ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು
ಬಂದಿಹೆವು ಭಾವ ಬಂಧ ಬೆಸೆದು
ಎಲ್ಲಿಂದ ಎಲ್ಲಿಗೋ ಅಲೆದು ಅಲೆದು
ಯಾರೋ ಆಜ್ಞೆಗೆ ಮಣಿದು ದುಡಿದು
ಎಲ್ಲಿರುವುದೋ ನಮ್ಮ ಅನ್ನದ ಋಣ
ಅಲ್ಲಿಗೆ ಸಾಗಲೇಬೇಕು ಎಲ್ಲರ ಪಯಣ
ಜಗದ ಮೂಲೆ ಮೂಲೆಯೂ ಅವನ ತಾಣ
ದೇವನಾಜ್ಞೆಯೇ ನಡೆಯುವುದು ಪ್ರತಿಕ್ಷಣ
ಆಹಾ ದೂರದ ಬೆಟ್ಟವು ನುಣ್ಣಗೆ
ಇಡೀ ಹೋರಾಟ ಗೇಣು ಹೊಟ್ಟೆಗೆ
ತಿಳಿಯದು ಕೊನೆ ಮೊದಲು ಎಲ್ಲಿಗೆ
ಅಂತ್ಯ ಇರದು ಗುರಿ ಇರದ ದಾರಿಗೆ
ಕೆಲವೊಮ್ಮೆ ಸಹಜವು ವಿಷ ಘಳಿಗೆ
ಬಾರದಿರುವುದೆ ಒಮ್ಮೆ ಶುಭ ಗಳಿಗೆ
ಆ ಶಿವನು ಬಂದಾಗ ನಮ್ಮ ಬಳಿಗೆ
ಸಂತಸ ತರುವುದು ಅದೃಷ್ಟ ಬಾಳಿಗೆ
-ಬ್ಯಾಡನೂರು ವೀರಭದ್ರಪ್ಪ ಶಿವಶರಣ,ಎಸ್.,
ಪಾವಗಡ ತಾಲ್ಲೂಕು,ತುಮಕೂರು ಜಿಲ್ಲೆ.