ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕೋಟೆಯ ಕ್ಯಾಂಪಿನಲ್ಲಿ ಪ್ರತಿ ವರ್ಷ ಹನುಮನ ಜಯಂತಿಯನ್ನು ಏಪ್ರಿಲ್ 23 ರಂದು ಮಂಗಳವಾರದ ದಿನ ಆಚರಿಸಲಾಗುತ್ತದೆ.ಸೋಮವಾರದಂದು ಕೋಟೆಯ ಕ್ಯಾಂಪಿನಲ್ಲಿ ಶ್ರೀ ಗ್ರಾಮ ದೇವತೆ ತಾಯಮ್ಮ ದೇವಸ್ಥಾನದಲ್ಲಿ ಶ್ರೀ ಹನುಮಾನ್ ಮಾಲಾಧಾರಿಗಳು ಇರಿ ಮುಡಿಯನ್ನು ಕಟ್ಟಿದರು,ಭಕ್ತರ ತಮ್ಮ ಪಾಪಕರ್ಮಗಳ ಜೋಳಿಗೆಗೆ ಅಕ್ಷತೆಯನ್ನು ಹಾಕುವ ಮೂಲಕ,ಭಕ್ತರ ಆಸೆಯನ್ನು ಈಡೇರಿಸುವಂತೆ, ಹನುಮನ ಮಾಲಾಧಾರಿ ಗುರುಗಳ ಮೂಲಕ ಇರುಮುಡಿಯನ್ನು ಕಟ್ಟಿದರು,ಭಕ್ತರಿಗೆ ಪ್ರಸಾದ ಸೇವೆ ಮಾಡಿಸಲಾಯಿತು,ಸೋಮವಾರ ಸಾಯಂಕಾಲ ಇರುಮುಡಿ ಮೂಲಕ ತಾಲೂಕಿನ ಶ್ರೀ ಅಂಜನಾದ್ರಿ ಬೆಟ್ಟಕ್ಕೆ ಪಾದಯಾತ್ರೆ ಮಾಡಿದರು,ಹನುಮ ಜಯಂತಿಯನ್ನು ಭಾರತದಾದ್ಯಂತ ವ್ಯಾಪಕವಾಗಿ ಆಚರಣೆ ಮಾಡಲಾಗುತ್ತದೆ,ಹನುಮಂತನ ಜನ್ಮದ ಸ್ಮರಣಾರ್ಥ ಆಚರಿಸಲಾಗುತ್ತದೆ.ಇದನ್ನು ಚೈತ್ರ ಮಾಸದಲ್ಲಿ ಆಚರಿಸಲಾಗುತ್ತದೆ.ಹುಣ್ಣಿಮೆಯ ದಿನದಂದು ಮಾಲಾಧಾರಿಗಳು ತಮ್ಮ ಇಷ್ಟಾರ್ಥಗಳನ್ನು ಹಾಗೂ ಭಕ್ತರ ಬೇಡಿಕೆಯನ್ನು ಈಡೇರಿಸಿ ಎಂದು ಹನುಮನಲ್ಲಿ ಸ್ಮರಿಸಿ ಮಾಲೆಯನ್ನು ತೆಗೆಯುತ್ತಾರೆ.
ಈ ಸಂದರ್ಭದಲ್ಲಿ ಹೊಸಕೆರ ಗ್ರಾಮ ಸಿಂಗನಾಳ, ಕೋಟೆ ಕ್ಯಾಂಪ್ ಸುತ್ತಮುತ್ತಲಿನ,ಮಾಲಾಧಾರಿ ಭಕ್ತರು ಮತ್ತು ಗ್ರಾಮ ಪಂಚಾಯತಿ ಸದಸ್ಯರು ಗ್ರಾಮದ ಗುರು-ಹಿರಿಯರು,ಮಹಿಳೆಯರು, ಭಾಗಿಯಾಗಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.