ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನ ಶಿರೂರು ಗ್ರಾಮದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಲಯ ಕಲಾ ಮನೆ ಕಲಾವಿದರ ಸಾಂಸ್ಕೃತಿಕ ಸಂಸ್ಥೆಯ 31ನೆಯ ವಾರ್ಷಿಕೋತ್ಸವ ಕಾರ್ಯಕ್ರಮ ಶ್ರೀ ಕಲ್ಲಿನಾಥೇಶ್ವರ ದೇವಸ್ಥಾನದಲ್ಲಿ ರಾತ್ರಿ ಎಂಟು ಗಂಟೆಗೆ ಜರುಗಿತು.ಬಯಲಾಟ ಕಲೆ ಉಳಿವಿಗಾಗಿ ಪ್ರತಿಯೊಬ್ಬರೂ ಶ್ರಮಿಸಬೇಕು ಅಂದಾಗ ಬಯಲಾಟ ಕಲೆ ಉಳಿಯುವುದಕ್ಕೆ ಬೆಳೆಯುವುದಕ್ಕೆ ಸಾಧ್ಯವಾಗುತ್ತದೆ ಎಂದು ವರ್ತಕ ಬಸವಲಿಂಗಪ್ಪ ಭೂತೆ ಅವರು ಉದ್ಘಾಟಿಸಿ ಮಾತನಾಡಿದರು. ಕುಕನೂರಿನ ಡಾ.ಮಹಾದೇವ ಸ್ವಾಮೀಜಿ ಅವರು ಮಾತನಾಡಿ ಕಲಾವಿದರನ್ನು ಪರಿಚಯ ಮಾಡಿ ಅವರನ್ನು ಸನ್ಮಾನ ಮಾಡಿ ಗುರುತಿಸಿ ಬೆಳಕಿಗೆ ತರುವ ಕಾರ್ಯವನ್ನು 31 ವರ್ಷದಿಂದ ಮಾಡುತ್ತಿರುವ ಕಲಾಮನೆ ಸಂಸ್ಥೆಯ ಕಾರ್ಯ ಶ್ಲಾಘನೀಯವಾದದು ಎಂದರು.ಹಿರೇಮಲ್ಲಿನ ಕೇರಿಯ ಚನ್ನಬಸವ ಸ್ವಾಮೀಜಿ ಅವರು ಪ್ರವಚನ ನೀಡಿ ಮನಸ್ಸು ಪರಿವರ್ತನೆಯಾಗಬೇಕಾದರೆ ಶಾಂತಿ ನೆಮ್ಮದಿ ಸಿಗಬೇಕಾದರೆ ಪ್ರವಚನವನ್ನು ಆಲಿಸಬೇಕು ಎಂದರು. ಸರ್ವ ಧರ್ಮದವರನ್ನು ಕರೆದುಕೊಂಡು ಅಚ್ಚುಕಟ್ಟಾಗಿ ಕಾರ್ಯಕ್ರಮ ಮಾಡಿರುವ ಕೀರ್ತಿ ಶಿರೂರು ಗ್ರಾಮಕ್ಕೆ ಸಲ್ಲುತ್ತದೆ ಎಂದು ಹಿರಿಯ ವರದಿಗಾರ ಕೊಟ್ರಪ್ಪ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು,ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಅವರು ಮಾತನಾಡಿ ನಶಿಸಿ ಹೋಗುವ ಬಯಲಾಟ ಕಲೆಯ ಉಳಿವಿಗಾಗಿ ನಾವು ಶ್ರಮಿಸಬೇಕು ಕಲಾವಿದರಿಗೆ ಪ್ರೋತ್ಸಾಹವನ್ನು ನೀಡಿದಾಗ ಕಲೆ ಜೀವಂತವಾಗಿ ಉಳಿಯಲು ಸಾಧ್ಯ ಎಂದರು.ಹಿರಿಯ ರಂಗಭೂಮಿ ಕಲಾವಿದ ಕುಕುನೂರಿನ ಬಾಬಣ್ಣ ಕಲ್ಮನಿ ಅವರ ರಂಗಸ್ಮರಣೋತ್ಸವದ ಅಂಗವಾಗಿ ಅಂಗವಾಗಿ ಯಲಬುರ್ಗಾದ ಶ್ರೀ ಸಿದ್ದರಾಮೇಶ್ವರ ಬಯಲಾಟ ಸಂಘದ ಅಧ್ಯಕ್ಷರಾದ ಶರಣಬಸಪ್ಪ ದಾನಕೈ ಅವರು ಬಯಲಾಟದಲ್ಲಿ ಸ್ತ್ರೀ ಪಾತ್ರ ಮಾಡುತ್ತಾ ಬಂದಿರುವ ಇವರ ಕಲೆಯನ್ನು ಗುರುತಿಸಿ ರಂಗನಕ್ಷತ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.ಕಲಾವಿದರಾದ ಕುಕನೂರು ತಾಲೂಕಿನ ಇಟಗಿ ಗ್ರಾಮದ ರಾಮಪ್ಪ ಬಾರಕೇರ,ಲಕ್ಕುಂಡಿಯ ವೃತ್ತಿ ರಂಗಭೂಮಿ ಕಲಾವಿದೆ ಸರ್ವಮಂಗಳ ಹೊಸೂರಮಠ,ಬೆಟಗೇರಿಯ ಮದ್ಲಿವಾದಕರಾದ ಮಲ್ಲೇಶಪ್ಪ ಮಾಕಾಪುರ, ನಿಜಲಿಂಗಪ್ಪ ಕರಬಿಷ್ಠಿ,ಕೇಶಪ್ಪ ಗೊಂದಲಕರ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು.ಈ ವೇಳೆ ಗದಗ ಚಿತ್ರಕಲಾವಿದ ಶಂಕರಗೌಡ ಪಾಟೀಲ,ಮುಖಂಡರಾದ ವೀರಯ್ಯ ಉಳ್ಳಾಗಡ್ಡಿಮಠ,ನಿವೃತ್ತ ಎಸ್.ಪಿ ಶರಣಪ್ಪ ಯು ಚಿನ್ನಪ್ಪ ವಾಲ್ಮೀಕಿ,ಶೇಖರಡ್ಡಿ ಮಾದಿನೂರ, ವೀರಭದ್ರಪ್ಪ ಸುಂಕದ,ಶಿವಬಸಯ್ಯ ಮುತ್ತಿನ ಪೆಂಡಿನಮಠ,ಈಶ್ವರಯ್ಯ ಹಲಸಿನಮಠ ಸೇರಿದಂತೆ ಇತರರು ಭಾಗವಹಿಸಿದ್ದರು.ನಂತರ ಅನ್ನ ಸಂತರ್ಪಣೆ ಜರುಗಿತು.ಬಳಿಕ ಗದಗ ಪೋಲಿಸ್ ಇಲಾಖೆಯ ನೀಲಪ್ಪ ಗುಡ್ಡದ ಹಾಗು ಸಂಗಡಿಗರಿಂದ ಬಯಲಾಟದ ಪದಗಳನ್ನು ಹಾಡಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.