ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿಂಗನಾಳ ಕ್ಯಾಂಪಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ರಾಮ ನವಮಿ ಸಂಭ್ರಮದಿಂದ ಆಚರಣೆ ಮಾಡಲಾಯಿತು.ಬೆಳಗ್ಗೆ ಶ್ರೀ ರಾಮನ ಮೂರ್ತಿಗೆ ಅಭಿಷೇಕ ಕರ್ಪೂರದ ಪೂಜೆ ಸಲ್ಲಿಸುವ ಮೂಲಕ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಿಸಲಾಯಿತು. ಶ್ರೀ ರಾಮನವಮಿಯನ್ನು ಯುಗಾದಿಯ ಎಂಟು ದಿನಗಳ ನಂತರ ಚೈತ್ರ ಮಾಸದ ಶುಕ್ಲ ಪಕ್ಷದಲ್ಲಿ ಆಚರಿಸಲಾಗುತ್ತದೆ.ಈ ದಿನದಂದು ರಾಮನ ಕಥಾ ವಚನಗೋಷ್ಠಿಗಳು,ಹಿಂದೂ ಪವಿತ್ರ ಮಹಾಕಾವ್ಯವಾದ ರಾಮಾಯಣ ಸೇರಿದಂತೆ ರಾಮನ ಕಥೆಗಳನ್ನು ಪಠಣ ಮಾಡಲಾಯಿತು.ಈ ಸಂದರ್ಭದಲ್ಲಿ ಗ್ರಾಮದ ಗುರು ಹಿರಿಯರು ಯುವಕರು ಮಹಿಳೆಯರು ಭಾಗಿಯಾಗಿದ್ದರು.
