ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಗಮನವಿಟ್ಟು ಆಲಿಸಬೇಕು ಆಗ ಮಾತ್ರ ಕಲಿಯುವುದಕ್ಕೆ ಸಾಧ್ಯ:ಶಂಕರಯ್ಯ ಅಬ್ಬಿಗೇರಿ ಮಠ

ಕೊಪ್ಪಳ:ಗಮನವಿಟ್ಟು ಅಲಿಸಬೇಕು ಆಗ ಮಾತ್ರ ಕಲಿಯುವುದಕ್ಕೆ ಸಾಧ್ಯವೆಂದು ಇರಾಕಲಗಡ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಶಂಕರಯ್ಯ ಅಬ್ಬಿಗೇರಿ ಮಠ ಹೇಳಿದರು.
ಕೊಪ್ಪಳ ತಾಲ್ಲೂಕಿನ ಓಜನಹಳ್ಳಿ ಗ್ರಾಮದಲ್ಲಿ ಶನಿವಾರದಂದು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎನ್. ಎಸ್. ಎಸ್ ವಾರ್ಷಿಕ ವಿಶೇಷ ಶಿಬಿರದ ಐದನೇ ದಿನದ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.

ಇಂದು ಮಹಿಳೆಯರಿಗೆ ವಿಶೇಷ ಸೌಲಭ್ಯಗಳಿವೆ ಅವುಗಳನ್ನು ನೀವು ಉಪಯೋಗ ಮಾಡಿಕೊಳ್ಳಿ. ಇಂದು ಹೆಚ್ಚು ಸ್ಪರ್ಧೆ ಇದೆ. ಇಂದು ಪ್ರತಿಯೊಂದು ಉದ್ಯೋಗಗಳು ಸ್ಪರ್ಧೆ ಕೇಂದ್ರೀಕೃತವಾಗಿವೆ. ಇಂದು ಉದ್ಯೋಗಗಳಿಗೆ ವ್ಯವಸ್ಥಿತವಾಗಿ ತಯಾರಿ ಮಾಡಿಕೊಂಡು ಪರೀಕ್ಷೆ ಬರೆಯುವವರು ಶೇ. 25 ರಷ್ಟು ಮಾತ್ರ.ನೀವು ಪರೀಕ್ಷೆಗಳಿಗೆ ನೆನೆಪಿಡುವ ತಂತ್ರಗಳನ್ನು ಕಲಿಯಬೇಕು. ನೆನುಪುಯಿದ್ದರೆ ಸಾಕು ಯಶಸ್ವಿಯಾಗಬಹುದು.
ಗ್ರಹಿಕೆ ಇರಬೇಕು. ನಾವು ಹೆಚ್ಚಾಗಿ ಯಾವುದನ್ನೂ ಓದುತ್ತೇವೋ ಅದು ಚನ್ನಾಗಿ ನೇನುಪೀರುತ್ತವೆ. ತರಗತಿಗಳಲ್ಲಿ ಗಮನವಿಟ್ಟು ಕೇಳಬೇಕು. ಗಮನವಿಟ್ಟು ಓದಬೇಕು.
ಅಲಿಸಬೇಕು ಆಗ ಮಾತ್ರ ಕಳಿಯುವುದಕ್ಕೆ ಸಾಧ್ಯ. ಹೆಚ್ಚು ವಿಷಯಗಳನ್ನು ನೋಡಬೇಕು. ಆಗ ಅದು ಸುಲಭವಾಗಿ ಅರ್ಥವಾಗುತ್ತದೆ. ನಿಮಗೆ ಸಂವೇಧನೆಯಿರಬೇಕು. ಗಮನವಿಟ್ಟು ನೋಡಿದಾಗ ಮಾತ್ರ ಅದನ್ನು ಕಲಿಯುವುದಕ್ಕೆ ಸಾಧ್ಯ. ಪದೇ ಪದೇ ಓದಬೇಕು. ಆಗ ನಿಮಗೆ ಪುಸ್ತಕದಲ್ಲಿ ಎಲ್ಲಿ ಏನು ಇದೆ ಅಂತ ಗೊತ್ತಾಗುತ್ತದೆ. ಓದುವುದರ ಮುಖಾಂತರ ಮೆದಳಿಗೆ ಹೆಚ್ಚು ಕೆಲಸ ಕೊಡಿ. ಪ್ರಾಥಮಿಕ ಶಾಲೆಯ ಪಠ್ಯ ಪುಸ್ತಕಗಳನ್ನು ಓದಿ. ಇವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲ ಆಗುತ್ತದೆ. ಎಲ್ಲರೂ ಆಸಕ್ತಿಯಿಂದ ಓದಿ. ನಾವು ವಿವೇಕದ ಮಾತನ್ನು ಕೇಳಬೇಕು. ನೆಪಗಳನ್ನು ಹೇಳಬಾರದು ಏಕಾಗ್ರತೆಯಿಂದ ಓದಿ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಶಿವಪ್ರಸಾದ್ ಹಾದಿಮನಿ ಪಾಲ್ಗೊಂಡು ಮಾತನಾಡಿ ಎಲ್ಲರೂ ಹೆಚ್ಚಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಿರಿ. ಅನುಭವಗಳಿಂದ ಪಾಠ ಕಲಿಯಿರಿ ಎಂದು ತಿಳಿಸಿದರು.

ಮುಖ್ಯ ಅತಿಥಿ ಇಂಗ್ಲಿಷ್ ವಿಭಾಗದ ಉಪನ್ಯಾಸಕ ಎಚ್. ಜಿ ಬೊಮ್ಮನಾಳ ಅವರು ಮಾತನಾಡಿ ಇದು ಸ್ಪರ್ಧೆತ್ಮಕ ಯುಗ. ಆದ್ದರಿಂದ ನೀವು ನಿರಂತರವಾಗಿ ಅಧ್ಯಯನ ಮಾಡಿ. ಆಗ ಮಾತ್ರ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಕಾಲೇಜಿನ ದೈಹಿಕ ಶಿಕ್ಷಣ ಭೋದಕ ಡಾ. ಪ್ರದೀಪ್ ಕುಮಾರ್ ಅವರು ಮಾತನಾಡಿ ಜೀವನದಲ್ಲಿ ಗುರಿ ಇರಬೇಕು. ಹಿರಿಯರಿಂದ ಮಾರ್ಗದರ್ಶನ ಪಡೆಯಬೇಕು. ಗುರಿಯಿದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯ. ದೃಢ ಸಂಕಲ್ಪ ಇರಬೇಕು. ಮನಸಿನ ಅಲಾರಾಂ ಜಾಗೃತಿಯಿಂದ ಇರಬೇಕು. ನಿಮ್ಮನ್ನು ಅಲಾರಾಂ ಎಬ್ಬಿಸಬಾರದು. ಅಲಾರಾಂ ಮೈಂಡ್ ಲ್ಲಿ ಇರಬೇಕು. ಮನಸ್ಸುಯಿದ್ದರೇ ಜೀವನದಲ್ಲಿ ಸಾಧನೆ ಮಾಡಬಹುದು ಎಂದರು.
ಕಾರ್ಯಕ್ರಮದಲ್ಲಿ ಶಿವಪ್ರಸಾದ್ ಹಾದಿಮನಿ ಅವರು ಕವನ ಮತ್ತು ಶಾಹಿರಿಗಳನ್ನು ಓದಿದರು.

ವೇದಿಕೆಯಲ್ಲಿ ಎನ್ ಎಸ್. ಎಸ್ ನ ಸಹಾಯಕ ಶಿಬಿರಾಧಿಕಾರಿಗಳಾದ ಶಿವಪ್ಪ ಬಡಿಗೇರ್, ಕಲ್ಲಯ್ಯ ಪೂಜರ್, ಎಚ್. ಜಿ ಬೊಮ್ಮನಾಳ ಡಾ. ನರಸಿಂಹ ಇದ್ದರು.
ಕಾರ್ಯಕ್ರಮವನ್ನು ಕವಿತ ನಿರೂಪಿಸಿದರು.ಪೂಜಾ, ವಿಜಯಲಕ್ಷ್ಮಿ ಪ್ರಾರ್ಥನೆ ಗೀತೆ ಹಾಡಿದರು. ರತ್ನ ಸ್ವಾಗತಸಿದರು. ಸರೋಜ ವ್ಯಕ್ತಿ ಪರಿಚಯ ಮಾಡಿದರು.ಪವಿತ್ರ ವಂದಿಸಿದರು..

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ