ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಕಲಮಂಗಿ ವಿ.ಡಿ.ಸಿ ಕಾರ್ಯ ಅನುಕರಣೀಯ : ಡಾ.ಜಾಸ್ಮೀನ್ ಗೊಗಾಯ್

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕಲಮಂಗಿ ಗ್ರಾಮದಲ್ಲಿ ಸುಝಲಾನ್ ಫೌಂಡೇಷನ್‌ನ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಚೆನ್ನಮಲ್ಲಿಕಾರ್ಜುನ ಗ್ರಾಮಾಭಿವೃದ್ಧಿ ಸಮಿತಿ (ವಿಡಿಸಿ) ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪುಣೆ ಮೂಲದ ಸುಝಲಾನ್ ಫೌಂಡೇಷನ್ ಮುಖ್ಯಸ್ಥರಾದ ಡಾ.ಜಾಸ್ಮೀನ್ ಗೊಗಾಯ್ ಮೆಚ್ಚುಗೆ ವ್ಯಕ್ತಪಡಿಸಿದರು.ಅವರು ತಾಲೂಕಿನ ಕಲಮಂಗಿ ಗ್ರಾಮದಲ್ಲಿ ಕಳೆದ 13 ವರ್ಷಗಳಿಂದ ನಡೆಯುತ್ತಿರುವ ಶ್ರೀ ಚೆನ್ನಮಲ್ಲಿಕಾರ್ಜುನ ಗ್ರಾಮಾಭಿವೃದ್ಧಿ ಸಮಿತಿಯು ಗ್ರಾಮದಲ್ಲಿ ನಡೆದ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ ಸಿ.ಎಸ್.ಆರ್ ತಂಡಗಳ ವ್ಯವಸ್ಥಾಪಕರನ್ನು ಉದ್ದೇಶಿಸಿ ಮಾತನಾಡುತ್ತಾ, ಗ್ರಾಮದ ಕಾರ್ಯ ನಿರ್ವಹಿಸುತ್ತಿರುವ ಗ್ರಾಮಾಭಿವೃದ್ಧಿ ಸಮಿತಿಯು ಸಮುದಾಯ ಜಾಗೃತಿ, ಶೈಕ್ಷಣಿಕ ಅಭಿವೃದ್ಧಿ, ಕೃಷಿ, ಮಹಿಳಾ ಸಬಲೀಕರಣ, ತಾಂತ್ರಿಕ ಶಿಕ್ಷಣ, ಆರೋಗ್ಯ, ಪರಿಸರ ಜಾಗೃತಿ, ಆರ್ಥಿಕ ಸಹಾಯ ಹೀಗೆ ಹತ್ತಾರು ಕೆಲಸ-ಕಾರ್ಯಗಳನ್ನು ಮಾಡುವ ಮೂಲಕ ನಮ್ಮ ಸುಝಲಾನ್ ಫೌಂಡೇಷನ್‌ಗೆ ಒಂದು ಹೆಮ್ಮೆಯ ಸಮಿತಿಯಾಗಿ ಕಲಮಂಗಿ ಗ್ರಾಮಾಭಿವೃದ್ಧಿ ಸಮಿತಿ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ವೀಕ್ಷಣೆಗೆ ಬಂದಿರುವ ವಿವಿಧ ರಾಜ್ಯಗಳ ವ್ಯವಸ್ಥಾಪಕರು ಈ ಸಮಿತಿ ಕಾರ್ಯ ವೈಖರಿಯನ್ನು ಅಳಡಿಸಿಕೊಳ್ಳಲು ಸಲಹೆ ನೀಡಿದರು.

ವೀಕ್ಷಣೆ:ಕಲ್ಮಂಗಿ ಗ್ರಾಮದಲ್ಲಿ ಸಮಿತಿ ವತಿಯಿಂದ ಪ್ರೌಢಶಾಲೆಯಲ್ಲಿ ನೆಟ್ಟಿರುವ ಗಿಡಗಳನ್ನು ವೀಕ್ಷಣೆ ಮಾಡಿದರು. ನಂತರ ಸುಜಲಾನ್ ಫೌಂಡೇಶನ್ ಮತ್ತು ನೀಡ್ಸ್ ಸಂಸ್ಥೆ ಹಾಗೂ ಶ್ರೀ ಚನ್ನಮಲ್ಲಿಕಾರ್ಜುನ ಗ್ರಾಮ ಅಭಿವೃದ್ಧಿ ಸಮಿತಿಯಿಂದ ಆಗಿರುವ ಕಾರ್ಯಕ್ರಮಗಳ ಕುರಿತು ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಜೊತೆಗೆ ಸಂವಾದ ನಡೆಸಿದರು. ಶಾಲೆಯ ಆಂಗ್ಲ ಭಾಷಾ ಶಿಕ್ಷಕ ವೀರೇಶ ಗೋನವಾರ ಸಮಿತಿಯ ವತಿಯಿಂದ ಶಾಲೆಗೆ ಬಂದಿರುವ ವಿವಿಧ ಸೌಲಭ್ಯಗಳು ಮತ್ತು ಕಾರ್ಯ ಚಟುವಟಿಕೆಗಳ ಬಗ್ಗೆ ಸುಝಲಾನ್ ಫೌಂಡೇಷನ್ ಆಡಳಿತ ಮಂಡಳಿ ಹಾಗೂ ವಿವಿಧ ರಾಜ್ಯಗಳಿಂದ ಆಗಮಿಸಿದ ವ್ಯವಸ್ಥಾಪಕರಿಗೆ ಮಾಹಿತಿ ನೀಡಿದರು. ಶಾಲೆಯ ಮುಖ್ಯಗುರು ಮಲ್ಲಪ್ಪ ಬಾದರ್ಲಿ, ಶಿಕ್ಷಕರಾದ ಸುಭಾಷ ಪತ್ತಾರ, ಎಂ.ಮಾರುತಿ, ರೂಪಾ ಸೇರಿದಂತೆ ಸಮಿತಿ ಅಧ್ಯಕ್ಷರು ಹಾಗೂ ಇತರ ಪದಾಧಿಕಾರಿಗಳು ಹಾಜರಿದ್ದರು.

ಚರ್ಚೆ:ಗ್ರಾಮದ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಸಮಿತಿಯ ವಿವಿಧ ಕಾರ್ಯ ಚಟುವಟಿಕೆಗಳು ಮತ್ತು ತಮ್ಮ ಹಣಕಾಸಿನ ವ್ಯವಹಾರದ ಕುರಿತು, ಸರ್ಕಾರಿ ಇಲಾಖೆಗಳಿಗೆ ಪತ್ರ ವ್ಯವಹಾರ ಮಾಡಿದ ಬಗ್ಗೆ ಗ್ರಾಮ ಅಭಿವೃದ್ಧಿ ಸಮಿತಿಯವರು ತಮ್ಮ ವಿಷಯಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಸುಜಲಾನ್ ಫೌಂಡೇಷನ್ ಸಿ.ಎಸ್.ಆರ್‌ನ ಪೂಜಾ ಆರಾಧ್ಯ, ಉಜ್ವಲ ಪಲಾಂಡೆ, ವಿವಿಧ ರಾಜ್ಯಗಳ ಸುಝಲಾನ್ ಫೌಂಡೇಷನ್ ಸಿ.ಎಸ್.ಆರ್. ವ್ಯವಸ್ಥಾಪಕರಾದ ದಿಲೀಪ್ ಪಟೇಲ್, ನಿತೇಶ್ ಭಂಡಾರಿಯ (ಗುಜರಾತ), ರಾಜಸ್ಥಾನ ರಾಜ್ಯದ ಕಿಶನ್ ಜಾನಕರ್, ಆಂಧ್ರ ಪ್ರದೇಶದ ರಾಮಕೃಷ್ಣ ಗುಂಜೂರ್, ಮಧ್ಯ ಪ್ರದೇಶದ ರಾಮ್ ಕುಮಾರ್ ಕಟಿಯಾರ, ತಮಿಳುನಾಡು ರಾಜ್ಯದ ಎಸ್.ಮುರುಗನ್, ಮಹಾರಾಷ್ಟ್ರ ರಾಜ್ಯದ ಸಂಜಯ್ ಶಿವದಾಸ್, ಕರ್ನಾಟಕ ರಾಜ್ಯದ ದೀಪಕ್ ಕ್ಷೀರಸಾಗರ ಮತ್ತು ಸುಜಾತ ಅರಗಂಜಿ, ರಾಣೇಬೆನ್ನೂರು ನೀಡ್ಸ್ ಸಂಸ್ಥೆ ಸಿ.ಇ.ಓ ಎಚ್.ಎಫ್. ಅಕ್ಕಿ, ಸಂಸ್ಥೆಯ ಸುಧೀರ್ ಈ.ಟಿ, ಉಳುವೆಪ್ಪ ಅಮಾತ್ಯಣ್ಣನವರ, ಸಮಿತಿ ಹಿಂದಿನ ಸದಸ್ಯರಾದ ಗ್ರಾಮದ ಮುಖಂಡರಾದ ಶರಣೇಗೌಡ ಹಳೇಮನಿ (ಪೋಸ್ಟ್), ಶರಣೇಗೌಡ ಪೊ.ಪಾ, ಮಹಾಬಳೇಶ್ವರ ಹಳೇಮವಿ, ಶಂಕರಗೌಡ ಹಳೇಮನಿ, ಅಮ್ಮನಗೌಡ ಗುಡದೂರು, ಗ್ರಾಮಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ದಯಾನಂದ ಸ್ವಾಮಿ, ಕಾರ್ಯದರ್ಶಿ ಬಸವರಾಜ ಕುಲಕರ್ಣಿ, ಸದಸ್ಯರಾದ ಹನುಮಂತಪ್ಪ ಕೆಸರಟ್ಟಿ, ಅಯ್ಯನಗೌಡ ಹೊಸಮನಿ, ನಾಗರಾಜ ಪೊಲೀಸ್ ಪಾಟೀಲ, ಮಹಾಂತೇಶ ಕಲಕರ್ಣಿ, ಶರಣಬಸವ ಕುಲಕರ್ಣಿ, ನಾಗರಾಜ ಕುಲಕರ್ಣಿ, ಶ್ರೀ ನಿವಾಸ ಜೇರಬಂಡಿ, ಶರಣಬಸವ ಹೊಸಮನಿ, ಅನುರಾಧ ಗುಡದೂರು, ಪದ್ಮಾವತಿ ಇಲ್ಲೂರು, ಪವಿತ್ರಾ ಪೊಲೀಸ್ ಪಾಟೀಲ್, ಶ್ರೀದೇವಿ ಹಳೇಮವಿ, ಲಕ್ಷ್ಮೀ ಗುಡದೂರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ