ಎಲ್ಲಾ ನನ್ನ ಆತ್ಮೀಯ ಕನ್ನಡ ಮನಸ್ಸುಗಳಿಗೆ,ಶರಣ ಬಂಧುಗಳಿಗೆ ಆತ್ಮಿಯ ಶರಣು ಶರಣಾರ್ಥಿಗಳು…
ಇದೆ 2024ರ ಬಸವ ಶಕೆ 892 ಮೇ 10ರಂದು 893ನೇ ಕನ್ನಡ ನಾಡಿನ ಸಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿಯ ಪ್ರಯುಕ್ತವಾಗಿ *”ಕನ್ನಡ ಮಹಾತ್ಮ ಬಸವಣ್ಣ”,”ವಿಶ್ವ ಲಿಂಗಾಯತ ಚಿಂತನ ವೇದಿಕೆ”,”ವಿಶ್ವಗುರು ಬಸವೇಶ್ವರ ಟ್ರಸ್ಟ್ ರಿ ಕೊಪ್ಪಳ” ಫೇಸ್ಬುಕ್ ಪೇಜ್ ಗಳ ಸಹಯೋಗ ಮತ್ತು”ಶರಣ ಚರಿತ್ರೆ”ಯೂಟ್ಯೂಬ್ ಚಾನೆಲ್ ಸಹಯೋಗದೊಂದಿಗೆ ಜಗತ್ತಿಗೆ ವಿಶ್ವ ಸಂದೇಶವನ್ನು ನೀಡಿದ “ಕನ್ನಡ ನಾಡಿನ ಸಾಂಸ್ಕೃತಿಕ ನಾಯಕ ಬಸವಣ್ಣನವರ ವಿಶ್ವಮಾನವ ಸಂದೇಶವನ್ನ ಸಾರಿ ಸಾರಿ ಹೇಳೋಣ”ಎಂಬ ಸಾಮಾಜಿಕ ಜಾಲತಾಣದಲ್ಲಿ ವೇದಿಕೆ ಒಂದನ್ನು ಸೃಷ್ಟಿಸಿದೆ.
ಈ ವೇದಿಕೆಯ ಮುಖ್ಯ ಉದ್ದೇಶ ವಿಶ್ವಮಾನವ ಸಂದೇಶವನ್ನು ಸಾರಿದ ಬಸವಣ್ಣನವರ ಸಾಮಾಜಿಕ ಪಿಡುಗುಗಳನ್ನು ನಾಶ ಮಾಡಿದ ಅವರ ಸಮಾಜೋದ್ಧಾರ ಸುಧಾರಣೆ ಕನ್ನಡ ನಾಡಿನ ಹೆಮ್ಮೆಯ ಸಾಹಿತ್ಯ ವಚನ ಸಾಹಿತ್ಯದ ರಚನೆ ಕನ್ನಡ ನಾಡನ್ನು ಶ್ರೀಮಂತ ಗೊಳಿಸಿದ ಕಾಯಕ ದಾಸೋಹದ ವಿಚಾರವನ್ನು ಜಗತ್ತಿನ ಮೊದಲ ಪಾರ್ಲಿಮೆಂಟ್ ಅನುಭವ ಮಂಟಪವನ್ನು ಇನ್ನೂ ಅನೇಕ ವಿಚಾರಗಳನ್ನು ಹೆಮ್ಮೆಯಿಂದ ಸಾರಿ ಸಾರಿ ಹೇಳೋಣ.
ತಾವುಗಳು ಮೇಲಿನ ವಿಷಯಗಳ ಆಧಾರಿತ 5 ರಿಂದ 10 ನಿಮಿಷಗಳ ಕಾಲ ಬಸವಣ್ಣನವರ ಸಂದೇಶಗಳ ವಿಚಾರ ವಿನಿಮಯ ಮಾಡಿದ ವಿಡಿಯೋ ಕಳುಹಿಸಿಕೊಡಿ.ಎಡಿಟ್ ಮಾಡಿಕೊಡುತ್ತೇವೆ ನಮ್ಮ ಸಾಮಾಜಿಕ ಜಾಲತಾಣದಲ್ಲಿ ಮತ್ತು ನಿಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳೋಣ.
ವಿಶೇಷ ಸೂಚನೆ
ವಿಡಿಯೋ ಮಾಡುವಾಗ ಮೊಬೈಲು ಅಡ್ಡ ಹಿಡಿದು (ಲ್ಯಾಂಡ್ಸ್ಕೇಪ್ ನಲ್ಲಿ) ಮಾಡಿ.
*ಮೇಲಿನ ವಿಷಯಗಳ ಆಧಾರದಲ್ಲಿ ಸಾಧ್ಯವಾದಷ್ಟು ಮಾತಾಡಿ.
*5 ರಿಂದ 10 ನಿಮಿಷಗಳಲ್ಲಿ ಮಾತ್ರ ಇರಲಿ. ವಿಡಿಯೋವನ್ನ ದಿನಾಂಕ ಮೇ 10ರ ಒಳಗಾಗಿ ಕಳಿಸಬೇಕು.
*ಯಾವುದೇ ಬಹುಮಾನ ಇರುವುದಿಲ್ಲ.
*ವಯಸ್ಸಿನ ಮಿತಿ ಇರುವುದಿಲ್ಲ.
*ನಮ್ಮ ವಾಟ್ಸಪ್ ನಂಬರ್ ಗೆ ಕಳುಹಿಸಿಕೊಡಿ. ಡಾಕುಮೆಂಟರಿಯಲ್ಲಿ ಮಾಡಿ ಕಳಿಸಿದರೆ ತುಂಬಾ ಉತ್ತಮ.
ಮತ್ತು ನಮ್ಮ ಇಮೇಲ್ ಮತ್ತು ಟೆಲಿಗ್ರಾಂನಲ್ಲಿ ಸಹ ಕಳಿಸಬಹುದು.
ವಾಟ್ಸಾಪ್ ನಂಬರ್,Teligram-8217554473
ಇ-ಮೇಲ್-sharanacharitre@gmail.com
2024ರ ಬಸವ ಶಕೆ 892 ಮೇ 10ರಂದು 893ನೇ ಕನ್ನಡ ನಾಡಿನ ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿಯನ್ನು ಎಲ್ಲಾ ಕಡೆ ವಿಶೇಷವಾಗಿ ವಿಜೃಂಭಣೆಯಿಂದ ಮಾಡೋಣ.