ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿಂಗನಾಳ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಸೇವಾ ಸಂಘ ಶ್ರೀ ರಾಮನಗರ, ಶ್ರೀ ವೈದೇವಿ ಆಸ್ಪತ್ರೆ ಬೆಂಗಳೂರು, ಮಾರುತಿ ಕಣ್ಣಿನ ಆಸ್ಪತ್ರೆ ,ಅಂಜನಾದ್ರಿ ರಕ್ತ ಬಂಡಾರ, ಸಂಯೋಗದಲ್ಲಿ, ಸಿಂಗನಾಳ ಪತ್ತಿನ ಸೌಹಾರ್ದ ಸಹಕಾರಿ ಬ್ಯಾಂಕ್, ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಸಿಂಗನಾಳ ಇವರ ಸಂಯುಕ್ತ ಆಶ್ರಯದಲ್ಲಿ,ಗ್ರಾಮದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಕ್ಯಾನ್ಸರ್ ತಪಾಸಣೆ, ಉಚಿತ ರಕ್ತದಾನ ಶಿಬಿರ ಹಾಗೂ ನೇತ್ರ ಪರೀಕ್ಷಾ ಶಿಬಿರವನ್ನು ಏರ್ಪಡಿಸಲಾಯಿತು.
ಮುಖ್ಯ ಅತಿಥಿಗಳಾದ ಶ್ರೀ ಪಂಪಾಪತಿ ಸಾಹುಕಾರ ಮಾತನಾಡಿ ಒಂದು ಜೀವಿಯ ದೇಹ-ಮನಸ್ಸು ಸಂಪೂರ್ಣ ಸಮತೋಲನದಲ್ಲಿರುವ ಸ್ಥಿತಿಯನ್ನು ಆರೋಗ್ಯ ಎಂದು ಕರೆಯಬಹುದು ವಿಶ್ವ ಆರೋಗ್ಯ ಸಂಸ್ಥೆಯ ೧೯೪೫ ರ ಹೇಳಿಕೆಯ ಪ್ರಕಾರ
ಆರೋಗ್ಯಕರ ಜೀವನಕ್ಕೆ ಸಮತೋಲನವುಳ್ಳ ಆಹಾರ ಅವಶ್ಯಕ”ಆರೋಗ್ಯವೆಂದರೆ ಸಂಪೂರ್ಣ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸುಸ್ಥಿತಿ – ಕೇವಲ ರೋಗ, ಭಾದೆಗಳ ಗೈರು ಹಾಜರಿಯಷ್ಟೇ ಅಲ್ಲ”
ಆರೋಗ್ಯವೇ ಭಾಗ್ಯ ಅದರಿಂದ ಗ್ರಾಮಕ್ಕೆ ನೇರವಾಗಿ ವೈದ್ಯರು ನಿಮ್ಮ ಬಳಿ ಆಗಮಿಸ್ತಾರೆ, ನಿಮ್ಮ ನಿಮ್ಮ ಆರೋಗ್ಯದ ಬಗ್ಗೆ ಎಚ್ಚರಿಸಿಕೊಂಡು ತಪಾಸಣೆಯನ್ನು ಮಾಡಿಸಿಕೊಳ್ಳಿ ಎಂದರು. ನಂತರ ವೈದೇವಿ ಆಸ್ಪತ್ರೆಯ ಡಾ. ಮಲ್ಲಿಕಾರ್ಜುನ್ ರವರು ಮಾತನಾಡಿ, ನಾವು ಬೆಂಗಳೂರಿನಿಂದ ಈ ಹಳ್ಳಿವರೆಗೂ ಬಂದಿದ್ದು, ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ತಪಾಸಣೆಯನ್ನು ಮಾಡಿಸಿಕೊಳ್ಳಿ, ನಿಮಗೆ ಯಾವುದೇ ಹಾರೋಗ್ಯದಲ್ಲಿ ಸಮಸ್ಯೆ ಕಂಡರೆ ನಮ್ಮ ಆಸ್ಪತ್ರೆಗೆ ಉಚಿತವಾಗಿ ಆರೋಗ್ಯ ತಪಾಸಣೆಯನ್ನು ಮಾಡುತ್ತೇವೆ ಎಂದರು. ಈ ಒಂದು ಸಂದರ್ಭದಲ್ಲಿ 300ಕ್ಕೂ ಹೆಚ್ಚು ಶಿಬಿರದಲ್ಲಿ ರೋಗಿಗಳಿಗೆ ಆರೋಗ್ಯ ತಪಾಸಣೆಯನ್ನು ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಸಿಂಗನಾಳ ಪತ್ತಿನ ಸೌವರ್ದ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಎಸ್ ಮಲ್ಲಿಕಾರ್ಜುನ, ಗ್ರಾಮದ ಮುಖಂಡರಾದ , ತಿಮ್ಮಣ್ಣ ಕನಕ ರೆಡ್ಡಿ, ಶೇಖರ ಗೌಡ ಸೌಕಾರ್, ಸಂಗಾಪುರ ಮಲ್ಲಿಕಾರ್ಜುನ, ರಮೇಶ್ ಗೌಡ, ವೆಂಕಟೇಶ್ ಐನಾಯಕ, ಮಂಜುನಾಥ ಹಟ್ಟಿ, ಗಂಗಪ್ಪ ಹಟ್ಟಿ, ಮಲ್ಲನಗೌಡ, ಸಿದ್ದಾಪುರ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಸಹಾಯಕರು, ಮಾರುತಿ ಕಣ್ಣಿನ ಆಸ್ಪತ್ರೆ ಸಿಬ್ಬಂದಿಯವರು, ಅಂಜನಾದ್ರಿ ರಕ್ತ ಬಂಡಾರ ಸಿಬ್ಬಂದಿಯವರು, ಆಶಾ ಕಾರ್ಯಕರ್ತರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿಯವರು, ಗ್ರಾಮದ ಎಲ್ಲಾ ಸಮುದಾಯದ ಯುವಕ ಮಂಡಳಿಯವರು, ಮಹಿಳೆಯರು ಭಾಗಿಯಾಗಿದ್ದರು.
