಿತ್ರಕ್ಕೆ ಪುಷ್ಪಗಳನ್ನು ಹಾಗೂ ಅಕ್ಷತೆಯನ್ನು ಹಾಕುತ್ತಾ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿ ಯುವಕರು ಹಿರಿಯರು ಭಾಗಿಯಾಗಿ ಯಶಸ್ವಿಗೊಳಿಸಿದರು.
ನಿಂಗಪ್ಪ ಮಾತನಾಡಿ ಅವರ ಆದರ್ಶದ ಬದಕನ್ನು ಅವರು ನೀಡಿರುವ ಸಂವಿಧಾನ ಅಂಶಗಳನ್ನು ಗೌರವಿಸುತ್ತಾ ನಮ್ಮ ಜೀವನದುದ್ದಕ್ಕು ಅಳವಡಿಸಿಕೊಳ್ಳುತ್ತಾ ಬದುಕನ್ನು ಸಾಗಿಸೊಣ ಎಂದರು.
ಈ ಕಾರ್ಯಕ್ರಮದಲ್ಲಿ ನಿಂಗಪ್ಪ ಬಿ,ರಮೇಶ ಸಂಕನಾಳ,ಟಿ ಶಿವಣ್ಣ,ಭೀಮನ ಗೌಡ ಚಿದಾನಂದಪ್ಪ ಬಿ,ಭೀಮೇಶ ಜಿ,ಭೀಮೇಶ್ ಬಿ,ನೀಲಪ್ಪ ಕೆ,ರಾಘೂ, ಹನುಮೇಶ ಕೆ,ಕಾರ್ತಿಕ,ನಿಂಗಪ್ಪ ಜಿ,ಮಂಜುನಾಥ,ಲಿಂಗರಾಜ.ಎಂ.ನಿಂಗರಾಜ ಗುಡ್ಡಿ., ಹೆಮಂತ ವಿನೋದ ಕುಮಾರ ಯುವಕರು ಹಿರಿಯರು ಭಾಗಿಯಾಗಿದ್ದರು.
ವರದಿ:ಹನುಮೇಶ ಭಾವಿಕಟ್ಟಿ