ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಗ್ರಾಮದಲ್ಲಿ ರೈತರು ವಿಶಿಷ್ಠ ರೀತಿಯಲ್ಲಿ ಜೋಡೆತ್ತುಗಳನ್ನು ಮೆರವಣಿಗೆ ಮಾಡುವ ಮೂಲಕ ಬಸವ ಜಯಂತಿಯನ್ನು ಸಂಭ್ರಮದಿoದ ಆಚರಿಸಿದರು.
ರೈತರ ಸಂಗಾತಿಗಳಾದ ಎತ್ತುಗಳನ್ನು ಬೆಳಿಗ್ಗೆಯಿಂದ ಶುಚಿಗೊಳಿಸಿ ಬಣ್ಣಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿ ನೈವೇದ್ಯ ನೀಡಲಾಯಿತು.ಮಾರುತೇಶ್ವರ ಓಣಿ, ಬಸವೇಶ್ವರ ಓಣಿ ಮತ್ತು ವಿವಿಧ ಓಣಿಯ ರೈತರು ೫ಕ್ಕೂ ಹೆಚ್ಚು ಜೋಡೆತ್ತುಗಳನ್ನು ಹಾಗೂ ಜಗಜ್ಯೋತಿ ಬಸವೇಶ್ವರರ ಭಾವಚಿತ್ರವನ್ನು ಗ್ರಾಮದಲ್ಲಿ ವಾದ್ಯ ಮೇಳದೊಂದಿಗೆ ವೈಭವದಿಂದ ಮೆರವಣಿಗೆ ಮಾಡಲಾಯಿತು.ಇದಕ್ಕೆ ಮೊದಲು ಮಾರುತೇಶ್ವರ ಹಾಗೂ ಬಸವೇಶ್ವರ ದೇವಾಲಯರಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಮಧ್ಯಾಹ್ನ ಪ್ರಾರಂಭಗೊoಡು.ಸಾಯಂಕಾಲದವರಿಗೆ ಜರುಗಿದ ಜೋಡೆತ್ತುಗಳ ಮೆರವಣಿಗೆಯಲ್ಲಿ ಗ್ರಾಮದ ರೈತರು ಯುವಕರು ಭಾಗವಹಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.