ಈ ನೆಲದ ಕಾನೂನಿಗೆ ಗೌರವಿಸುವಂತೆ ಉಮೇಶ್ ಮುದ್ನಾಳ್ ಆಗ್ರಹ
ಯಾದಗಿರಿ: ಶನಿವಾರ ಮಧ್ಯಾಹ್ನ ಬಡ ರೈತ ರಾಮು ರಾಠೋಡ ರವರ ಮನೆ ದಿಢೀರ್ ಧ್ವಂಸಗೊಳಿಸಿರೋದಕ್ಕೆ ಅಧಿಕಾರಿಗಳು ಉತ್ತರ ನೀಡುವಂತೆ ಒತ್ತಾಯಿಸಿ ಸಾಮಾಜಿಕ ಹೋರಾಟಗಾರ ಉಮೇಶ್ ಕೆ ಮುದ್ನಾಳ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಬಡವರ ಮನೆ ದ್ವಂಸಗೊಳಿಸಿದ ಅಧಿಕಾರಿಗಳು ಪ್ರಭಾವಿಗಳ ಮನೆ ಕಣ್ಣಿಗೆ ಕಾಣಲಿಲ್ವಾ ಎಂಬಂತೆ ಹೀಗೆ ಸಾಲು ಸಾಲು ಪ್ರಶ್ನೆ ಮಾಡಿ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ. ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷನೊಬ್ಬ ಸರ್ಕಾರಿ ಜಾಗೆ ಒತ್ತುವರಿ ಮಾಡಿದ್ದು, ಅಧಿಕಾರಿಗಳ ಕಣ್ಣಿಗೆ ಕಾಣಲಿಲ್ಲ. ಒಬ್ಬ ಬಡ ರೈತನ ಮನೆ ದ್ವಂಸ ಮಾಡಿ ಅಧಿಕಾರಿಗಳು ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಉಮೇಶ್ ಮುದ್ನಾಳ್ ಜಿಲ್ಲಾಧಿಕಾರಿ, ಸಿಇಓ ಹಾಗೂ ತಹಶಿಲ್ದಾರರಿಗೆ ಸಾಲು ಸಾಲು ಹತ್ತು ಪ್ರಶ್ನೆ ಕೇಳಿ, ಮನವಿ ಸಲ್ಲಿಸಿದರು. ಒಬ್ಬ ಬಡ ರೈತನ ಮನೆ ಹೇಗೆ ಅಧಿಕಾರಿಗಳು ಧ್ವಂಸ ಮಾಡಿದ್ರು. ಅದೇ ರೀತಿಯಲ್ಲಿ ಒತ್ತುವರಿ ಮಾಡಿಕೊಂಡಿರುವ ಪ್ರಭಾವಿಗಳ ಮನೆಯನ್ನು ಅಧಿಕಾರಿಗಳು ದ್ವಂಸ ಮಾಡಬೇಕು. ಈ ನೆಲದ ಕಾನೂನು ಎಲ್ಲರಿಗೂ ಒಂದೆ ಇದೆ. ಉಳ್ಳವರಿಗೊಂದು, ಬಡವರಿಗೊಂದು ಅಂತ ಏನಿಲ್ಲ. ಕೂಡಲೇ ಅಧಿಕಾರಿಗಳು ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಜಾಗೆಯಲ್ಲಿ ಪ್ರಭಾವಿಗಳು ನಿರ್ಮಿಸಿರುವ ಮನೆಯನ್ನು ಧ್ವಂಸ ಮಾಡಬೇಕು ಅಂತ ಒತ್ತಾಯಿಸಿದ್ರು.
ಈ ಸಂದರ್ಭದಲ್ಲಿ ಬಸವರಾಜ ಇಟ್ಟಿಗಿ,ಬಸವರಾಜ ಬೋಜ್ಜಿ, ಹಣಮಂತ ಜಡಿ, ಯಂಕಪ್ಪ ಕೊಪ್ಪುರ,ಮಹಾದೇವ ಗೊರವರು, ಬಡ್ಡೆಪ್ಪ ಶಿರವಾಳ, ಖಾಸಿಂಸಾಬ, ರಾಮು ರಾಥೋಡ್, ಲಕ್ಷ್ಮಣ, ಚಂದ್ರು, ಪ್ರಭು, ಸುನೀಲ್, ಗೋಪಾಲ್, ಶರಣು,ಸಾಬಯ್ಯ, ವಿರೇಶ್, ಕಾಡಪ್ಪ, ಜಮಾಲ್, ವೆಂಕಟರೆಡ್ಡಿ, ರಪೀಕ್, ನವೀನ, ಬಾಬಾ ಖಾನ್, ಆಂಜನೇಯ, ರವಿ, ವಿಜಯಕುಮಾರ್, ತಾಯಪ್ಪ, ಬನ್ನಪ್ಪ, ಮಹೇಶ್, ಬನಶಂಕರ, ಗೌಸ್, ನರಸಿಂಹ, ದೇವು, ಬಾಗಣ್ಣ, ಮೈಬುಬೂಸಾಬ್ ಸೇರಿ ಅನೇಕರು ಉಪಸ್ಥಿತರಿದ್ದರು.
ವರದಿ: ಶಿವರಾಜ ಸಾಹುಕಾರ್ ವಡಗೇರಾ