ಕೊಪ್ಪಳ: ಆನ್ಲೈನ್ ಲ್ಲಿ ಬಹಳ ವಂಚನೆಗಳು ಆಗುತ್ತಿವೆ. ಆದ್ದರಿಂದ ನೀವು ಜಾಗೃತಿಯಿಂದ ಇರಬೇಕೆಂದು ಗದಗಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಮಹಾಂತೇಶ್ ಮಧೋಳ್ ಹೇಳಿದರು.
ಕೊಪ್ಪಳ ತಾಲ್ಲೂಕಿನ ಓಜನಹಳ್ಳಿ ಗ್ರಾಮದಲ್ಲಿ ಶುಕ್ರವಾರದಂದು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ನಾಲ್ಕನೇ ದಿನದ ಎನ್. ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಆನ್ ಲೈನ್ ವಂಚನೆ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು ಜನರು ಬುದ್ದಿವಂತರಾಗುತ್ತಿದ್ದಂತೆ ಕಳ್ಳತನ ಮಾಡುವ ಕಳ್ಳರು ಕೂಡಾ ಬುದ್ದಿವಂತರಾಗುತ್ತಿದ್ದಾರೆ. ಇಂದು ಎಟಿಎಂ ಗಳಲ್ಲಿ ವಂಚನೆಗಳು ಆಗುತ್ತಿವೆ. ಪಾಸ್ ವರ್ಡ್ ಗಳನ್ನು ಹಂಚಿಕೊಳ್ಳಬಾರದು. ಗಿಫ್ಫ್ ಗಳು ಬಂದಿವೆ ಅಂತ, ಕಾರ್ಡ್ ರಿನೀವಲ್ ಮಾಡಬೇಕು ಅಂತ, ನಿಮಗೆ ಫೋನ್ ಮಾಡಿ ಓಟಿಪಿ ಕೇಳುತ್ತಾರೆ. ಆಗ ನೀವು ಓಟಿಪಿ ಗಳನ್ನು ಕೊಡಬಾರದು. ಎಟಿಎಂ ಗಳಲ್ಲಿ ಬಹಳ ಜಾಗೃತಿಯಿಂದ ಹಣವನ್ನು ಡ್ರಾ ಮಾಡಬೇಕು. ಆ ಸಮಯದಲ್ಲಿ ಅಕ್ಕ ಪಕ್ಕದಲ್ಲಿ ಜನರನ್ನು ನೋಡಬೇಕು. ಆನ್ ಲೈನ್ ಶಾಪಿಂಗ್ ನಲ್ಲಿ ಕೂಡ ವಂಚನೆಗಳು ಹೆಚ್ಚಾಗುತ್ತವೆ. ಉದ್ಯೋಗಗಳು ಕೊಡುತ್ತೇವೆ ಅಂತ ನಿಮಗೆ ಫೋನ್ ಮಾಡಿ ನಿಮ್ಮ ಆದಾರ್ ಕಾರ್ಡ್ ಕೇಳಿ ನಿಮ್ಮ ವಯಕ್ತಿಕ ದಾಖಲೆಗಳನ್ನು ತಗೊಂಡು ನಿಮಗೆ ಮೋಸ ಮಾಡುತ್ತಾರೆ. ಇಂದು ನಕಲಿ ವೆಬ್ ಸೈಟ್ ಗಳು ಇವೆ. ನೀವು ಮೋಸ ಹೋಗಬೇಡಿ. ನಿಮಗೆ ಲಾಟರಿ ಬಂದಿದೆ, ನಿಮಗೆ ಲಕ್ಷ ರೂಪಾಯಿ ಬಂದಿದೆ ಅಂತ ನಿಮಗೆ ಇಮೇಲ್ ಬರುತ್ತಿವೆ. ಇವುಗಳಿಂದ ಹೆಚ್ಚು ಹೆಚ್ಚು ವಂಚನೆಗಳು ಆಗುತ್ತವೆ. ನಮಗೆ ಅರೋಗ್ಯ ಸರಿಯಿಲ್ಲ ಅಂತ ದುಡ್ಡು ಕೇಳುವುದು, ಸ್ವಲ್ಪ ಮೊಬೈಲ್ ಕೊಡಿ ಅಂತ ಮೊಬೈಲ್ ತಗೊಂಡು ಪಾಸ್ ವರ್ಡ್ ಕದಿಯುತ್ತಿದ್ದಾರೆ. ಇದರಿಂದ ಎಚ್ಚರಿಕೆಯಿಂದ ಇರಬೇಕು.
ನೀವು ಚನ್ನಾಗಿ ಓದಿ. ಈ ರೀತಿಯ ಎನ್. ಎಸ್ ಎಸ್ ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ನಿಮ್ಮ ವೈಯಕ್ತಿಕ ಬೆಳವಣಿಗೆ ಸಹಾಯವಾಗುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿರುವ ಕೊಪ್ಪಳದ ಕೌಶಲ್ಯ ಅಭಿವೃದ್ಧಿ ಅಧಿಕಾರಿಗಳಾದ ಆನಂದ್ ಹಳ್ಳಿ ಗುಡಿ ಮಾತನಾಡಿ ಜೀವನದಲ್ಲಿ ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕು. ತೊಂದರೆಗಳು ಬಂದಾಗ ಎದೆಗುಂದಬಾರದು ಕೌಶಲ್ಯಗಳು ಧನಾತ್ಮಕವಾಗಿರಬೇಕು,ಸಾಧಕರ ಜೀವನ ಚರಿತ್ರೆಗಳನ್ನು ಓದಬೇಕು.
ಎಲ್ಲರೂ ಸಮಯ ಪಾಲನೆ ಮಾಡಬೇಕು ಎಂದರು.
ಇನ್ನೊಬ್ಬ ಅತಿಥಿಯಾಗಿರುವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಜಾಫರ್ ಸಾಧಿಕ್ ಮಾತನಾಡಿ ಈ ರೀತಿಯ ಶಿಬರಾಗಳಲ್ಲಿ ಪಾಲ್ಗೊಳ್ಳಿ,ಇದರಿಂದ ನಿಮ್ಮ ಬೆಳವಣಿಗೆ ಚೆನ್ನಾಗಿ ಆಗುತ್ತದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿರುವ ಕನ್ನಡ ವಿಭಾಗದ ಸಹಾಯಕ ಪ್ರಧ್ಯಾಪಕ ಡಾ. ಹುಲಿಗೆಮ್ಮ ಮಾತನಾಡಿ ಜೀವನದಲ್ಲಿ ಶಿಸ್ತು ಮುಖ್ಯ ಅದನ್ನು ಅಳವಡಿಸಿಕೊಳ್ಳಿ ಶಿಬಿರಗಳ ಮಾಹಿತಿಯನ್ನು ಉಪಯೋಗಿಸಿಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ಶಿವ ಪ್ರಸಾದ್ ಹಾದಿಮನಿ, ಶಿವಪ್ಪ ಬಡಿಗೇರ, ಕಲ್ಲಯ್ಯ ಪೂಜಾರ್, ಡಾ. ನರಸಿಂಹ, ಜಾಫರ್ ಸಾಧಿಕ್, ನಿಂಗಪ್ಪ ಮತ್ತು ಅಂದಿಗೆಳಪ್ಪ ಇದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ನಿರೂಪಿಸಿ, ವಂದಿಸಿ, ಸ್ವಾಗತಿಸಿದರು.