ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಪಾಪದ ಫಲವೇ ದುಃಖ ಪುಣ್ಯದ ಫಲವೇ ಸುಖ

ಯಲಬುರ್ಗಾ:ಪಾಪದ ಫಲವೇ ದುಃಖ ಪುಣ್ಯದ ಫಲವೇ ಸುಖ ನಾವು ಇನ್ನೊಬ್ಬರಿಗೆ ಒಳಿತನ್ನು ಮಾಡಬೇಕು, ಅದು ನಮಗೆ ಆಗದಿದ್ದರೆ ಇನ್ನೊಬ್ಬರಿಗೆ ಕೆಡಕನ್ನು ಬಯಸಬಾರದು ಸದಾ ಪುಣ್ಯದ ಕಾಯಕದಲ್ಲಿ ಭಾಗವಹಿಸಬೇಕು ಎಂದು ಜ್ಞಾನಸಾಗರ ಇಂಗ್ಲಿಷ್ ಕರಿಯರ್ ಅಕಾಡೆಮಿಯ ಕೊಪ್ಪಳದ ಸಂಸ್ಥಾಪಕ ಫಕೀರಸಾಬ ನೂರಭಾಷ ಅವರು ಯಲಬುರ್ಗಾ ತಾಲೂಕಿನ ದಮ್ಮೂರ ಗ್ರಾಮದ ಶ್ರೀ ಭೀಮಾಂಬಿಕಾ ದೇವಿ ದೇವಸ್ಥಾನದಲ್ಲಿ ಚತುರ್ದಶಿ ಅಂಗವಾಗಿ ಹಮ್ಮಿಕೊಂಡಿರುವ ೩೬೩ ನೇ ಶಿವಾನುಭವಗೋಷ್ಠಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಶ್ರೀ ಭೀಮಾಂಬಿಕಾ ದೇವಿಯ ಪವಾಡಗಳನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು, ಶಾಂತಿ, ನೆಮ್ಮದಿಯ ಜೀವನಕ್ಕೆ ಆಧ್ಯಾತ್ಮಿಕ ಚಿಂತನೆ ದಾರಿದೀಪವಾಗಿದೆ, ಪುರಾಣ,ಶಿವಾನುಭವ ಚಿಂತನಗೋಷ್ಠಿಯಲ್ಲಿ ಭಾಗವಹಿಸಿದಾಗ ನೆಮ್ಮದಿ ಕಾಣಲು ಸಾದ್ಯ ಎಂದು ಅಪರ ಸರ್ಕಾರಿ ವಕೀಲ ಮಲ್ಲನಗೌಡ ಎಸ್. ಪಾಟೀಲ ಅವರುಹೇಳಿದರು. ಧರ್ಮರಮಠದ ಹನುಮಂತಜ್ಞ ಹಾಗೂ ಶರಣಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು. ವಿಭೂತಿಯನ್ನು ಧರಿಸಬೇಕು,ಇಲ್ಲದಿದ್ದರೆ ವಿಭೂತಿ ಧರಿಸಿದವರ ಮುಖವನ್ನು ನೋಡಬೇಕು ಅವರಿಂದ ನಮಗೆ ಒಳ್ಳೆಯ ಫಲ ಸಿಗುತ್ತದೆ ಎಂದು ಲಕಮನಗುಳೆಯ ಮುಖ್ಯೋಪಾಧ್ಯಾಯ ಮಹೇಶ ಕಟಗೇರಿ ಮಾತನಾಡಿದರು. ಹಸಿದು ಬಂದವರಿಗೆ ಅನ್ನ ನೀರು ನೀಡುವದು ಮತ್ತು ಅವರ ಬದುಕು ಬಾಳಿಗೆ ಉತ್ತಮ ದಾರಿಯನ್ನು ತಿಳಿಸುವದು ಇದು ಪುಣ್ಯದ ಫಲವಾಗಿದೆ ಎಂದು ಶ್ರೀ ಚೀನಾ ದೇವಿ ಶಿವಾನುಭವ ಸೇವಾ ಸಮಿತಿ ಅಧ್ಯಕ್ಷ ಶರಣಬಸಪ್ಪ ದಾನಕೈ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ವೇಳೆ ಪಿಂಜಾರ ನದಾಪ್ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶೇಖಸಾಬ ನೂರಭಾಷ, ಹಿರಿಯರಾದ ರಾಜಪ್ಪ ಹಗೇದಾಳ, ಈರಣ್ಣ ಕಟಗೇರಿ, ಮೌನೇಶ ಬಡಿಗೇರ, ಯಮನೂರಪ್ಪ ಹಳ್ಳಿಕೇರಿ, ನೀಲಕಂಠಪ್ಪ ರೊಡ್ಡ‌ರ್, ಈರಪ್ಪ ರಾವಣಕಿ, ಕಳಕಪ್ಪ ಹಡಪದ, ಬಾಳಪ್ಪ ಜರಕುಂಟಿ, ಇತರರು ಇದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ