ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಂಪಾದಕರ ನಿರ್ಲಕ್ಷ್ಯ ಪತ್ರಿಕಾ ವಿತರಕರ ಆಕ್ರೋಶ.

ಶಿವಮೊಗ್ಗ: ಪತ್ರಿಕೋದ್ಯಮದ ಬೆಳವಣಿಗೆಗೆ ಸಂಪಾದಕರು ಮುದ್ರಕರು ಪ್ರತಿಯೊಂದು ಕೆಲಸ ಮಾಡುವವರು ಹೇಗೆ ಮುಖ್ಯವೋ ಅದಕ್ಕಿಂತ ಮಿಗಿಲಾದವರು ಪತ್ರಿಕಾ ವಿತರಕರು ಒಂದು ಪತ್ರಿಕೆ ಬೆಳೆಯಲು ಅಭಿವೃದ್ಧಿ ಹೊಂದಲು ಸಮಾಜದಲ್ಲಿ ಹೆಸರು ಮಾಡಲು ಮನೆ ಮನೆ ತಲುಪಿಸಲು ಪತ್ರಿಕಾ ವಿತರಕರೇ ಪ್ರಮುಖವಾದವರು ಅಂತಹ ಪತ್ರಿಕಾ ವಿತರಕರನ್ನು ರಾಜ್ಯ ಪತ್ರಿಕೆಗಳ ಸಂಪಾದಕರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ರಾಧಾ ಎನ್, ಮಾಲತೇಶ್ ರವರು ಸ್ನೇಹಿತ ವರದಿಗಾರರೊಂದಿಗೆ ತಮ್ಮ ನೋವಿನ ಆಕೋಶವನ್ನು ವಿತರಕರು ಅನುಭವಿಸುತ್ತಿರುವ ನೋವಿನ ಜಂಜಾಟದ ಮಾಹಿತಿಯನ್ನು ನೀಡಿದರು.

ಆರ್ಥಿಕ ಭದ್ರತೆ, ಸಾಮಾಜಿಕ ಭದ್ರತೆ ಇಲ್ಲದೆ ಮಳೆ ಗಾಳಿ ಚಳಿ ಎನ್ನದೇ ವರ್ಷದ 361 ದಿನಗಳು ಓದುಗರನ್ನ ತೃಪ್ತಿಪಡಿಸಲು ಮನೆಮನೆಗೂ ಹೋಗಿ ಪತ್ರಿಕೆಗಳನ್ನು ವಿತರಿಸುತ್ತಿರುವುದು ಸತ್ಯದ ಸಂಗತಿ. ಸಂಪಾದಕರುಗಳು ಪತ್ರಿಕೆ ಮನೆ ಮಾತಾಗಿ ಪ್ರಜ್ವಲ್ ಸಲೂ ಈ ಪತ್ರಿಕ ವಿತರಕರೇ ಕಾರಣ ಎಂಬುದನ್ನು ರಾಜ್ಯ ಪತ್ರಿಕೆಯ ಸಂಪಾದಕರು ಮರೆತಂತಿದೆ ಕನಿಷ್ಠ ಓಡಾಡಲು ಸೈಕಲ್ ಮಳೆಗಾಲದಲ್ಲಿ ನೂರಾರು ಜ್ವರಗಳನ್ನ ಎದುರಿಸುವ ಸಂದರ್ಭ ಬಂದರು ಆಶ್ಚರ್ಯವಿಲ್ಲ ಅದಕ್ಕಾಗಿ ಪತ್ರಿಕಾ ವಿತರಿಕರಿಗೆ ಕನಿಷ್ಠ ರೈನ್ ಕೋಟ್ ವಿ ತರಿಸಬೇಕೆಂದು ತಮ್ಮ ಆಕ್ರೋಶದ ನುಡಿಗಳನ್ನು ಹೊರ ಹಾಕಿದರು. ಈ ಕೂಡಲೇ ಸಂಪಾದಕ ಮಂಡಳಿಯವರು ಪತ್ರಿಕಾ ವಿತರಕರ ನೋವುಗಳಿಗೆ ಸ್ಪಂದಿಸಿ ಈ ಕೂಡಲೇ ರೈನ್ ಕೋರ್ಟ್ ಅನ್ನು ವಿತರಿಸಲು ಮುಂದಾಗ ಬೇಕೆಂದು ಪತ್ರಿಕಾ ವಿತರಕರ ಒಕ್ಕೋರೆಲ್ಲ ಧ್ವನಿಯಾಗಿ ಈ ಬೇಡಿಕೆಯನ್ನು ಮುಂದಿಟ್ಟಿದ್ದಾರೆ

ಒಂದು ಪತ್ರಿಕೆಯ ಭವಿಷ್ಯ ಪತ್ರಿಕಾ ವಿತರಕರ ಸೇವೆಯ ಮೇಲೆ ಅವಲಂಬನೆಯಾಗಿದೆ ಸುದ್ದಿಗಳನ್ನು ಲೇಖನಗಳನ್ನು ಓದುಗರ ಮನೆಗೂ ತಲುಪಿಸಿ ವಿಷಯ ಹಂಚುವುದರ ಜೊತೆಗೆ ಪತ್ರಿಕೆಯು ಉನ್ನತ ಮಟ್ಟಕ್ಕೆ ಹೋಗಲು ಕಾರಣಿ ಭೂತರೆ ಈ ಪತ್ರಿಕಾ ವಿತರಕರು. ಪತ್ರಿಕೆ ಹಂಚುವವರಿಲ್ಲದಿದ್ದರೆ ಪತ್ರಿಕಾ ರಂಗವೇ ಕ್ಷೀಣಿಸುತ್ತದೆ. ಅದರಲ್ಲೂ ಪೈಪೋಟಿಗಾಗಿ ದೃಶ್ಯ ಮಾಧ್ಯಮಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯುತ್ತಿದೆ. ಪತ್ರಿಕೆಯ ರಕ್ಷಣೆ ಆಗಬೇಕಾದರೆ ಸಂಪಾದಕರು, ಪತ್ರಕರ್ತರು ಪತ್ರಿಕಾ ವಿತರಕರು ಒಂದುಗೂಡಿ ಶ್ರಮಿಸಿದರೆ ಮಾತ್ರ ಸಾಧ್ಯ ಈ ಕೂಡಲೇ ವಿತರಕರ ನೋವುಗಳಿಗೆ ಅನುಭವಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಪತ್ರಿಕಾ ವಿತರಕರ ಒಕ್ಕೂಟನೆ ಈ ಮೂಲಕ ಒತ್ತಾಯಿಸುತ್ತಿದೆ.
ಪತ್ರಿಕಾ ದಿನಾಚರಣೆಯ ಈ ಸುಸಂದರ್ಭದಲ್ಲಿ ವಿತರಕರ ನೋವನ್ನು ಆಲಿಸಿ ಅವರೊಂದಿಗೆ ಸ್ಪಂದಿಸಬೇಕೆಂಬುದು ಪತ್ರಿಕಾ ದಿನಾಚರಣೆಯ ವಿಶೇಷ ಆಗಬೇಕೆಂಬುದು ಹಗಲಿರುಳು ಮಳೆ ಬಿಸಿಲು ಚಳಿ ಎನ್ನದೆ ಮನೆ ಮನೆ ತಿರುಗಿ ಮನೆಯಲ್ಲಿರುವ ಓದುಗರ ಮನಸ್ಸನ್ನ ಪತ್ರಿಕೆಯ ಕಡೆಗೆ ಒಲಿಸಿಕೊಳ್ಳುವ ಪತ್ರಿಕಾ ವಿತರಕರಶ್ರಮ ಅನನ್ಯ ಅವರಿಗೆ ಸಹಕರಿಸುವುದು ಸಂಪಾದಕ ಮಂಡಳಿಯ ಕರ್ತವ್ಯವೆಂದು ಈ ಸಂದರ್ಭದಲ್ಲಿ ತಿಳಿಸಿದರು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ