ಕೊಪ್ಪಳ/ಕುಷ್ಟಗಿ:ನೀಡ್ ಬೇಸ್ ಇಂಡಿಯಾ ಸಂಸ್ಥೆ ಬೆಂಗಳೂರ ಇವರು ಹನುಮಸಾಗರದ 13ನೇ ವಾರ್ಡಿನ ಅಂಗನವಾಡಿ ಕೇಂದ್ರ-1ರಲ್ಲಿ ಪೆನ್ಸಿಲ್, ರಬ್ಬರ್,ಕಂಪಾಸ್ ಬಾಕ್ಸ್ ಮತ್ತು ಡ್ರಾಯಿಂಗ್ ಶೀಟ್ ಕಲಿಕಾ ಸಾಮಗ್ರಿಗಳನ್ನು ಅಂಗನವಾಡಿಯ ಬಾಲ ಮಕ್ಕಳಿಗೆ ವಿತರಿಸಲಾಯಿತು.ಸಂಸ್ಥೆಯ ಫೀಲ್ಡ್ ಕೋ-ಆರ್ಡಿನೇಟರ್ ಶ್ರೀ ವೆಂಕಟೇಶ ಬಸೂದೆ ಮತ್ತು ಸ್ಥಳೀಯ ಕಲಾವಿದರಾದ ಸುನಿಲ್ ಬಸೂದೆ,ಸಂಸ್ಥೆಯ ಟೈಲರಿಂಗ್ ವಿಭಾಗದ ಮುಖ್ಯಸ್ಥರು ಶ್ರೀಮತಿ ಬಸಮ್ಮ ಉದ್ದಾರ್,ಶ್ರೀಮತಿ ಶಾಂತಾ ಸೂಡಿ,ಅಂಗನವಾಡಿ ಕೇಂದ್ರದ ಶಿಕ್ಷಕಿ ಶ್ರೀಮತಿ ಶಿವಮ್ಮ ಉದ್ಧಾರ ಹಾಗೂ ಸಹಾಯಕಿ ಶ್ರೀಮತಿ ರೇಣುಕಾ ಬಡಿಗೇರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
