ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಸರಕಾರಿ ಪ್ರೌಢ ಶಾಲೆಯಲ್ಲಿ 10 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಬೆಳಗ್ಗೆ ಏಳು ಗಂಟೆಯಿಂದ ಶಾಲೆಯ ವಿದ್ಯಾರ್ಥಿಗಳಿಗೆ ಯೋಗಾಬ್ಯಾಸ ವಿವಿಧ ಭಂಗಿಗಳನ್ನು ಹಾಗೂ ಆಸನಗಳನ್ನು ಮತ್ತು ಪ್ರಾಣಾಯಾಮ ಸೇರಿದಂತೆ ದ್ಯಾನ ಮಾಡಿಸುವ ಮೂಲಕ ಯೋಗದ ಮಹತ್ವವನ್ನು ಕಾರ್ಯಕ್ರಮದಲ್ಲಿ ತಿಳಿಸಲಾಯಿತು.
ಈ ವೇಳೆಯಲ್ಲಿ ಶಾಲೆಯ ಶಿಕ್ಷಕ ವೃಂದದ ಸಹಯೋಗದಲ್ಲಿ ಶಾಲೆಯ ಹಳೆ ವಿದ್ಯಾರ್ಥಿಗಳ ಯೋಗ ತರಬೇತಿದಾರ ಟೀಮ್ ವತಿಯಿಂದ ಯೋಗದ ಹುಟ್ಟು, ಬೆಳವಣಿಗೆ ಹಾಗೂ ಯೋಗವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದಾಗುವ ಪ್ರಯೋಜನೆಗಳನ್ನು ತಿಳಿಸಲಾಯಿತು.
ಶಾಲೆಯ ಶಾಲೆಯ ಹಳೆ ವಿದ್ಯಾರ್ಥಿನಿ ಯೋಗ ತರಬೇತಿದಾರರಾದ ದೀಪಾ ಬಾಳಾಪುರ ಮಾತನಾಡಿ ಯೋಗ ಧ್ಯಾನ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಉತ್ತಮ ವ್ಯಕ್ತಿಗಳಾಗಿ ಹಾಗೂ ಶೈಕ್ಷಣಿಕ ರಂಗದಲ್ಲಿ ಏನನ್ನು ಬೇಕಾದರೂ ಸಾಧಿಸುವ ಶಕ್ತಿ ನೀಡಬಲ್ಲದು ಎಂದರು .
ಶಾಲೆಯ ಶಿಕ್ಷಕರಾದ ಚನ್ನಬಸಪ್ಪ ಮಾತನಾಡಿ ವಿದ್ಯಾರ್ಥಿಗಳ ಜೀವನದಲ್ಲಿ ಧ್ಯಾನ ಮತ್ತು ಯೋಗದಂತಹ ಚಟುವಟಿಕೆಗಳನ್ನು ಅಳವಡಿಸಿಕೊಳ್ಳುವುದರಿಂದ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಇರುವಿರಿ ನಿತ್ಯ ಇದನ್ನು ಜೀವನದಲ್ಲಿ ಅಳವಡಿಸಿಕೊಂಡರೆ ದೇಹದ ಸ್ಥಿತಿ ಹಾಗೂ ಮಾನಸಿಕ ಸ್ಥಿತಿ ಸುಗಮವಾಗಿರುತ್ತದೆಂದರು.
ಈ ಸಂದರ್ಭದಲ್ಲಿ ಶಾಲೆಯ ಎಸ್ಡಿಎಂ ಸಿ ಅದ್ಯಕ್ಷರಾದ ಮೈಬೂಬ ಪಾಷ್ ಶಾಲೆಯ ಶಿಕ್ಷಕರಾದ ಮಾಂತೇಶ ,ಅಯ್ಯನಗೌಡ ,ಚನ್ನಬಸಪ್ಪ ,ಸೈಯಾದ ಸರ್ ,ಕಲಾವತಿ ಹಾಗೂ ಯೋಗ ಶಿಕ್ಷಕರಾದ ಹನುಮೇಶ ಭಾವಿಕಟ್ಟಿ ,ಬಸವರಾಜ ,ರಾಘವೇಂದ್ರ ,ದೀಪಾ ಹಾಗೂ ಶಾಲೆಯ ಸಿಬ್ಬಂದಿ ವರ್ಗ ಶಾಲೆಯ ಮಕ್ಕಳು ಭಾಗಿ ಇದ್ದರು.
