ಕೊಪ್ಪಳ:ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕ ಮತ್ತು ಬಾಲಕಿಯರ ವಸತಿ ನಿಲಯಕ್ಕೆ ಅರ್ಜಿ ಆಹ್ವಾನಿಸಿದ್ದು, ಸರ್ವರ್ ಸಮಸ್ಯೆಯಿಂದ ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ಉಂಟಾಗಿದೆ ಕೂಡಲೇ ಸರಿಪಡಿಸಬೇಕೆಂದು ಗ್ರಾಮ ಮತ್ತು ನಗರ ಸಬಲೀಕರಣದ ಪ್ರದಾನ ಕಾರ್ಯದರ್ಶಿಯಾದ ಯಮನೂರ ನಾಯಕ ಬುನ್ನಟ್ಟಿ ಆಗ್ರಹ ಸಿದ್ದಾರೆ.
ಜೂನ್-15 ರಿಂದ ಮೆಟ್ರಿಕ್ ಪೂರ್ವ ಬಾಲಕ ಮತ್ತು ಬಾಲಕಿಯರ ವಸತಿ ನಿಲಯಕ್ಕೆ ಅರ್ಜಿಯನ್ನು ಆಹ್ವಾನಿಸಿದ್ದು ಇಲ್ಲಿಯವರೆಗೂ ಯಾವುದೇ ಅರ್ಜಿಯು ಸಕ್ರಿಯಗೊಂಡಿಲ್ಲ. ಸರ್ವರ್ ಸಮಸ್ಯೆಯಿಂದ ವಿದ್ಯಾರ್ಥಿಗಳು ಪ್ರತಿದಿನವೂ ಅಲೆದಾಡುವಂತಾಗಿದೆ. ಕೂಡಲೇ ಸಮಸ್ಯೆಯನ್ನು ಕಳೆದುಕೊಂಡು ಪರಿಹಾರ ಒದಗಿಸಬೇಕು ಅಲ್ಲದೇ ಕೊನೆಯ ದಿನಾಂಕವನ್ನು ಹೆಚ್ಚಿಸಬೇಕು.
ಇದರಿಂದ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿ ಗಳಿಗೆ ಅನುಕೂಲವಾಗುತ್ತದೆ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿ ಗಳಿಗೆ ಶಿಕ್ಷಣಿಕ ಸಹಾಯ ಮಾಡಿದಂತಗುತ್ತದೆ.