ಕೊಪ್ಪಳ:ವಿದ್ಯಾರ್ಥಿನಿಯರು ಸ್ವಂತ ದುಡಿಮೆ ಮತ್ತು ಸ್ವತಂತ್ರವಾಗಿ ಜೀವನ ನಡೆಸುವ ಸಾಮರ್ಥ್ಯ ಬೆಳಸಿಕೊಳ್ಳಬೇಕು ಎಂದು ಕಾಲೇಜಿನ ಉದ್ಯೋಗ ಕೋಶದ ಸಂಚಾಲಕ ಮತ್ತು ಸಹಾಯಕ ಪ್ರಾಧ್ಯಾಪಕ ವಿಠೋಬ ಹೇಳಿದರು.
ಕೊಪ್ಪಳ ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಬುಧುವಾರದಂದು ಹುಬ್ಬಳ್ಳಿಯ ದೇಶಪಾಂಡೆ ಸ್ಕಿಲಿಂಗ್ ಮತ್ತು ಉದ್ಯೋಗ ಕೋಶದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ಕಿಲಿಂಗ್ ಪ್ಲಸ್ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.
ಹುಬ್ಬಳ್ಳಿಯ ಸ್ಕಿಲಿಂಗ್ ದೇಶಪಾಂಡೆ ಯಲ್ಲಿ ತರಬೇತಿ ಪಡೆದ ನಮ್ಮ ಕಾಲೇಜಿನ ಸುಮಾರು 15 ರಿಂದ 20 ವಿದ್ಯಾರ್ಥಿನಿಯರು ವಿವಿಧ ಪ್ರದೇಶಗಳಲ್ಲಿ ಉದ್ಯೋಗಗಳನ್ನು ಮಾಡುತ್ತಿದ್ದಾರೆ. ದೇಶಪಾಂಡೆ ಫೌಂಡಷನ್ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಂವಹನ ಕೌಶಲ್ಯಯಂತಹ ವಿವಿಧ ರೀತಿಯ ಕೌಶಲ್ಯಗಳನ್ನು ಕಲಿಸುತ್ತಿದೆ.
ನೀವು ವಿಮರ್ಶೆತ್ಮಕವಾಗಿ ಆಲೋಚನೆ ಮಾಡುವ ಕಲೆಯನ್ನು ಕಲಿಯಬೇಕು.
ಜ್ಞಾನ, ಕೌಶಲ್ಯ ಕಾನೂನು ಮತ್ತು ಪರಿಸರ ಕುರಿತು ತಿಳುವಳಿಕೆ ಹೊಂದಿರಬೇಕು.ಎಲ್ಲಾ ಕೌಶಲ್ಯಗಳು ನಿರಂತರ ಪ್ರಯತ್ನದಿಂದ ಬರುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ.ಗಣಪತಿ ಲಮಾಣಿಯವರು ಇಂದು ಸರಕಾರಿ ಪದವಿ ಕಾಲೇಜಿಗಳಲ್ಲಿ ಬಹಳಸ್ಟು ಮೂಲಭೂತ ಸೌಲಭ್ಯಗಳಿವೆ. ಇವುಗಳನ್ನು ನೀವು ಉಪಯೋಗಿಸಿಕೊಳ್ಳಿ. ನಿಮ್ಮ ಆಸಕ್ತಿಗೆ ತಕ್ಕಂತೆ ವಿದ್ಯಾಭ್ಯಾಸ ಮಾಡಿ. ಓದಿದ್ದಿಕಿಂತ ತರಬೇತಿ ಮೂಲಕ ಕಲಿತ ಕೌಶಲ್ಯಗಳು ಬಹಳ ದಿನ ಉಳಿಯುತ್ತವೆ. ಕೌಶಲ್ಯಗಳನ್ನು ಕಲಿಯುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ ಎಂದರು.
ವೇದಿಕೆಯಲ್ಲಿ ಕಾಲೇಜಿನ ಉಪನ್ಯಾಸಕರಾದ ಡಾ.ಪ್ರದೀಪ್ ಕುಮಾರ್, ಡಾ ಅಶೋಕ ಕುಮಾರ್, ಡಾ. ನರಸಿಂಹ, ಸುಮಿತ್ರಾ, ಶ್ರೀಕಾಂತ ಹುಬ್ಬಳ್ಳಿಯ ದೇಶಪಾಂಡೆ ಸ್ಕಿಲಿಂಗ್ ನ ಕೊಪ್ಪಳದ ಕ್ಲಸ್ಟರ್ ಮುಖ್ಯಸ್ಥ ಸೂರ್ಯನ್ನ,ಶಾರದಾ,ಸಾನಿಯ, ಇಂಪಾಕ್ಟ್ ಡಿವಿಜನ್ ಮುಖ್ಯಸ್ಥ ನಾಗರಾಜ್ ಹುಲಿಕಟ್ಟಿ ಮತ್ತು ಅತಿಥಿ ಉಪನ್ಯಾಸಕರು ಮತ್ತು ವಿದ್ಯಾರ್ಥಿನಿಯರು ಇದ್ದರು.ವಿದ್ಯಾರ್ಥಿನಿಯರು ಅನಿಸಿಕೆಗಳನ್ನು ಹಂಚಿಕೊಂಡರು.
ವಿದ್ಯಾರ್ಥಿನಿಯರಿಗೆ ತರಬೇತಿ ಕೌಶಲ್ಯ ಕುರಿತು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಮತ್ತು ಹುಬ್ಬಳ್ಳಿಯ ದೇಶಪಾಂಡೆ ಸ್ಕಿಲಿಂಗ್ ನಡುವೆ ಎಂಓ ಯು ಮಾಡಿಕೊಳ್ಳಲಾಯಿತು.
ಕಳೆದ ವರ್ಷ ನಮ್ಮ ಕಾಲೇಜಿನಿಂದ ದೇಶಪಾಂಡೆ ಸ್ಕಿಲಿಂಗ್ ನಲ್ಲಿ ತರಬೇತಿ ಪಡೆದು ಪ್ರಸ್ತುತ ಉದ್ಯೋಗ ಮಾಡುತ್ತಿರುವ ಸುಮಾರು ಏಳು ಜನರ ಮಾಹಿತಿಯನ್ನು ಕಾಲೇಜಿನ ಪ್ರಾಚಾರ್ಯರಿಗೆ ಸಲ್ಲಿಸಲಾಯಿತು.
ಪಾರ್ವತಿ ಸ್ವಾಗತಿಸಿದರು.ಶರಣಮ್ಮ ನಿರೂಪಿಸಿ ವಂದಿಸಿದರು.