ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ದಮ್ಮೂರ ಗ್ರಾಮದ ವಿದ್ಯಾರ್ಥಿಗಳು ಕುಂಭ ಮೇಳದೊಂದಿಗೆ ಮತ್ತು ವಾದ್ಯಗಳೊಂದಿಗೆ ಶಿಕ್ಷಣ ಸಚಿವರನ್ನು ಸ್ವಾಗತ ಕೋರಿದರು.ಮುದ್ದು ಮಕ್ಕಳೊಂದಿಗೆ ದೀಪ ಬೆಳಗಿಸಿ ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ಅವರು ಮಾತನಾಡಿ, ಖಾಸಗಿ ಶಾಲೆಗಳಲ್ಲಿ ಮಾತ್ರ ನೀಟ್,ಸಿಇಟಿ ತರಬೇತಿ ನೀಡಲಾಗುತ್ತಿತ್ತು ಇನ್ನು ಮುಂದೆ ಸರ್ಕಾರಿ ಶಾಲೆಯಲ್ಲಿ ನೀಟ್,ಸಿಇಟಿ ಪರೀಕ್ಷೆ ತರಬೇತಿಗೆ ಸಿದ್ದತೆ ಮಾಡುವದಾಗಿ ಸಚಿವರು ತಿಳಿಸಿದರು. ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ತಾಲೂಕಿನಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ವಸತಿ ಶಾಲೆ, ರೈತರಿಗೆ ಕೆರೆ, ಉತ್ತಮ ರಸ್ತೆ, ಗ್ಯಾರಂಟಿ ಭಾಗ್ಯಗಳು ಹೀಗೆ ನೂರೆಂಟು ಅಭಿವೃದ್ಧಿ ಹಾಗು ಸಾರ್ವಜನಿಕರ ಮೂಲಭೂತ ಸಮಸ್ಯೆಗಳನ್ನು ಅರಿತುಕೊಂಡು ಜನಪರ ಸೇವೆ ಮಾಡಿದ ಬಗ್ಗೆ ಅವರು ಯಲಬುರ್ಗಾ ದ ಅಗ್ನಿಶಾಮಕ ದಳ ಠಾಣೆ,ಮತ್ತು ದಮ್ಮೂರ ಹಾಗು ಕರಮುಡಿ ಗ್ರಾಮದಲ್ಲಿ ಕೆ.ಕೆ.ಆರ್.ಡಿ.ಬಿ ಅನುದಾನದಲ್ಲಿ ನೂತನ ಸರ್ಕಾರಿ ಪ್ರೌಢ ಶಾಲೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ವೇಳೆ ಜಿಲ್ಲಾಧಿಕಾರಿ ನಳೀನ ಅತುಲ್, ಅಗ್ನಿ ಶಾಮಕ ದಳದ ಅಧಿಕಾರಿ ಕೆ.ತಿಮ್ಮಾರಡ್ಡಿ, ಡಿ.ಡಿಪಿಐ ಶ್ರೀಶೈಲ ಬಿರದಾರ,ಬಿ.ಇ.ಓ ನಿಂಗಪ್ಪ ಕೆ.ಟಿ, ಅಗ್ನಿ ಶಾಮಕ ದಳದ ಸಿಬ್ಬಂದಿಗಳು,ಶಿಕ್ಷಕರು,ಜನಪ್ರತಿನಿಧಿಗಳು ಭಾಗವಹಿಸಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.