ಕೊಪ್ಪಳ ಜಿಲ್ಲೆ ಯಲಬುರ್ಗಾ ಹಾಗೂ ಕುಕನೂರು ತಾಲೂಕಿನ ರೈತರು ತಮ್ಮ ಜಮೀನಿನಲ್ಲಿ ಅಧಿಕ ಪ್ರಮಾಣದಲ್ಲಿ ಕೊತ್ತಂಬರಿ ಸೊಪ್ಪನ್ನು ಬೆಳೆದಿದ್ದು,ಉತ್ತಮ ಆದಾಯದ ನಿರೀಕ್ಷೆಯಲ್ಲಿ ಇದ್ದ ರೈತರಿಗೆ ಕೊತ್ತಂಬರಿ ಸೊಪ್ಪಿನ ಬೆಲೆಯೂ ಕುಸಿತ ಕಂಡಿದೆ.
ಹಾವೇರಿ ಜಿಲ್ಲೆಯ ಅನೇಕ ಕೊತ್ತಂಬರಿ ಸೊಪ್ಪಿನ ವ್ಯಾಪಾರಿಗಳು ರೈತರು ಹೇಳಿದ ಬೆಲೆಗೆ ತೆಗೆದುಕೊಳ್ಳುತ್ತಿಲ್ಲ ಎಕರೆಗೆ 2000 ರಿಂದ 2500 ರೂಪಾಯಿಯನ್ನು ಕೇಳುತ್ತಿದ್ದಾರೆ, ರೈತರು ಜಮೀನಿಗೆ ಖರ್ಚು ಮಾಡಿದ ಆದಾಯವು ಕೂಡಾ ಸಿಗುತ್ತಿಲ್ಲ, ಕೊತ್ತುಂಬರಿ ಸೊಪ್ಪಿನ ವ್ಯಾಪಾರಿಗಳು ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಕಂಡಿದೆ ಅದಕ್ಕೆ ಕಡಿಮೆ ಬೆಲೆಗೆ ಖರೀದಿಯನ್ನು ಮಾಡುತ್ತಿದ್ದಾರೆ.ಅದಕ್ಕೆ ಸರಕಾರ ಈಗ ಕೂಡಲೇ ರೈತರು ಹಾಗೂ ಖರೀದಿದಾರರ ಸಹಾಯಕ್ಕೆ ಬರಬೇಕೆಂದು ಒತ್ತಾಯಿಸುತ್ತಿದ್ದಾರೆ.
ಕೊತ್ತಂಬರಿ ಸೊಪ್ಪಿನ ಬೆಲೆ ದಿಢೀರ ಕುಸಿದಿದ್ದಕ್ಕೆ ಬಂಡಿಹಾಳ, ತೊಂಡಿಹಾಳ, ಕರಮುಡಿ, ಬಿನ್ನಾಳ, ಚಿಕ್ಕೇನಕೊಪ್ಪ ಸೋಂಪುರ ,ಇಟಗಿ, ಬನ್ನಿಕೊಪ್ಪ, ಮಾಳೆಕೊಪ್ಪ, ತಳಕಲ, ಆಡೂರು ,ರಾಜೂರು ಸುತ್ತಮುತ್ತಲಿನ ಗ್ರಾಮದ ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೀಜ ಬಿತ್ತನೆ ಮಾಡಿ ಕಂಗಲಾಗಿದ್ದಾರೆ.
ಅಡುಗೆಗೆ ಕೊತ್ತಂಬರಿಯನ್ನು ಹಾಕಿದರೆ ರುಚಿ, ಕೊತ್ತಂಬರಿಯನ್ನು ಬಳಸಿಲ್ಲ ಅಂದರೆ ನಾಲಿಗೆಗೆ ರುಚಿ ಹತ್ತುವುದಿಲ್ಲ, ಆದರೆ ಕೊತ್ತಂಬರಿ ಬೆಳೆದ ರೈತರಿಗೆ ಮಾರುಕಟ್ಟೆಯಲ್ಲಿ ಕಿಮ್ಮತ್ತಿಲ್ಲ ಆದುದರಿಂದ ಸರ್ಕಾರ ಸೂಕ್ತ ಬೆಲೆಯನ್ನು ಒದಗಿಸಿ ಕೊಡಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ.
ಹಾವೇರಿಯ ಕೊತ್ತುಂಬರಿ ಸೊಪ್ಪಿನ ವ್ಯಾಪಾರಗಳಾದ ಸಮೀರ್ ಅಹ್ಮದ್, ಭಾಷಾ ಶೇಷಗಿರಿ,ಸಾದಿಕ್ ಇಟಗಿ, ಮಣ್ಣೀರ್ ತಹಸಿಲ್ದಾರ್ ಅನೇಕರು ಸೇರಿದಂತೆ ಈ ಸಂದರ್ಭದಲ್ಲಿ ಮಹಾರಾಷ್ಟ್ರ ಮಾರುಕಟ್ಟೆಯ ಖರ್ಚು ವೆಚ್ಚದ ಬಗ್ಗೆ ಮಾತನಾಡಿದರು.
ವರದಿ:ಬಸವರಾಜ್ ಕೆ ಕಳಸಪ್ಪನವರ,ಯಲಬುರ್ಗಾ