ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮತ್ತು ಕುಕನೂರು ತಾಲೂಕಿನ ರೈತರು ಅಧಿಕ ಪ್ರಮಾಣದಲ್ಲಿ ಕೊತ್ತಂಬರಿ ಸೊಪ್ಪು ಬೆಳದಿದ್ದಾರೆ.
ಕೊತ್ತಂಬರಿ ಸೊಪ್ಪಿನ ಬೆಲೆ ದಿಢೀರ್ ಕುಸಿದಿದ್ದಕ್ಕೆ ಕರಮುಡಿ, ಬಂಡಿಹಾಳ, ತೊಂಡಿಹಾಳ, ಬಿನ್ನಾಳ, ಚಿಕ್ಕೇನಕೊಪ್ಪ, ಇಟಗಿ, ಸೋಂಪುರ,ಬನ್ನಿಕೊಪ್ಪ, ಮಾಳೆಕೊಪ್ಪ,ತಳಕಲ್, ಆಡೂರು, ರಾಜೂರು, ಸುತ್ತಮುತ್ತಲಿನ ಗ್ರಾಮದ ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೀಜ ಬಿತ್ತನೆ ಮಾಡಿ ಬೆಳೆದ ಕೋತ್ತಂಬರಿ ಸೊಪ್ಪಿನ್ನು ಹಾವೇರಿ, ಮಹಾರಾಷ್ಟ್ರದ ಎಕರೆಗೆ 2000ರಿಂದ 2500 ಬೆಲೆಯನ್ನು ಕೇಳುತ್ತಾರೆ.
ಹಾವೇರಿ ವ್ಯಾಪಾರಿಯಾದ ಸಮೀರ್, ಭಾಷಾ,ಮಾತನಾಡಿ ಮಹಾರಾಷ್ಟ್ರ ಮಾರುಕಟ್ಟೆಯ ಖರ್ಚು ವೆಚ್ಚದ ಬಗ್ಗೆ ಮಾತನಾಡಿದರು.
ಅಡುಗೆಗೆ ಕೊತ್ತಂಬರಿಯನ್ನು ಹಾಕಿದರೆ ರುಚಿ, ಕೊತ್ತಂಬರಿಯನ್ನು ಬಳಸಿಲ್ಲ ಅಂದರೆ ನಾಲಿಗೆ ರುಚಿ ಹತ್ತುವುದಿಲ್ಲ ಆದರೆ ಕೊತ್ತಂಬರಿ ಬೆಳೆದ ರೈತರಿಗೆ ಮಾರುಕಟ್ಟೆಯಲ್ಲಿ ಕಿಮ್ಮತ್ತಿಲ್ಲ ಇದಕ್ಕೆ ಸರಕಾರ ಸೂಕ್ತ ಬೆಲೆಯನ್ನು ಒದಗಿಸಿ ಕೊಡಬೇಕೆಂದು ರೈತರು ಒತ್ತಾಯಿಸಿದ್ದಾರೆ.
ವರದಿ: ಬಸವರಾಜ.ಕೆ.ಕಳಸಪ್ಪನವರ,ಯಲಬುರ್ಗಾ