ಪುಸ್ತಕಗಳು ಓದುವುದರಿಂದ ಹೆಚ್ಚು ಜ್ಞಾನ ಬರುತ್ತದೆ ಹೊರತು ಸಾಮಾಜಿಕ ಜಾಲತಾಣಗಳಿಂದಲ್ಲವೆಂದು ಪತ್ರಕರ್ತ ಜಿ. ಎಸ್. ಗೋನಾಳ್ ಹೇಳಿದರು
ಕೊಪ್ಪಳ ತಾಲ್ಲೂಕಿನ ಓಜನಹಳ್ಳಿ ಗ್ರಾಮದಲ್ಲಿ ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎನ್. ಎಸ್. ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಯುವ ಜನಾಂಗದ ಮೇಲೆ ಸಾಮಜಿಕ ಜಾಲತಾಣಗಳ ಪ್ರಭಾವದ ಕುರಿತು ಉಪನ್ಯಾಸದಲ್ಲಿ ಮಾತನಾಡಿದರು.
ಮಹಿಳೆಯರು ಬಹಳ ಕ್ರಿಯಾಶೀಲರು ಮತ್ತು ಶ್ರಮಜೀವಿಗಳು.ಸಾಮಾಜಿಕ ಜಾಲತಾಣಗಳು ಇಂದು ಪ್ರಭಾವಶಾಲಿಯಾಗಿವೆ. ಇವುಗಳನ್ನು ಮಿತವಾಗಿ ಬಳಸಿಕೊಳ್ಳಬೇಕು. ಇದೊಂದು ಮನೋವ್ಯಾದಿ ಇದ್ದಂತೆ. ನಾವು ಹಿರಿಯರನ್ನು ಗೌರವಿಸಬೇಕು. ಸಾಮಾಜಿಕ ಜಾಲತಾಣಗಳು ಬಂದಾಗನಿಂದ ಪುಸ್ತಕಗಳು ಓದುವ ಹವ್ಯಾಸ ಕಡಿಮೆ ಆಗಿದೆ. ಈ ಕಲ್ಯಾಣ ಕರ್ನಾಟಕ ಭಾಗವು ಸಂಸ್ಕೃತಿ ತುಂಬಿದ ನಾಡು. ವಿದ್ಯಾರ್ಥಿಗಳು ಹೆಚ್ಚು ಕ್ರಿಯಾಶಿಲಾರಾಗಿರಬೇಕು. ಈ ಶಿಬಿರಗಳಲ್ಲಿ ಪಾಲ್ಗೊಂಡು ಸೇವಾ ಮನೋಭಾವನೆ ಬೆಳಸಿಕೊಳ್ಳಬೇಕು. ನೀವು ಹೆಚ್ಚು ಅಧ್ಯಯನ ಮಾಡಬೇಕು. ಪ್ರಜ್ಞಾವಂತರಗಿರಬೇಕು. ದೃಢವಾದ ನಿರ್ಧಾರ ಮಾಡಿ. ಆಗ ಯಶಸ್ವಿ ಆಗುತ್ತೀರಿ. ದೇಶವನ್ನು ಕಟ್ಟಿ ಬೆಳಸಬೇಕು ಅಚಲವಾದ ಗುರಿ ಇಟ್ಟುಕೊಳ್ಳಬೇಕು. ನಮ್ಮ ತಂದೆ ತಾಯಿಗಳಿಗೆ ಒಳ್ಳೆಯ ಮಗಳಾಗಿ ಜೀವನ ಮಾಡಿರಿ ಇದು ಶರಣರ ನಾಡು. ಅವರು ವಚನಗಳನ್ನು ಬಿಟ್ಟು ಹೋಗಿದ್ದಾರೆ ಅವರ ವಚನಗಳನ್ನು ಓದಬೇಕು ಇವುಗಳನ್ನು ಜೀವನದಲ್ಲಿ ಅಳವಡಿಕೊಳ್ಳಬೇಕು. ನಾವು ಸಾಮರಸ್ಯವನ್ನು ಉಳಿಸಿ ಬೆಳಸಬೇಕು.ಸಾಮಾಜಿಕ ಜಾಲತಾಣಗಳ ಜೊತೆ ಒಳ್ಳೆಯ ಪುಸ್ತಕಗಳನ್ನು ಓದಬೇಕು.
ಹೇಚ್ಚಾಗಿ ಓದುವ ಹವ್ಯಾಸ ಬೆಳಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಡಾ. ನರಸಿಂಹ, ಕಲ್ಲಯ್ಯ ಪೂಜರ್, ಶಿವಪ್ಪ ಬಡಿಗೇರ್ ಮಾತನಾಡಿದರು.
ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಭೋಗೋಳಶಾಸ್ತ್ರ ಉಪನ್ಯಾಸಕ ನಿಂಗಜ್ಜ ಸೋಂಪುರ್ ಅವರು ಮಾತನಾಡುತ್ತಾ ಎನ್. ಎಸ್ ಎಸ್ ಅಂದ್ರೆ ಸೇವೆ ಎಂದರ್ಥ ಇದು ಗಾಂಧೀಜಿಯವರ ಕನಸು ಆಗಿತ್ತು ಹಳ್ಳಿಗಳಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಪರಿಸರ, ಅರೋಗ್ಯ ಮತ್ತು ಸ್ವಚ್ಛತೆ ಬಗ್ಗೆ ಅರಿವು ಮೋಡಿಸಬೇಕು ಎಂದು ತಿಳಿಸಿದರು.
ನೇತ್ರಾ ಪ್ರಾರ್ಥನೆ ಗೀತೆ ಹಾಡಿದರು. ಪುಷ್ಪಾ ಸ್ವಾಗತಿಸಿದರು.ನೇತ್ರ ವಂದಿಸಿದರು, ಅಶ್ವಿನಿ ವ್ಯಕ್ತಿ ಪರಿಚಯ ಮಾಡಿದರು..