ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ನಂದಿಹಳ್ಳಿಯಲ್ಲಿ ಇಂದು ಜಿಲ್ಲಾ ಆಯುಷ್ ಇಲಾಖೆ ಕೊಪ್ಪಳ ವತಿಯಿಂದ ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಆಯುಷ್ಮಾನ್ ಆರೋಗ್ಯ ಮಂದಿರ ನಂದಿಹಳ್ಳಿ ಮತ್ತು ಪ್ರಾ.ಆ. ಕೇಂದ್ರ ಬೆನ್ನೂರು ಇವರ ಸಹಯೋಗದೊಂದಿಗೆ ಮಾರುತಿ ದೇವಸ್ಥಾನ ನಂದಿಹಳ್ಳಿಯಲ್ಲಿ ಒಟ್ಟು 112 ರೋಗಿಗಳಿಗೆ ಸಂಧಿವಾತ, ವಾತರೋಗ, ಮಲಬದ್ಧತೆ, ಮಧುಮೇಹ, ಇನ್ನಿತರ ರೋಗಗಳಿಗೆ ಉಚಿತ ಆಯುರ್ವೇದ ಚಿಕಿತ್ಸೆ ನೀಡಲಾಯಿತು, ಬಿಪಿ, ಶುಗರ್ ಪರೀಕ್ಷೆ ಮಾಡಲಾಯಿತು,
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಕಾರಿ ಆಯುರ್ವೇದ ಚಿಕಿತ್ಸಾಲಯದ ನಂದಿಹಳ್ಳಿಯ ಆಡಳಿತ ವೈದ್ಯಾಧಿಕಾರಿಗಳಾದ ಡಾ.ಪ್ರಹಲ್ಲಾದ ಆರ್. ಐಲಿ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಡಾ.ವೆಂಕಟೇಶ್ ದೇಶಪಾಂಡೆ ನಿವೃತ್ತ ವೈದ್ಯಾಧಿಕಾರಿಗಳು ಮತ್ತು ಹಾಲಿ ವೈದ್ಯರಾದ ಡಾ.ಶಿವಲಿಂಗಪ್ರಭು ಸುಂಕದ, ರೋಗಿಗಳ ತಪಾಸಣೆ ಮಾಡಿದರು. ಯೋಗ ತರಬೇತಿದರಾದ ಬಸವರಾಜ, ಜಯಶರಣಮ್ಮ ಗ್ರಾಮ ಪಂಚಾಯತ್ ಸದಸ್ಯರಾದ ಹನುಮೇಶ್, ಊರಿನ ಹಿರಿಯರಾದ ಪಂಪನಗೌಡ, ಮಲ್ಲನಗೌಡ, ಮಂಜಪ್ಪ ಗೌಡ, ಗೌಡಕಿ ಈರಪ್ಪ, ಗ್ರಾಮ ಪಂಚಾಯತಿ ಬೆನ್ನೂರ ಕಾರ್ಯದರ್ಶಿ ವೀರೇಶ್, ಪ್ರಾ. ಆ. ಕೇಂದ್ರದ ಹಿರಿಯ ಮೇಲ್ವಿಚಾರಕರಾದ ಪಂಪಾಪತಿ, ಸಿಎಚ್ಒ ಮಲ್ಲಿಕಾರ್ಜುನ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆ ರತ್ನಮ್ಮ,ಶರಣಬಸವ, ಉಪಸ್ಥಿತರಿದ್ದರು.ಹಿರಿಯ ನಾಗರಿಕರು ಈ ಶಿಬಿರದ ಉಪಯೋಗ ಪಡೆದುಕೊಂಡರು.
ವರದಿ:ಹನುಮೇಶ ಭಾವಿಕಟ್ಟಿ