ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರದಲ್ಲಿ ನೀಡ್ ಬೇಸ್ ಇಂಡಿಯಾ ಸಂಸ್ಥೆಯ ವತಿಯಿಂದ ಉಚಿತ ಕಂಪ್ಯೂಟರ್ ತರಬೇತಿ ಕೇಂದ್ರವನ್ನು ಉದ್ಘಾಟನೆ ಮಾಡಲಾಯಿತು. ಈ
ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ದೇವೇಂದ್ರ ತಾಳಿಕೋಟಿ ಎಸ್.ಬಿ.ಎಚ್ ಬ್ಯಾಂಕಿನ ವ್ಯವಸ್ಥಾಪಕರು, ಡಾ.ಶರಣು ಹವಾಲ್ದಾರ್, ನಾಗರಾಜ್ ಕಂದಗಲ್ ಬಿಜೆಪಿಯ ಮುಖಂಡರು,ಸಂಸ್ಥೆಯ ಸಹ ನಿರ್ದೇಶಕರು ಮಲ್ಲಿಕಾರ್ಜುನ್ ಬಡಿಗೇರ್ ಅವರು ಮಾತನಾಡಿ ಪಟ್ಟಣದ ಸುತ್ತಮುತ್ತಲಿನ ಯುವಕ ಯುವತಿಯರು ಈ ಸಂಸ್ಥೆಯ ಉಚಿತ ಕಂಪ್ಯೂಟರ್ ತರಬೇತಿಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ವಿನಂತಿಸಿಕೊಂಡರು. ಸಂಸ್ಥೆಯ ತಾಲೂಕಿನ ಸಂಯೋಜಕರಾದ ಮಹಾಂತೇಶ್ ಅಂಗಡಿ, ವೆಂಕಟೇಶ್ ಬಸೂದೆ, ಟೈಲರಿಂಗ್ ವಿಭಾಗದ ಶಿಕ್ಷಕಿಯರಾದ ಶ್ರೀಮತಿ ಬಸಮ್ಮ, ಶ್ರೀಮತಿ ಶಾಂತ ಸೂಡಿ, ಭಾಗ್ಯಶ್ರೀ ಪಾವಿ ಸರೋಜಮ್ಮ ಮದ್ನಾಳ, ಸುನಿಲ್ ಬಸೂದೆ, ಅಂಬಾಸ ಬಸವ, ಡಾ.ಯಮನೂರಪ್ಪ ಮನ್ನೇರಾಳ, ದುರ್ಗೇಶ್ ಮಿಯಾಪುರ್, ರಾಜು ಡ್ರೈವರ್ ಇನ್ನೂ ಅನೇಕರು ಇದ್ದರು.
