ಹಿಂದೂ ಮುಸ್ಲಿಂ ಸೇರಿ ಮಾಡುವ
ತ್ಯಾಗ ಬಲಿದಾನ ಎರಡು ಕೂಡುವ
ಸರ್ವರೂ ಕೂಡಿ ನಲಿದು ಸಂಭ್ರಮಿಸುವ
ಜಾತಿ ಬೇದ ಎಲ್ಲವನ್ನು ತೋರೆಯುವ
ಮನೆಯಲ್ಲಿ ಚೋಂಗಿಯ ಮಾಡಿ ಆಚರಿಸುವರು
ಅಗ್ನಿ ಕುಂಡದಲಿ ಬೆಂಕಿಯ ಹಾಕುವರು
ದೇವರಿಗೆ ಸಕ್ಕರೆಯ ನೈವೇದ್ಯ ಮಾಡುವರು
ಬೇದ ಭಾವವ ತೊರೆದು ಪೂಜಿಸುವರು
ಶೋಕದ ಸಂಕೇತದ ಹಬ್ಬವು ಆಗಿದೆ
ಹುಸೇನ್ಅಲಿ ಮರಣದ ಸೂಚಕ ಇದಾಗಿದೆ
ಮುಸ್ಲಿಂ ಬಾಂಧವರಿಗೆ ಪೂರ್ವಜರ ನೆನಪಾಗಿದೆ
ಎಲ್ಲರೂ ಒಟ್ಟು ಗೂಡು ಆಚರಿಸಬೇಕಾಗಿದೆ
ಊರಿನ ತುಂಬಾ ದೇವರು ಮೆರವಣಿಗೆಯು
ಎಲ್ಲರ ಮನೆಯಿಂದ ದೇವರಿಗೆ ಸಕ್ಕರೆಯು
ಸಂತಸದಿ ನೆನೆದು ದೈವದ ಸ್ಮರಣೆಯು
ಮೊಹರಂ ಹಬ್ಬದ ವಿಶೇಷ ಆಚರಣೆಯು
-ಚಂದು ವಾಗೀಶ ದಾವಣಗೆರೆ