ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಕು॥.ಸಾಯಿನಾಗೇಶ್‌ಕಂಚಿ ತಂದೆ ಚನ್ನಪ್ಪಕಂಚಿ ಇವರು 2023-24 ನೇ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕಾರಟಗಿ ತಾಲ್ಲೂಕಿಗೆ ಪ್ರಥಮ ಸ್ಥಾನ ಹಾಗೂ ಕೊಪ್ಪಳ ಜಿಲ್ಲೆಗೆ ಏಳನೇ ಸ್ಥಾನವನ್ನು (625/611 ಅಂಕ- 97.76%)ಪಡೆದು ಅಪಾರ ಕೀರ್ತಿಯನ್ನು ಶಾಲೆಗೆ ಹಾಗೂ ತಾಲ್ಲೂಕಿಗೆ ತಂದಿರುವ ಇವರಿಗೆ ತಾಲೂಕ ಆಡಳಿತ ಹಾಗೂ ಶಿಕ್ಷಣ ಇಲಾಖೆ ವತಿಯಿಂದ ಸನ್ಮಾನವನ್ನು ಮಾಡಲಾಯಿತು.
ಕಾರಟಗಿ ತಾಲೂಕಿನ ತಹಶೀಲ್ದಾರ್ ಹಾಗೂ ದಂಡಾಧಿಕಾರಿಗಳಾದ ಶ್ರೀಎಮ್.ಕುಮಾರಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀವೆಂಕಟೇಶ ರಾಮಚಂದ್ರಪ್ಪ ಹಾಗೂ ಶಿಕ್ಷಣ ಸಂಯೋಜಕರಾದ ಶ್ರೀಟಿ.ಸಿ.ರಾಘವೇಂದ್ರ ರವರು,ಪ್ರಥಮ ಸ್ಥಾನ ಪಡೆದಿರುವ ಕು॥ಸಾಯಿನಾಗೇಶ್‌ಗೆ ಸನ್ಮಾನವನ್ನು ನೆರವೇರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕಿಗೆ ಪ್ರಥಮ ಸ್ಥಾನವನ್ನು ಹಾಗೂ ಶೇಕಡಾ 100% ಫಲಿತಾಂಶವನ್ನು ತರುವಲ್ಲಿ ಶ್ರಮಿಸಿದ ಕೇಂಬ್ರಿಡ್ಜ್ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಎಲ್ಲಾ ಶಿಕ್ಷಕರ ಪರವಾಗಿ ಶಾಲೆಯ ಕಾರ್ಯದರ್ಶಿಗಳು ಹಾಗೂ ಆಡಳಿತಾಧಿಕಾರಿಗಳಾದ ಶ್ರೀಮಲ್ಲಿಕಾರ್ಜುನ ಬಿಚ್ಚಗಲ್ ರವರಿಗೆ ತಹಶೀಲ್ದಾರ್‌ರು, ಕ್ಷೇತ್ರಶಿಕ್ಷಣಾಧಿಕಾರಿಗಳು ಮತ್ತು ಶಿಕ್ಷಣ ಸಂಯೋಜಕರು ಸನ್ಮಾನವನ್ನು ಮಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಪ್ರಾಚಾರ್ಯರಾದ ಶ್ರೀ ಡ್ಯಾನಿಯಲ್,ಉಪ ಪ್ರಾಚಾರ್ಯರಾದ ಶ್ರೀಮತಿ ಸೌಮ್ಯಶ್ರೀ ಎಸ್.ಪಿ,ಅಕೌಂಟೆಂಟ್ ಶ್ರೀ ಬಸವರಾಜ ಯರಡೋಣ,ಶಿಕ್ಷಕರಾದ ಕು.ಮೇಘಾದಿವಟರ್ ಮತ್ತು ದೈ.ಶಿ. ಶ್ರೀ ಸಂಗಮೇಶ ಪಾಲಕರಾದ ಶ್ರೀ ಚನ್ನಪ್ಪ ಕಂಚಿ ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.