ಭಗವದ್ಗೀತೆಯಲ್ಲಿ ಕೃಷ್ಣನು “‘”ಯೋಗಃ ಕರ್ಮಸು ಕೌಶಲ್ಯಂ ಎಂದು ಹೇಳಿದ್ದಾನೆ.ಯೋಗವು ಕೇವಲ ಶರೀರದ ಆರೋಗ್ಯಕ್ಕೆ ಅಷ್ಟೇ ಅಲ್ಲ ಮಾನಸಿಕ ಆರೋಗ್ಯಕ್ಕೂ ಅವಶ್ಯಕ.
ಅಂತರಾಷ್ಟ್ರೀಯ ಮಟ್ಟದಲ್ಲಿ ಜೂನ್ 21ರಂದು ಯೋಗ ದಿನಾಚರಣೆಯನ್ನು ಆಚರಿಸಿ ಅದರ ಮಹತ್ವವನ್ನು ಸಾರಲಾಗುತ್ತಿದೆ.
ಶರೀರ ಮಾಧ್ಯಮ0 ಖಲು ಧರ್ಮ ಸಾಧನಮ್ ಎಂಬಂತೆ ಸಾಧನೆಗೆ ಆರೋಗ್ಯವು ಅವಶ್ಯಕ
ನಾವು ಯೋಗದಿಂದ ಕೇವಲ ಆರೋಗ್ಯವನ್ನು ಮಾತ್ರ ಸಾಧಿಸದೆ ಉತ್ತಮ ಕೌಶಲ್ಯದಿಂದ ಉತ್ತಮ ಸಮಾಜಕ್ಕೆ ಕೊಡುಗೆಯನ್ನು ಕೊಟ್ಟಂತಾಗುತ್ತದೆ.
ವಿಶ್ವಗುರು ಭಾರತದ ಈ ಪರಂಪರೆಯನ್ನು ಜಗತ್ತಿನ ಎಲ್ಲದ್ದೇಶಗಳು ಒಪ್ಪಿಕೊಂಡಿವೆ.
ಬನ್ನಿ ಹೆಮ್ಮೆಯಿಂದ ಯೋಗವನ್ನು ಜೀವನದಲ್ಲಿ ಅಳವಿಸಿಕೊಂಡಾಗ ನಮ್ಮ ಜೀವನವೇ ಸಾರ್ಥಕವಾಗುತ್ತದೆ.
ಸರ್ವೇ ಜನಾಃ ಸುಖಿನೋ ಭವಂತು.
-ಗಾಯತ್ರಿ ಸುಂಕದ,ಬಾದಾಮಿ