ಆಕಾಶ ಎತ್ತರ ಏರಿ
ಜೀವನ ನಡೆಸುವ ಈ ಸಂದರ್ಭದಲ್ಲಿ
ಹಾರಿ ಹಾರಿ ಸುಸ್ತಾದವು ರೆಕ್ಕೆಗಳು ಇಲ್ಲಿ
ಸಂಸಾರ ಸಾಗಿಸಲು ಗೂಡು ಕಟ್ಟಿಕೊಂಡೆವು ನಾವು ಅಲ್ಲಿ
ಮರದ ಕೊಂಬೆಗಳಲ್ಲಿ,ಮನೆಗಳ ಚಾವಣಿಯಲ್ಲಿ
ಯಾರು ಕಳಿಸಲಿಲ್ಲ ಶಿಕ್ಷಕರು ಇಲ್ಲಿ
ಗೂಡು ಹೆಣೆಯಲಿಕ್ಕೆ ತಂದೆವು ಗರಕೆಗಳನ್ನು ಅಲ್ಲಲ್ಲಿ
ಆಹಾರಕ್ಕಾಗಿ ಪರದಾಡಬೇಕು ಊರೂರುಗಳಲ್ಲಿ
-ಚಂದ್ರಶೇಖರಚಾರಿ ಎಂ,ಶಿಕ್ಷಕರು.