ಕೊಪ್ಪಳ:ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಲಾವಿದರ ಗುರುತಿನ ಚೀಟಿಯ ಬಗ್ಗೆ ಪರಿಶೀಲನೆಗಾಗಿ ಕೊಪ್ಪಳ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಯ ಕಲಾವಿದರಿಂದ ಅರ್ಜಿ ಆಹ್ವಾನಿಸಿ ಜೂನ್ 25 ಕ್ಕೆ ಮುಕ್ತಾಯಗೊಳಿಸಿದ್ದರಿಂದ ಕಲಾವಿದರು ಗುರುತಿನ ಚೀಟಿ ಪಡೆಯಲು ಸಾಧ್ಯವಾಗಿಲ್ಲ, ನಮ್ಮ ಬಡ ಕಲಾವಿದರು,ಸಾಹಿತಿಗಳಿಗೆ ಆರ್ಥಿಕವಾಗಿ ಹಿಂದುಳಿದ್ದಾರೆ ಮತ್ತು ಕೃಷಿ ಚಟುವಟಿಕೆಗಳಲ್ಲಿ ಬಿತ್ತುವದು ,ಹರಗುವದು,ಭೂಮಿಯ ಕೆಲಸದಲ್ಲಿ ನಿರತರಾಗಿದ್ದಾರೆ ಆದ್ದರಿಂದ ಅವರಿಗೆ ಇನ್ನೂ ಎರಡು ತಿಂಗಳ ಅವಕಾಶ ಕಲ್ಪಿಸಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಜಾಗೃತಿ ಸಮಿತಿ ಮಾಜಿ ಸದಸ್ಯ,ಸಾಹಿತಿ ಶರಣಬಸಪ್ಪ ದಾನಕೈ ಅವರು ಒತ್ತಾಯಿಸಿದ್ದಾರೆ,ನಿಜವಾದ ಬಡ ಕಲಾವಿದರನ್ನು ಗುರುತಿಸಲಾರದೆ ಅವರಿಗೆ ಯಾವುದೆ ರೀತಿಯ ಕಾರ್ಯಕ್ರಮ,ಮಾಶಾಸನ ನೀಡಲಾರದೆ ಇಂತಹ ಯೋಜನೆಗಳು ಉಳ್ಳವರ ಪಾಲಾಗಿವೆ ಒಬ್ಬ ಬಡ ಕಲಾವಿದ 58 ವರ್ಷವಾದ ಮೇಲೆ ಮಾಶಾಸನಕ್ಕೆ ಅರ್ಜಿ ಹಾಕಿದರೆ ಆ ವ್ಯಕ್ತಿ ಸತ್ತ ಮೇಲೆ ಮಾಶಾಸನ ಬರುತ್ತದೆ ಇಂತಹ ಕಲಾವಿದರು ವಿವಿಧ ಕಲಾ ಕ್ರೇತ್ರದಲ್ಲಿ ಸೇವೆ ಸಲ್ಲಿಸಿದರು ಕೂಡಾ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಇನ್ನು ಮುಂದೆ ಈ ಕಲಾವಿದರಿಗೆ, ಸಾಹಿತಿಗಳಿಗೆ ಒಂದು ತಿಂಗಳಿಗೆ ರೂ.5 ಸಾವಿರ ಮಾಶಾಸನ ಹೆಚ್ಚಿಸಬೇಕು ಮತ್ತು ವಯೋಮಿತಿ 50 ವರ್ಷಕ್ಕೆ ಇಳಿಕೆಯಾಗಬೇಕು ಈ ವಿಚಾರದಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುವದು ಸೂಕ್ತವಲ್ಲ ಮತ್ತು ಮುಖ್ಯ ಮಂತ್ರಿ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಚಿವರು ,ಬಡ ಕಲಾವಿದರ ಬದುಕಿಗೆ ಸ್ಪಂದಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡದ ಜಾಗೃತಿ ಸಮತಿ ಸದಸ್ಯ,ಸಾಹಿತಿ ಶರಣಬಸಪ್ಪ ದಾನಕೈ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮತ್ತು ಪ್ರತಿಯೊಂದು ಜಿಲ್ಲೆಯ ಸಹಾಯಕ ನಿರ್ದೆಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರು ಗಮನಿಸಿ ಮಾಶಾಸನಕ್ಕಾಗಿ ಕಲಾವಿದರು ಅರ್ಜಿ ಸಲ್ಲಿಸಿ ಐದಾರು ವರ್ಷ ಕಳೆದರೂ ಮಾಶಾಸನ ಬಂದಿಲ್ಲ ಇಂತಹ ಕಲಾವಿದರಿಗೆ ಇನ್ನಾದರೂ ಮಾಶಾಸನ ನೀಡುವಲ್ಲಿ ಮುಂದಾಗುತ್ತಾರಾ ಎನ್ನುವದನ್ನು ಕಾದುನೊಡಬೇಕಾಗಿದೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.